Jio ಟೆಲಿಕಾಂನ ಈ ಪ್ಲಾನಿನಲ್ಲಿ ಪ್ರತಿದಿನ 3GB ಡೇಟಾ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸೌಲಭ್ಯ

HIGHLIGHTS

ಜಿಯೋ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 3GB ಡೇಟಾ ಸೌಲಭ್ಯ

ಜಿಯೋ ಕಂಪನಿಯ 1199 ರೂ.ಗಳ ಪ್ಲಾನ್‌ನಲ್ಲಿ 84 ದಿನಗಳ ವ್ಯಾಲಿಡಿಟಿ

ಜಿಯೋ ಸಂಸ್ಥೆಯ ಈ ಯೋಜನೆಯಲ್ಲಿ ಓಟಿಟಿ ಸೌಲಭ್ಯ ದೊರೆಯುತ್ತದೆ

Jio ಟೆಲಿಕಾಂನ ಈ ಪ್ಲಾನಿನಲ್ಲಿ ಪ್ರತಿದಿನ 3GB ಡೇಟಾ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸೌಲಭ್ಯ

ಜನಪ್ರಿಯ Jio ಟೆಲಿಕಾಂ ಕಂಪನಿಯು ಭಿನ್ನ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿರುವ ಜಿಯೋ ಟೆಲಿಕಾಂ ಅಧಿಕ ಡೇಟಾ, ಓಟಿಟಿ ಯೋಜನೆಗಳ ಲಿಸ್ಟ್‌ ಸಹ ಒಳಗೊಂಡಿದೆ. ಜಿಯೋ ಟೆಲಿಕಾಂನ ಯೋಜನೆಗಳ ಲಿಸ್ಟ್‌ನಲ್ಲಿ ಅಗ್ಗದ ಬೆಲೆಯಲ್ಲಿ ದೈನಂದಿನ ಡೇಟಾ ಸೌಲಭ್ಯ ಪಡೆದ ಯೋಜನೆಗಳು ಸೇರಿವೆ. ಅದಾಗ್ಯೂ, ಆಕರ್ಷಕ ವ್ಯಾಲಿಡಿಟಿ ಜೊತೆಗೆ ಪ್ರತಿದಿನ ಡೇಟಾ ಸೌಲಭ್ಯ ಪಡೆದಿರುವ ಪ್ರೀಪೇಯ್ಡ್‌ ಯೋಜನೆಗಳು ಬೇಡಿಕೆ ಪಡೆದಿವೆ. ಆ ಪೈಕಿ ಜಿಯೋ ಟೆಲಿಕಾಂನ 1199 ರೂ.ಗಳ ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆ ಬಜೆಟ್‌ ಬೆಲೆಯಲ್ಲಿ ಆಕರ್ಷಕ ಎನಿಸಿದೆ. ಈ ಬಜೆಟ್ ಬೆಲೆಯ ಯೋಜನೆಯು ಡೇಟಾ ಸೌಲಭ್ಯ ಪಡೆದುಕೊಂಡಿರುವ ಜೊತೆಗೆ 84 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ. ಹಾಗಾದರೆ ಜಿಯೋ ಟೆಲಿಕಾಂನ 1199 ರೂ.ಗಳ ಯೋಜನೆಯ ಹಾಗೂ ಇತರೆ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Realme Narzo Power ಬೆಲೆಯಲ್ಲಿ ಭಾರೀ ಇಳಿಕೆ! 10,001mAh ಬ್ಯಾಟರಿ ಸೌಲಭ್ಯ

Jio ಸಂಸ್ಥೆಯ 1199 ರೂ.ಗಳ ಯೋಜನೆ

ಜಿಯೋ ಟೆಲಿಕಾಂನ 1199 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್‌ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರಲಿದೆ. ಅಲ್ಲದೇ ಜಿಯೋ ಟಿವಿ, ಜಿಯೋ ಎಐ ಕ್ಲೌಡ್‌ ಚಂದಾದಾರಿಕೆ ಸಿಗಲಿದೆ.

Jio

ಇತರೆ 3GB ಡೇಟಾ ಯೋಜನೆಗಳ ಮಾಹಿತಿ

ಜಿಯೋ ಟೆಲಿಕಾಂನ 1799 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್‌ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರಲಿದೆ. ಹಾಗೆಯೇ ನೆಟ್‌ಫ್ಲಿಕ್ಸ್‌ ಓಟಿಟಿ ಚಂದಾದಾರಿಕೆ ಸೌಲಭ್ಯ ಲಭ್ಯವಾಗಲಿದೆ.

ಜಿಯೋ ಟೆಲಿಕಾಂನ 449 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್‌ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರಲಿದೆ. ಅಲ್ಲದೇ ಜಿಯೋ ಟಿವಿ, ಜಿಯೋ ಎಐ ಕ್ಲೌಡ್‌ ಚಂದಾದಾರಿಕೆ ಸಿಗಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile