ಕಡಿಮೆ ಬೆಲೆಯಲ್ಲಿ ಲಭ್ಯವಿರುವ Airtel ಕಂಪನಿಯ ಅತ್ಯುತ್ತಮ ರೀಚಾರ್ಜ್ ಪ್ಲಾನ್‌ಗಳ ಲಿಸ್ಟ್
500 ರೂ.ಗಳ ಒಳಗೆ ಸಿಗುವ ಬೆಸ್ಟ್ ಏರ್‌ಟೆಲ್ ಯೋಜನೆಗಳು
ಏರ್‌ಟೆಲ್ ಟೆಲಿಕಾಂನ ಈ ಯೋಜನೆಯಲ್ಲಿ ಆಕರ್ಷಕ ವ್ಯಾಲಿಡಿಟಿ
ಏರ್‌ಟೆಲ್ ಟೆಲಿಕಾಂನ ಈ ಪ್ಲಾನಿನಲ್ಲಿಗಳಲ್ಲಿ ಉಚಿತ ವಾಯ್ಸ್ ಕರೆ ಸೌಲಭ್ಯ
ಜನಪ್ರಿಯ Airtel ಸಂಸ್ಥೆಯು ಕೆಲವು ಆಕರ್ಷಕ ಯೋಜನೆಗಳ ಮೂಲಕ ತನ್ನದೇ ಚಂದಾದಾರರ ಬಳಗವನ್ನು ಹೊಂದಿದೆ. ಅಲ್ಲದೇ ಸಂಸ್ಥೆಯು ಕೆಲವು ಅಧಿಕ ಡೇಟಾ ಹಾಗೂ ಅಧಿಕ ವ್ಯಾಲಿಡಿಟಿ ಪ್ಲಾನ್‌ಗಳ ಮೂಲಕ ಜಿಯೋ ಟೆಲಿಕಾಂ ಹಾಗೂ ವಿ ಟೆಲಿಕಾಂ ಕಂಪನಿಗಳಿಗೆ ನೇರ ಪೈಪೋಟಿ ನೀಡುತ್ತಾ ಮುಂದೆ ಸಾಗಿದೆ. ಆ ಪೈಕಿ ಏರ್‌ಟೆಲ್ ಟೆಲಿಕಾಂನ ದೈನಂದಿನ ಅಧಿಕ ಡೇಟಾ ಪ್ರಯೋಜನ ಒಳಗೊಂಡ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳು ಅಧಿಕ ಬಳಕೆದಾರರನ್ನು ಆಕರ್ಷಿಸಿವೆ. ಮುಖ್ಯವಾಗಿ ಅಧಿಕ ದೈನಂದಿನ ಡೇಟಾ ಸೌಲಭ್ಯ ಬಯಸುವ ಬಳಕೆದಾರರ ಗಮನ ಸೆಳೆದಿವೆ. ಅದಾಗ್ಯೂ 500 ರೂ.ಗಳ ಒಳಗಿನ ಕೆಲವು ಯೋಜನೆಗಳಲ್ಲಿ ಅತ್ಯುತ್ತಮ ವ್ಯಾಲಿಡಿಟಿ ಜೊತೆಗೆ ಡೇಟಾ ಹಾಗೂ ಓಟಿಟಿ ಪ್ರಯೋಜನಗಳು ಸಹ ಸಿಗುತ್ತವೆ. ಹಾಗಾದರೆ ಏರ್‌ಟೆಲ್ ಟೆಲಿಕಾಂನ 500 ರೂ.ಗಳ ಯೋಜನೆಯಲ್ಲಿ ಡೇಟಾ ಪ್ರಯೋಜನ ಹಾಗೂ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Xiaomi ಕಂಪನಿಯ ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದಿಢೀರ್ ಹೆಚ್ಚಳ!
Airtel 399 ರೂ.ಗಳ ಪ್ಲಾನ್ ಮಾಹಿತಿ
ಏರ್‌ಟೆಲ್ ಟೆಲಿಕಾಂನ 399 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಕೂಡಾ ಬಳಕೆದಾರರಿಗೆ ಪ್ರತಿದಿನ 2.5GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ.

ಏರ್‌ಟೆಲ್ ಸಂಸ್ಥೆಯ 409 ರೂ.ಗಳ ಪ್ಲಾನ್ ಮಾಹಿತಿ
ಏರ್‌ಟೆಲ್ ಟೆಲಿಕಾಂನ 409 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಕೂಡಾ ಬಳಕೆದಾರರಿಗೆ ಪ್ರತಿದಿನ 2.5GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹೆಚ್ಚುವರಿಯಾಗಿ ಸೋನಿ ಲೈವ್ ಸೇರಿದಂತೆ ಇತರೆ ಓಟಿಟಿ ಚಂದಾದಾರಿಕೆ ಲಭ್ಯವಾಗುವುದು.
ಏರ್‌ಟೆಲ್ ಸಂಸ್ಥೆಯ 489 ರೂ.ಗಳ ಪ್ಲಾನ್ ಮಾಹಿತಿ
ಏರ್‌ಟೆಲ್ ಟೆಲಿಕಾಂನ 489 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಸಹ ಬಳಕೆದಾರರಿಗೆ ಒಟ್ಟು 6GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 77 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ.
ಏರ್‌ಟೆಲ್ ಸಂಸ್ಥೆಯ 469 ರೂ.ಗಳ ಪ್ಲಾನ್ ಮಾಹಿತಿ
ಏರ್‌ಟೆಲ್ ಟೆಲಿಕಾಂನ 469 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಯಾವುದೇ ಡೇಟಾ ಪ್ರಯೋಜನ ಸಿಗಲ್ಲ. ಆದರೆ ಈ ಯೋಜನೆಯಲ್ಲಿ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ದೊರೆಯುತ್ತದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile