Reliance Jio Plans 2025: ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ಭಾರತೀಯ ದೂರಸಂಪರ್ಕ TRAI ಆದೇಶದ ಪ್ರಕಾರ ಜಿಯೋ ಕೇವಲ ವಾಯ್ಸ್ ಕರೆಗಳನ್ನು ಮಾತ್ರ ಸಪೋರ್ಟ್ ಮಾಡುವ ಈ ರಿಚಾರ್ಜ್ ಯೋಜನೆಗಳಲ್ಲಿ SMS ಪ್ರಯೋಜನಗಳೊಂದಿಗೆ ತನ್ನ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಜಿಯೋ ಎರಡು ಹೊಸ ಯೋಜನೆಗಳು 458 ರೂ ಮತ್ತು 1958 ರೂಗಳ ಪ್ಲಾನ್ ಪರಿಚಯಿಸಿದೆ. ಜಿಯೋದ ಈ ಕರೆ ಮತ್ತು SMS ಮಾತ್ರ ಯೋಜನೆಗಳಲ್ಲಿ ನೀವು ಇಂಟರ್ನೆಟ್ ಪಡೆಯುವುದಿಲ್ಲ. ಕೇವಲ ಹೆಚ್ಚಿನ ಕರೆ ಮತ್ತು SMS ಬಳಸುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಪ್ಲಾನ್ ಪರಿಚಯಿಸಲಾಗಿದೆ.
ಜಿಯೋದ ಆರಂಭಿಕ ಹಂತದ ವಾಯ್ಸ್ ಮತ್ತು SMS-ಮಾತ್ರ ಯೋಜನೆ 458 ರೂಗಳಿಂದ ಪ್ರಾರಂಭವಾಗುತ್ತದೆ. ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕರೆಗಳು ಮತ್ತು 1,000 SMS ಗಳನ್ನು 84 ದಿನಗಳ ಮಾನ್ಯತೆಯೊಂದಿಗೆ ನೀಡಲಾಗುತ್ತಿದೆ. ಇದಲ್ಲದೆ ನೀವು ಯೋಜನೆಯಲ್ಲಿ ಜಿಯೋಟಿವಿ, ಜಿಯೋಸಿನಿಮಾ (ಪ್ರೀಮಿಯಂ ಅಲ್ಲದ) ಮತ್ತು ಜಿಯೋಕ್ಲೌಡ್‌ನಂತಹ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ. ಈ ಹೊಸ ಯೋಜನೆಗಳನ್ನು ನೀವು ಜಿಯೋ ಸೈಟ್ ಅಥವಾ ಅಪ್ಲಿಕೇಶನ್ನಲ್ಲಿ Value ವಿಭಾಗದಲ್ಲಿ ಕಾಣಬಹುದು.
ಜಿಯೋದ ವಾರ್ಷಿಕ ವಾಯ್ಸ್ ಮತ್ತು SMS ಮಾತ್ರ ಯೋಜನೆಯ ಬೆಲೆ ಈಗ 1,958 ರೂಗಳಾಗಿವೆ. ಈ ಜಿಯೋ ಯೋಜನೆಯಲ್ಲಿ 365 ದಿನಗಳ ಮಾನ್ಯತೆಯನ್ನು ನೀಡಲಾಗುತ್ತದೆ. ಈಗ ಜಿಯೋದ ಈ ಮೌಲ್ಯ ಯೋಜನೆಯಲ್ಲಿ ನೀವು ಅನಿಯಮಿತ ವಾಯ್ಸ್ ಕರೆಗಳು ಮತ್ತು 3,600 SMS ಗಳನ್ನು ಪಡೆಯುತ್ತೀರಿ. ಇದಲ್ಲದೆ ಇತರ ಪ್ರಯೋಜನಗಳ ಬಗ್ಗೆ ಹೇಳುವುದಾದರೆ ಈ ಯೋಜನೆಯು ಜಿಯೋ ಟಿವಿ, ಜಿಯೋ ಸಿನೆಮಾ (ಪ್ರೀಮಿಯಂ ಅಲ್ಲದ) ಮತ್ತು ಜಿಯೋಕ್ಲೌಡ್‌ನಂತಹ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಒಳಗೊಂಡಿದೆ.
Also Read: Samsung Galaxy S25 Series ಅಡಿಯಲ್ಲಿ 3 ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ! ಆಫರ್ ಬೆಲೆ ಮತ್ತು ವೈಶಿಷ್ಟ್ಯಗಳೇನು?
ರಿಲಯನ್ಸ್ ಜಿಯೋ ಸದ್ದಿಲ್ಲದೇ ತನ್ನ 3 ಜನಪ್ರಿಯ ರಿಚಾರ್ಜ್ ಯೋಜನೆಗಳನ್ನು ಬಂದ್ ಮಾಡಿದೆ. ಈ ಕಂಪನಿ ಹೊಸ ರಿಚಾರ್ಜ್ ಯೋಜನೆಗಳ ಬಿಡುಗಡೆಯೊಂದಿಗೆ ಜಿಯೋ ತನ್ನ ಬಳಕೆದಾರರಿಗೆ ದೊಡ್ಡ ಆಘಾತವನ್ನು ಸಹ ನೀಡಿದೆ. ಜಿಯೋ ತನ್ನ ಹಿಂದಿನ ಸೀಮಿತ ಡೇಟಾ, ಅನಿಯಮಿತ ಕರೆಗಳು ಮತ್ತು SMS ಯೋಜನೆಯನ್ನು ಸ್ಥಗಿತಗೊಳಿಸಿದೆ. ಈ ಹಿಂದೆ ಜಿಯೋ ಮೌಲ್ಯ ಯೋಜನೆ ವಿಭಾಗದಲ್ಲಿ 1899 ರೂ, 489 ರೂ ಮತ್ತು 189 ರೂ ಬೆಲೆಯ ಮೂರು ಯೋಜನೆಗಳನ್ನು ಹೊಂದಿತ್ತು. ಈ ಯೋಜನೆಗಳಲ್ಲಿ ನೀವು ಡೇಟಾ, ಅನಿಯಮಿತ ಕರೆಗಳು, SMS ಇತ್ಯಾದಿಗಳ ಪ್ರಯೋಜನವನ್ನು ಪಡೆದುಕೊಂಡಿದ್ದೀರಿ.