BSNL ಗ್ರಾಹಕರಿಗೆ ದೀಪಾವಳಿ ಕೊಡುಗೆ: ಈ ವಾರ್ಷಿಕ ಪ್ಲಾನ್ನಲ್ಲಿ 30 ದಿನ ಹೆಚ್ಚುವರಿ ವ್ಯಾಲಿಡಿಟಿ ಸೌಲಭ್ಯ
BSNL: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್, ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಯ ಭಾಗವಾಗಿ ತನ್ನ 2,799 ರೂ.ಗಳ ವಾರ್ಷಿಕ ರೀಚಾರ್ಜ್ ಪ್ಲಾನ್ನಲ್ಲಿ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ. ಈ ಆಫರ್ನಲ್ಲಿ ಗ್ರಾಹಕರಿಗೆ 30 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಜೊತೆಗೆ ಹೆಚ್ಚಿನ ಡೇಟಾ ಸೌಲಭ್ಯವೂ ಸಿಗಲಿದೆ. ಇದರಿಂದ ಈ ಪ್ಲಾನ್ನ ಒಟ್ಟು ಮಾನ್ಯತೆ ಒಂದು ವರ್ಷಕ್ಕಿಂತಲೂ ಹೆಚ್ಚಾಗಲಿದೆ. ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು, ಬಿಎಸ್ಎನ್ಎಲ್ ವಾರ್ಷಿಕ ರೀಚಾರ್ಜ್ ಮಾಡಿಸಿಕೊಳ್ಳಲು ಯೋಚಿಸುತ್ತಿರುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಬಹುದು. ಹಾಗಾದರೆ, 2,799 ರೂ.ಗಳ ಪ್ಲಾನ್ನಲ್ಲಿ ಸಿಗುವ ಪ್ರಯೋಜನಗಳೇನು? ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
BSNL 2,799 ರೂ.ಗಳ ಪ್ಲಾನ್ನ ಪ್ರಯೋಜನಗಳ ಮಾಹಿತಿ
ಬಿಎಸ್ಎನ್ಎಲ್ ಟೆಲಿಕಾಂ ತನ್ನ ಅಧಿಕೃತ X ಖಾತೆಯ ಪೋಸ್ಟ್ನಲ್ಲಿ ಈ ದೀಪಾವಳಿ ಹಬ್ಬದ ವಿಶೇಷ ಕೊಡುಗೆಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಸಾಮಾನ್ಯವಾಗಿ ಒಂದು ವರ್ಷದ ವ್ಯಾಲಿಡಿಟಿ ಹೊಂದಿರುವ 2,799 ರೂ.ಗಳ ರೀಚಾರ್ಜ್ ಪ್ಲಾನ್ಗೆ ಈಗ ಹೆಚ್ಚುವರಿಯಾಗಿ 30 ದಿನಗಳ ಮಾನ್ಯತೆಯನ್ನು ನೀಡಲಾಗುತ್ತಿದೆ.
ಈ ಪ್ಲಾನ್ನಲ್ಲಿ ಒಟ್ಟು 395 ದಿನಗಳು (ಹೆಚ್ಚುವರಿ 30 ದಿನಗಳ ಸೇರಿ) ವ್ಯಾಲಿಡಿಟಿ ಸಿಗಲಿದೆ. ಅಲ್ಲದೇ ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ದೇಶದಾದ್ಯಂತ ಅನಿಯಮಿತ ಧ್ವನಿ ಕರೆಗಳು ಸೌಲಭ್ಯ ಲಭ್ಯ. ಹಾಗೆಯೇ ಪ್ರತಿದಿನ 100 SMS ಸಿಗುತ್ತವೆ. ಅಂದಹಾಗೆ ಈ ಹೆಚ್ಚುವರಿ ಪ್ರಯೋಜನಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿವೆ. ನವೆಂಬರ್ 30ರ ವರೆಗೆ ಈ ವಿಶೇಷ ಕೊಡುಗೆಯ ಪ್ರಯೋಜನ ಪಡೆಯಬಹುದು.
ಬಿಎಸ್ಎನ್ಎಲ್ 2,399 ರೂ.ಗಳ ಪ್ಲಾನ್ ಮಾಹಿತಿ
ಬಿಎಸ್ಎನ್ಎಲ್ 2,799 ರೂ.ಗಳ ವಾರ್ಷಿಕ ಪ್ಲಾನ್ ಬೇಡ ಎನ್ನುವ ಗ್ರಾಹಕರು ಬಿಎಸ್ಎನ್ಎಲ್ 2,399 ರೂ.ಗಳ ವಾರ್ಷಿಕ ರೀಚಾರ್ಜ್ ಯೋಜನೆಯನ್ನು ಪರಿಗಣಿಸಬಹುದು. ಈ ಪ್ಲಾನ್ ಕೂಡ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಸಾಕಷ್ಟು ಡೇಟಾ ಮತ್ತು ಕರೆ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಪ್ಲಾನ್ನಲ್ಲಿ ಒಟ್ಟು 365 ದಿನಗಳು ವ್ಯಾಲಿಡಿಟಿ ಸಿಗಲಿದೆ. ಅಲ್ಲದೇ ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ದೇಶದಾದ್ಯಂತ ಅನಿಯಮಿತ ಧ್ವನಿ ಕರೆಗಳು ಸೌಲಭ್ಯ ಲಭ್ಯ. ಹಾಗೆಯೇ ಪ್ರತಿದಿನ 100 SMS ಸಿಗುತ್ತವೆ.