Digit.in

Airtel vs Jio Rs 899 Plan: ಈ ಎರಡು ರೀಚಾರ್ಜ್‌ ಪ್ಲಾನ್‌ಗಳಲ್ಲಿ ಯಾವುದು ಉತ್ತಮ?

Airtel vs Jio Rs 899 Plan: ಈ ಎರಡು ರೀಚಾರ್ಜ್‌ ಪ್ಲಾನ್‌ಗಳಲ್ಲಿ ಯಾವುದು ಉತ್ತಮ?

Airtel vs Jio: ಟೆಲಿಕಾಂ ವಲಯದಲ್ಲಿ ಏರ್‌ಟೆಲ್‌ ಮತ್ತು ಜಿಯೋ ಲೀಡಿಂಗ್‌ ಸ್ಥಾನದಲ್ಲಿರುವ ಕಂಪನಿಗಳಾಗಿವೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಎರಡೂ ಟೆಲಿಕಾಂಗಳು ವಿವಿಧ ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳನ್ನು ನೀಡುತ್ತಿವೆ. ಅದರಲ್ಲೂ ಹೆಚ್ಚಿನ ಡೇಟಾ ಹಾಗೂ ದೀರ್ಘಾವಧಿಯ ವ್ಯಾಲಿಡಿಟಿ ಬಯಸುವ ಬಳಕೆದಾರರಿಗೆ ಕೆಲವು ಪ್ಲಾನ್‌ಗಳು ಹೆಚ್ಚು ಗಮನ ಸೆಳೆಯುತ್ತವೆ. ಈ ಪೈಕಿ ಭಾರ್ತಿ ಏರ್‌ಟೆಲ್‌ ಮತ್ತು ರಿಲಯನ್ಸ್‌ ಜಿಯೋ ಸಂಸ್ಥೆಗಳ 899 ರೂ.ಗಳ ರೀಚಾರ್ಜ್‌ ಯೋಜನೆಗಳು ಒಂದೇ ಪ್ರೈಸ್‌ಟ್ಯಾಗ್‌ ಹೊಂದಿದ್ದರೂ, ಡೇಟಾ ಮತ್ತು ವ್ಯಾಲಿಡಿಟಿ ವಿಚಾರದಲ್ಲಿ ವ್ಯತ್ಯಾಸ ಹೊಂದಿವೆ. ಹಾಗಾದರೆ 899 ರೂ.ಗಳ ಬೆಲೆಯ ಈ ಎರಡು ರೀಚಾರ್ಜ್‌ ಪ್ಲಾನ್‌ಗಳಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ? ಇಲ್ಲಿದೆ ಸಂಪೂರ್ಣ ಹೋಲಿಕೆ.

Airtel 899 ರೂ.ಗಳ ಪ್ರೀಪೇಯ್ಡ್‌ ಪ್ಲಾನ್‌

ಭಾರ್ತಿ ಏರ್‌ಟೆಲ್‌ನ 899 ರೂ.ಗಳ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಸಿಗಲಿದೆ. ಈ ಪ್ರೀಪೇಯ್ಡ ಪ್ಲಾನ್ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ವಾರ್ಷಿಕ ವ್ಯಾಲಿಡಿಟಿ ಅವಧಿಯಲ್ಲಿ ಅನಿಯಮಿತ ವಾಯ್ಸ್‌ ಕಾಲ್‌ ಸೌಲಭ್ಯ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಪ್ರಯೋಜನವೂ ಸಿಗುತ್ತದೆ. ಇದರ ಜೊತೆಗೆ ಉಚಿತ ಹೆಲೋ ಟ್ಯೂನ್‌ ಸೌಲಭ್ಯ ಸಹ ಸಿಗಲಿದೆ.

Jio 899 ರೂ.ಗಳ ಪ್ರೀಪೇಯ್ಡ್‌ ಪ್ಲಾನ್‌

ರಿಲಯನ್ಸ್‌ ಜಿಯೋದ 899 ರೂ.ಗಳ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯ. ಈ ಪ್ರೀಪೇಯ್ಡ ಪ್ಲಾನ್‌ 90 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ವ್ಯಾಲಿಡಿಟಿ ಅವಧಿಯಲ್ಲಿ ಅನಿಯಮಿತ ವಾಯ್ಸ್‌ ಕಾಲ್‌ ಸೌಲಭ್ಯ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಪ್ರಯೋಜನವೂ ಸಿಗುತ್ತದೆ. ಇದರ ಜತೆಗೆ ಜಿಯೋ ಹಾಟ್‌ಸ್ಟಾರ್‌ ಹಾಗೂ 12 ತಿಂಗಳ ಕಾನ್ವಾ ಪ್ರೊ ಲೈಟ್‌ ಚಂದಾದಾರಿಕೆ ಸಹ ದೊರೆಯುತ್ತದೆ.

ಜಿಯೋ vs ಏರ್‌ಟೆಲ್‌ 899 ರೂ.ಗಳ ಪ್ಲಾನ್‌: ಯಾವುದು ಯೋಗ್ಯ?

899 ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಜಿಯೋ ಹಾಗೂ ಏರ್‌ಟೆಲ್‌ನ ಯೋಜನೆಗಳು ಆಕರ್ಷಕ ಎನಿಸಿವೆ. ಅದಾಗ್ಯೂ, ಅಧಿಕ ದೈನಂದಿನ ಡೇಟಾ ಬಯಸುವವರಿಗೆ ಜಿಯೋ ಪ್ಲಾನ್‌ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಜಿಯೋ ಯೋಜನೆಯಲ್ಲಿ ಜಿಯೋ ಹಾಟ್‌ಸ್ಟಾರ್‌ ಹಾಗೂ 12 ತಿಂಗಳ ಕಾನ್ವಾ ಪ್ರೊ ಲೈಟ್‌ ಚಂದಾದಾರಿಕೆ ಆಯ್ಕೆ ನೀಡಲಾಗಿದೆ. ಅದೇ ರೀತಿ ಏರ್‌ಟೆಲ್‌ ಬಳಕೆದಾರರಿಗೆ ಅದರ 899 ರೂ.ಗಳ ಪ್ಲಾನ್‌ 84 ದಿನಗಳ ಅವಧಿಗೆ ಸೂಕ್ತವಾಗಿರಬಹುದು.

Manthesh B

Manthesh B

Manthesh B ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

View full profile