Jio Plans: ಪ್ರತಿದಿನ 2GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳ ಆಫರ್ ಹೊಂದಿರುವ ಜಿಯೋ ಪ್ಲಾನ್‌ಗಳು

Jio Plans: ಪ್ರತಿದಿನ 2GB ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳ ಆಫರ್ ಹೊಂದಿರುವ ಜಿಯೋ ಪ್ಲಾನ್‌ಗಳು
HIGHLIGHTS

ಭಾರತದದಲ್ಲೇ ನಂ 1 ಟೆಲಿಕಾಂ ಕಂಪೆನಿಯಾಗಿರುವ ರಿಲಯನ್ಸ್ ಜಿಯೋ

ಇದೀಗ ದೈನಂದಿನ 2GB ಡೇಟಾ ನೀಡುವ ಯೋಜನೆಗಳಿಗೆ ಸಾಕಷ್ಟು ಬೇಡಿಕೆಯಿದೆ

ಜಿಯೋ ಕೂಡ ಪ್ರತಿದಿನ 2GB ಡೇಟಾವನ್ನು ನೀಡುವ ಅನೇಕ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ.

ಭಾರತದದಲ್ಲೇ ನಂ 1 ಟೆಲಿಕಾಂ ಕಂಪೆನಿಯಾಗಿರುವ ರಿಲಯನ್ಸ್ ಜಿಯೋ ಅತಿ ಅಕೆಡಿಮೆ ಬೆಲೆಯಲ್ಲಿ ಅಧಿಕ ಡೇಟಾ ಮತ್ತು ಅನಿಯಮಿತ ಕರೆ ಪ್ರಯೋಜನ ನೀಡುವ ಯೋಜನೆಗಳನ್ನು ಪರಿಚಯಿಸಿ ಗಮನಸೆಳೆಯುತ್ತಿರುತ್ತದೆ. ಈ ಮೂಲಕ ಇದೀಗ ದೈನಂದಿನ 2GB ಡೇಟಾ ನೀಡುವ ಯೋಜನೆಗಳಿಗೆ ಸಾಕಷ್ಟು ಬೇಡಿಕೆಯಿದೆ ಇರುವುದರಿಂದ ಜಿಯೋ ಕೂಡ ಪ್ರತಿದಿನ 2GB ಡೇಟಾವನ್ನು ನೀಡುವ ಅನೇಕ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಹಾಗಾದರೆ ಪ್ರತಿದಿನ 2GB ಡೇಟಾ ಪ್ರಯೋಜನ ನೀಡುವ ಜಿಯೋ ಯೋಜನೆಗಳು ಯಾವುವು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

Jio

ಜಿಯೋ 2599 ರೂ ಪ್ರಿಪೇಯ್ಡ್ ಯೋಜನೆ

ಪ್ರತಿದಿನ 2GB ಡೇಟಾ ಪ್ರಯೋಜನ ನೀಡುವ ಜಿಯೋ 2599ರೂ. ಪ್ರಿಪೇಯ್ಡ್ ಯೋಜನೆಯು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ದೈನಂದಿನ 2GB ಡೇಟಾ ಜೊತೆಗೆ 10GB ಹೆಚ್ಚುವರಿ ಡೇಟಾ ಪ್ರಯೋಜನ ಕೂಡ ದೊರೆಯಲಿದೆ. ಅಲ್ಲದೆ ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಪ್ರಯೋಜನ ಸಿಗಲಿದೆ. ಅಲ್ಲದೆ ಇದು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡಲಿದೆ.

ಜಿಯೋ 888 ರೂ ಪ್ರಿಪೇಯ್ಡ್ ಯೋಜನೆ

ಪ್ರತಿದಿನ 2GB ಡೇಟಾ ಪ್ರಯೋಜನ ನೀಡುವ ಈ ಯೋಜನೆ 2GB ಡೇಟಾವನ್ನು 84 ದಿನಗಳ ಅವಧಿಗೆ 5GB ಹೆಚ್ಚುವರಿ ಡೇಟಾದೊಂದಿಗೆ ನೀಡುತ್ತದೆ ಇದು ಒಟ್ಟು 173GB ಡೇಟಾವನ್ನು ನೀಡುತ್ತದೆ. ಇದು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯೊಂದಿಗೆ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಗಳನ್ನು ಸಹ ನೀಡುತ್ತದೆ.

ಜಿಯೋ 666 ರೂ ಪ್ರಿಪೇಯ್ಡ್ ಯೋಜನೆ

ಈ ಯೋಜನೆ 56 ದಿನಗಳ ಮಾನ್ಯತೆಯನ್ನು ಹೊಂದಿದ್ದು ದೈನಂದಿನ 2GB ಡೇಟಾ ಪ್ರಯೋಜನವನ್ನು ನೀಡಲಿದೆ. ಇದು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯೊಂದಿಗೆ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಗಳನ್ನು ಸಹ ನೀಡುತ್ತದೆ.

ಜಿಯೋ 599 ರೂ ಪ್ರಿಪೇಯ್ಡ್ ಯೋಜನೆ

ಇನ್ನು 599ರೂ. ಪ್ರಿಪೇಯ್ಡ್ ಯೋಜನೆ ದಿನಕ್ಕೆ 2GB ಡೇಟಾವನ್ನು ನೀಡಲಿದ್ದು 84 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದಲ್ಲದೆ ಈ ಪ್ಲಾನ್‌ನಲ್ಲಿ ಅನಿಯಮಿತ ಕರೆ ಪ್ರಯೋಜನ ಸೇರಿದಂತೆ ದೈನಂದಿನ 100 SMS ಪ್ರಯೋಜನ ದೊರೆಯಲಿದೆ. ಇದು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಸಹ ನೀಡಲಿದೆ.

ಜಿಯೋ 444 ರೂ ಪ್ರಿಪೇಯ್ಡ್ ಯೋಜನೆ

ಜಿಯೋ 444ರೂ ಪ್ರಿಪೇಯ್ಡ್ ಯೋಜನೆ ನಿಮಗೆ 56 ದಿನಗಳ ಮಾನ್ಯತೆಯನ್ನು ನೀಡಲಿದೆ. ಈ ಪ್ಲಾನ್‌ನಲ್ಲಿ ನಿಮಗೆ ದೈನಂದಿನ 2GB ಡೇಟಾ ಅನಿಮಿತ ಕರೆ ಹಾಗೂ ಡೈಲಿ 100 SMS ಪ್ರಯೋಜನ ದೊರೆಯಲಿದೆ. ಅಲ್ಲದೆ ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯು ಸಿಗುತ್ತದೆ.

ಜಿಯೋ 249 ರೂ ಪ್ರಿಪೇಯ್ಡ್ ಯೋಜನೆ

ಈ ಯೋಜನೆಯು ನಿಮಗೆ ಕೇವಲ 28 ದಿನಗಳ ಮಾನ್ಯತೆಯನ್ನು ನೀಡಲಿದೆ. ಆದರೆ ಈ ಪ್ಲಾನ್‌ನಲ್ಲಿ ಸಹ ನೀವು ದೈನಂದಿನ 2GB ಡೇಟಾವನ್ನು ಪಡೆಯಬಹುದಾಗಿದೆ. ಜೊತೆಗೆ ಅನಿಯಮಿತ ಕರೆ ಪ್ರಯೋಜನ ದಿನನಿತ್ಯ 100 SMS ಪ್ರಯೋಜನ ಸಿಗಲಿದೆ. ಅಲ್ಲದೆ ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo