Jio ಟೆಲಿಕಾಂನ 355 ರೂ.ಗಳ ಯೋಜನೆಯಲ್ಲಿ 25GB ಡೇಟಾ ಸೇರಿ ಆಕರ್ಷಕ ಪ್ರಯೋಜನಗಳು!
ಜಿಯೋದ ಈ ಯೋಜನೆಯು ಅಗ್ಗದ ಬೆಲೆಯಲ್ಲಿ ಆಕರ್ಷಕ ಎನಿಸಿದೆ
ಜಿಯೋದ 355 ರೂ.ಗಳ ಯೋಜನೆಯಲ್ಲಿ 30 ದಿನಗಳ ಮಾನ್ಯತೆ ಲಭ್ಯ
ಜಿಯೋ ಟೆಲಿಕಾಂನ 355 ರೂ.ಗಳ ಪ್ಲಾನ್‌ನಲ್ಲಿ 25GB ಡೇಟಾ ಸೌಲಭ್ಯ ಸಿಗುತ್ತದೆ
ಜನಪ್ರಿಯ ಟೆಲಿಕಾಂ ಎಂದೇ ಬಿಂಬಿತವಾಗಿರುವ Jio ಕಂಪನಿಯು ಭಿನ್ನ ಪ್ರೀಪೇಯ್ಡ್ ಯೋಜನೆಗಳ ಪಟ್ಟಿಯನ್ನು ಒಳಗೊಂಡಿದೆ. ಅದೇ ರೀತಿ ಜಿಯೋ ಬಳಕೆದಾರರಿಗಾಗಿ ಕೆಲವು ಅಗ್ಗದ ಬೆಲೆಯ ಯೋಜನೆಗಳ ಆಯ್ಕೆ ಸಹ ನೀಡಿದೆ. ಆ ಪೈಕಿ ಜಿಯೋ ಟೆಲಿಕಾಂನ 355 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಕಡಿಮೆ ದರದಲ್ಲಿ ಆಕರ್ಷಕ ಪ್ಲಾನ್ ಆಗಿ ಕಾಣಿಸಿಕೊಂಡಿದೆ. ಈ ಯೋಜನೆಯು ಜಿಯೋ ಫ್ರೀಡಂ ಪ್ಲಾನ್ ಆಗಿದೆ. ಅಂದಹಾಗೆ ಈ ಪ್ರೀಪೇಯ್ಡ್ ಯೋಜನೆಯು ಒಟ್ಟು 25GB ಡೇಟಾ ಪ್ರಯೋಜನದ ಜೊತೆಗೆ 30 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ. ಹಾಗಾದರೆ ಜಿಯೋ ಟೆಲಿಕಾಂನ 355 ರೂ.ಗಳ ರೀಚಾರ್ಜ್ ಯೋಜನೆಯ ಹಾಗೂ ಇತರೆ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್: ಹೊಸ 5.2.4 True Dolby Atmos ಸೌಂಡ್‌ಬಾರ್ ಮೇಲೆ ಭರ್ಜರಿ ಡೀಲ್.!
Jio ಸಂಸ್ಥೆಯ 355 ರೂ.ಗಳ ಪ್ಲಾನ್ ಮಾಹಿತಿ
ಜಿಯೋ ಕಂಪನಿಯ 355 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್ ಯೋಜನೆಯು ಜಿಯೋ ಫ್ರೀಡಂ ಪ್ಲಾನ್ ಆಗಿದ್ದು, ಒಟ್ಟು 25GB ಡೇಟಾ ಪ್ರಯೋಜನ ಲಭ್ಯ ಸಿಗಲಿದೆ. ಅಲ್ಲದೇ ಈ ಪ್ರಿಪೇಯ್ಡ್ ಪ್ಲಾನಿನಲ್ಲಿ ವಾಯ್ಸ್ ಕರೆಯ ಸೌಲಭ್ಯ ಹಾಗೂ ಪ್ರಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ. ಈ ಯೋಜನೆಯಲ್ಲಿ JioTV ಹಾಗೂ JioAICloud ಚಂದಾದಾರಿಕೆ ಲಭ್ಯ.

ಇತರೆ ಆಕರ್ಷಕ ಯೋಜನೆಗಳ ಮಾಹಿತಿ
ಜಿಯೋ ಟೆಲಿಕಾಂನ 329 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ ಸಿಗಲಿದ್ದು, ಒಟ್ಟು ವ್ಯಾಲಿಡಿಟಿಗೆ 42GB ಡೇಟಾ ಪ್ರಯೋಜನ ಲಭ್ಯ ಸಿಗಲಿದೆ. ಅಲ್ಲದೇ ಈ ಪ್ರಿಪೇಯ್ಡ್ ಪ್ಲಾನಿನಲ್ಲಿ ವಾಯ್ಸ್ ಕರೆಯ ಸೌಲಭ್ಯ ಹಾಗೂ ಪ್ರಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ. ಈ ಯೋಜನೆಯಲ್ಲಿ JioSaavn Pro, JioTV ಹಾಗೂ JioAICloud ಚಂದಾದಾರಿಕೆ ಲಭ್ಯ.
ಜಿಯೋ ಕಂಪನಿಯ 319 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ ಸಿಗಲಿದೆ. ಅಲ್ಲದೇ ಈ ಪ್ರಿಪೇಯ್ಡ್ ಪ್ಲಾನಿನಲ್ಲಿ ವಾಯ್ಸ್ ಕರೆಯ ಸೌಲಭ್ಯ ಹಾಗೂ ಪ್ರಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ. ಈ ಪ್ರೀಪೇಯ್ಡ್ ಪ್ಲಾನ್‌ನಲ್ಲಿ ಹೆಚ್ಚುವರಿಯಾಗಿ JioTV ಹಾಗೂ JioAICloud ಚಂದಾದಾರಿಕೆ ಲಭ್ಯ.
ಜಿಯೋ ಸಂಸ್ಥೆಯ 299 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಲಭ್ಯ. ಈ ರೀಚಾರ್ಜ್ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ ಸಿಗಲಿದ್ದು, ಒಟ್ಟು ವ್ಯಾಲಿಡಿಟಿಗೆ 42GB ಡೇಟಾ ಪ್ರಯೋಜನ ಲಭ್ಯ ಸಿಗಲಿದೆ. ಅಲ್ಲದೇ ಈ ಪ್ರಿಪೇಯ್ಡ್ ಪ್ಲಾನಿನಲ್ಲಿ ವಾಯ್ಸ್ ಕರೆಯ ಸೌಲಭ್ಯ ಹಾಗೂ ಪ್ರಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಹ ಲಭ್ಯ. ಈ ಯೋಜನೆಯಲ್ಲಿ JioSaavn Pro, JioTV ಹಾಗೂ JioAICloud ಚಂದಾದಾರಿಕೆ ಲಭ್ಯ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile