BSNL Rs. 319 Recharge
ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ದೇಶಾದ್ಯಂತ 5G ಸೇವೆಗಳನ್ನು ಇನ್ನೂ ಬಿಡುಗಡೆ ಮಾಡದ ಏಕೈಕ ಆಪರೇಟರ್ ಆಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋದಂತಹ ಇತರ ಕಂಪನಿಗಳು ಈಗಾಗಲೇ ತಮ್ಮ 5G ನೆಟ್‌ವರ್ಕ್ ಸೇವೆಗಳನ್ನು ಪ್ರಾರಂಭಿಸಿವೆ. ಪ್ರಸ್ತುತ ಬಿಎಸ್ಎನ್ಎಲ್ (BSNL) ಕೇವಲ 319 ರೂಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ವಾಯ್ಸ್ ಕರೆಗಳೊಂದಿಗೆ ಬರೋಬ್ಬರಿ 10GB ಡೇಟಾವನ್ನು ಸಹ ನೀಡುತ್ತಿದೆ. ಹಾಗಾದ್ರೆ ಈ ಯೋಜನೆಯ ಸಂಪೂರ್ಣ ಮಾಹಿತಿ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
ಸಾಮಾನ್ಯವಾಗಿ ಈ ವಿಶೇಷ ಬೆಲೆ ನಿಗದಿ ವೋಚರ್ 65 ದಿನಗಳ ಅವಧಿಗೆ BSNL ನಿಂದ ದೇಶದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಪ್ರಯೋಜನಗಳನ್ನು ಒದಗಿಸುತ್ತದೆ. ಪ್ಯಾಕೇಜ್ 300 SMS ಮತ್ತು ಒಟ್ಟು 10GB ಡೇಟಾದೊಂದಿಗೆ ಬರುತ್ತದೆ. ಪೂರ್ತಿ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಕರೆ ಮತ್ತು ಡೇಟಾವನ್ನು ಬಳಸಲು ಉತ್ತಮವಾಗಿದೆ.
ಪ್ರಸ್ತುತ ಬಿಎಸ್ಎನ್ಎಲ್ (BSNL) ತಮ್ಮ ಗ್ರಾಹಕರಿಗೆ ಹತ್ತಾರು ಯೋಜನೆಗಳನ್ನು ಕಡಿಮೆ ಬೆಲೆಗೆ ನೀಡುತ್ತಿದೆ. ಅದರಲ್ಲಿ ಈ 319 ರೂಗಳ ಯೋಜನೆಯೂ ಒಂದಾಗಿದೆ. ಪ್ರಸ್ತುತ ಬರೋಬ್ಬರಿ 65 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ಈ ಯೋಜನೆ ತುಂಬ ಜನರಿಗೆ ಹೆಚ್ಚು ಸಹಕರಿಯಾಗಿದೆ. ಯಾಕೆಂದರೆ ಮಾಸಿಕ ಲೆಕ್ಕಾಚಾರದಲ್ಲಿ ನೋಡುವುದಾದರೆ ಕೇವಲ 160 ರೂಗಳ ಬೆಲೆಗೆ ಸುಮಾರು 32 ದಿನಗಳ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಕರೆ ಮತ್ತು ಡೇಟಾವನ್ನು ಬಳಸಲು ಅನುವು ಮಾಡಿಕೊಡುವುದು ನಿಜಕ್ಕೂ ಒಳ್ಳೆ ಯೋಜನೆಯಾಗಿದೆ.
ಇದನ್ನು ಬೇರೆ ಟೆಲಿಕಾಂ ಕಂಪನಿಗಳಿಗೆ ಹೋಲಿಸಿ ನೋಡಿದರೆ ಸುಮಾರು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಪ್ಲಾನ್ ನಿಮಗೆ ಸುಮಾರು 250 ರೂಗಳ ಸುತ್ತಮುತ್ತ ಸಿಗುತ್ತದೆ. ಈ ವಿಷಯದಲ್ಲಿ ಬಿಎಸ್ಎನ್ಎಲ್ ರಿಚಾರ್ಜ್ ಪ್ಲಾನ್ (BSNL Recharge Plan) ನಿಜಕ್ಕೂ ತಮ್ಮ ಗ್ರಾಹಕರನ್ನು ಹೆಚ್ಚು ಬೇರೆ ಟೆಲಿಕಾಂ ಕಂಪನಿಗಳನ್ನು ತೊರೆದು ತನ್ನತ್ತ ಸೆಳೆಯಲು ಇದೊಂದು ಉತ್ತಮ ಮಾರ್ಗ ಅಂದರೆ ತಪ್ಪಲ್ಲ ಬಿಡಿ.