BSNL
BSNL Annual Plans: ಭಾರತೀಯ ಟೆಲಿಕಾಂ ವಲಯದಲ್ಲಿ ಸರ್ಕಾರಿ ಸ್ವಾಮ್ಯದ BSNL ಟೆಲಿಕಾಂ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿದೆ. BSNL ಕಂಪನಿಯು ಈಗಾಗಲೇ ತನ್ನ ಗ್ರಾಹಕರಿಗಾಗಿ ಭಿನ್ನ ದರಗಳಲ್ಲಿ ಕೆಲವು ರೀಚಾರ್ಜ್ ಯೋಜನೆಗಳ ಆಯ್ಕೆ ನೀಡಿದೆ. ಆ ಲಿಸ್ಟ್‌ನಲ್ಲಿನ ಎರಡು ವಾರ್ಷಿಕ ಯೋಜನೆಗಳು ಗಮನ ಸೆಳೆಯುವಂತಿವೆ. ಈ ನೂತನ ಯೋಜನೆಗಳು ಪೂರ್ಣ ವಾರ್ಷಿಕ ವ್ಯಾಲಿಡಿಟಿ ಸೇವೆಯನ್ನು ಒದಗಿಸಲಿವೆ. ಈ ಯೋಜನೆಗಳು ಉಚಿತ ವಾಯ್ಸ್ ಕರೆ, ಡೇಟಾ, ಎಸ್‌ಎಮ್‌ಎಸ್ ಪ್ರಯೋಜನಗಳನ್ನು ಒಳಗೊಂಡಿವೆ. ಅಂದಹಾಗೆ ಈ ಯೋಜನೆಗಳು ಅಧಿಕ ವ್ಯಾಲಿಡಿಟಿ ಮತ್ತು ಸ್ಥಿರ ಬಳಕೆಯನ್ನು ಬಯಸುವ ಗ್ರಾಹಕರಿಗೆ ಹೆಚ್ಚು ಉಪಯುಕ್ತ ಎನಿಸುತ್ತವೆ. ಹಾಗಾದರೆ BSNL ಟೆಲಿಕಾಂನ ವಾರ್ಷಿಕ ಮಾನ್ಯತೆಯ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಶೀಘ್ರದಲ್ಲೇ Google Pixel 10a ಬಿಡುಗಡೆ! ನಿರೀಕ್ಷಿತ ಫೀಚರ್ಸ್ ಮತ್ತು ಬೆಲೆ ಮಾಹಿತಿ ಇಲ್ಲಿದೆ
BSNL ಸಂಸ್ಥೆಯ 2,626 ರೂ.ಗಳ ಪ್ಲಾನ್ ವಾರ್ಷಿಕ ವ್ಯಾಲಿಡಿಟಿ ಸೌಲಭ್ಯದ ಯೋಜನೆ ಆಗಿದೆ. ಈ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರು 365 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2.6GB ಡೇಟಾ ಪ್ರಯೋಜನ ಪಡೆಯುತ್ತಾರೆ. ಡೇಟಾ ಪ್ರಯೋಜನಗಳ ಜೊತೆಗೆ ಈ ಪ್ಲಾನ್ ಭಾರತದ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಉಚಿತ ವಾಯ್ಸ್ ಕರೆಗಳನ್ನು ಸೌಲಭ್ಯ ಒದಗಿಸುತ್ತದೆ. ಸ್ಥಳೀಯ ಕರೆ ಅಥವಾ ರಾಷ್ಟ್ರೀಯ ಕರೆ ಆಗಿರಲಿ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಬಳಕೆದಾರರು ವಾಯ್ಸ್ ಕರೆಗಳನ್ನು ಮಾಡಲು ಅವಕಾಶ ಇರಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 ಉಚಿತ SMS ಪ್ರಯೋಜನ ಲಭ್ಯ ಇರಲಿದೆ.
BSNL ಸಂಸ್ಥೆಯ ಹೊಸ 2,799 ರೂ.ಗಳ ಪ್ಲಾನಿನಲ್ಲಿ ಬಳಕೆದಾರರಿಗೆ 365 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಪಡೆಯುತ್ತಾರೆ. ಇನ್ನು ದೈನಂದಿನ ಡೇಟಾ ಮಿತಿ ಮುಗಿದ ಬಳಿಕ ಇಂಟರ್ನೆಟ್ ವೇಗ ಕಡಿಮೆ ಆಗುವುದು. ಡೇಟಾ ಸೌಲಭ್ಯಗಳ ಜೊತೆಗೆ ಈ ಯೋಜನೆಯಲ್ಲಿ ಭಾರತದ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಉಚಿತ ವಾಯ್ಸ್ ಕರೆಗಳನ್ನು ಸೌಲಭ್ಯ ಸಿಗಲಿದೆ. ಸ್ಥಳೀಯ ಕರೆ ಅಥವಾ ರಾಷ್ಟ್ರೀಯ ಕರೆ ಆಗಿರಲಿ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಬಳಕೆದಾರರು ವಾಯ್ಸ್ ಕರೆಗಳನ್ನು ಮಾಡಲು ಅವಕಾಶ ಇರಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 ಉಚಿತ SMS ಪ್ರಯೋಜನ ಲಭ್ಯ.
BSNL ಭಾರತ್ ಕನೆಕ್ಟ್ 26 ಯೋಜನೆಯಡಿ ಹೊಸ 2,626 ರೂ.ಗಳ ವಾರ್ಷಿಕ ಪ್ಲಾನ್ ಸೀಮಿತ ಅವಧಿಗೆ ಲಭ್ಯವಿದೆ. ಈ ಯೋಜನೆಯು ಫೆಬ್ರವರಿ 24, 2026 ರ ವರೆಗೆ ರೀಚಾರ್ಜ್ ಲಭ್ಯ ಇರಲಿದೆ ಎನ್ನಲಾಗಿದೆ. ಇನ್ನು BSNL 2,799 ರೂ.ಗಳ ವಾರ್ಷಿಕ ಪ್ಲಾನ್ ಕಡೆಯ ದಿನಾಂಕದ ಬಗ್ಗೆ ಯಾವುದೇ ಅಪ್‌ಡೇಟ್ ಮಾಹಿತಿ ಇಲ್ಲ. BSNL ಗ್ರಾಹಕರು BSNL ಸೆಲ್ಫ್‌ಕೇರ್ ಆಪ್, BSNL ವೆಬ್‌ಸೈಟ್ ಅಥವಾ ಇತರೆ ರೀಚಾರ್ಜ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಈ ಯೋಜನೆಗಳನ್ನು ರೀಚಾರ್ಜ್ ಮಾಡಬಹುದು.