Jio ಗ್ರಾಹಕರಿಗೆ ಭರ್ಜರಿ ಆಫರ್: ಒಂದು ಪ್ಲಾನ್ ರೀಚಾರ್ಜ್ ಮಾಡಿದರೆ ಮತ್ತೊಂದು ಪ್ಲಾನ್ ಉಚಿತ!

ಒಂದು ಪ್ಲಾನ್ ರೀಚಾರ್ಜ್ ಮಾಡಿದರೆ ಮತ್ತೊಂದು ರೀಚಾರ್ಜ್ ಉಚಿತವಾಗಿ ಸಿಗುತ್ತದೆ ಎಂದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ? ಗ್ರಾಹಕರನ್ನು ಆಕರ್ಷಿಸಲು ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ಹೆಚ್ಚುತ್ತಿರುವ ಬೆನ್ನಲ್ಲೇ Jio ತನ್ನ ಆಯ್ದ ಪ್ರಿಪೇಯ್ಡ್ ಬಳಕೆದಾರರಿಗೆ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಕಂಪನಿಯ 'Buy 1 Get 1 Free' ಆಫರ್ ಅಡಿಯಲ್ಲಿ ಅರ್ಹ ಗ್ರಾಹಕರು 299 ರೂ.ಗಳ ಅಥವಾ 349 ರೂ.ಗಳ ರೀಚಾರ್ಜ್ ಮಾಡಿದರೆ ಅದೇ ಮೌಲ್ಯದ ಮತ್ತೊಂದು ರೀಚಾರ್ಜ್ ವೋಚರ್ ಅನ್ನು ಉಚಿತವಾಗಿ ಪಡೆಯಬಹುದು. ಆದರೆ ಈ ಆಫರ್ ಎಲ್ಲಾ ಜಿಯೋ ಗ್ರಾಹಕರಿಗೂ ಲಭ್ಯವಿಲ್ಲ. ಆಯ್ದ ಮೊಬೈಲ್ ಸಂಖ್ಯೆಗಳ ಆಧಾರದ ಮೇಲೆ ಈ ಕೊಡುಗೆಯನ್ನು ನೀಡಲಾಗುತ್ತಿದೆ. ಹೀಗಾಗಿ ರೀಚಾರ್ಜ್ ಮಾಡುವ ಮುನ್ನ ನಿಮ್ಮ ಸಂಖ್ಯೆಗೆ ಈ ಆಫರ್ ಇದೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯ. ಹಾಗಾದರೆ ಈ ಎರಡು ಪ್ಲಾನ್ಗಳಲ್ಲಿ ಸಿಗುವ ಪ್ರಯೋಜನಗಳೇನು ಎಂಬುದನ್ನು ಮುಂದೆ ತಿಳಿಯೋಣ.
Jio 299 ರೂ.ಗಳ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ 299 ರೂ.ಗಳ ಪ್ರಿಪೇಯ್ಡ್ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ಯೋಜನೆಯಡಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾ ಸಿಗುತ್ತದೆ. ಇದರೊಂದಿಗೆ ಅನಿಯಮಿತ ವಾಯ್ಸ್ ಕರೆಗಳು ಮತ್ತು ಪ್ರತಿದಿನ 100 SMS ಸೌಲಭ್ಯವೂ ಲಭ್ಯವಿದೆ. ಇದರೊಂದಿಗೆ, JioTV ಮತ್ತು JioAICloud ಚಂದಾದಾರಿಕೆಯ ಪ್ರಯೋಜನಗಳನ್ನು ಕೂಡ ಈ ಪ್ಲಾನ್ನಲ್ಲಿ ನೀಡಲಾಗುತ್ತದೆ. ಈ ಯೋಜನೆಗೆ ಅರ್ಹರಾಗಿರುವ ಬಳಕೆದಾರರು 'Buy 1 Get 1 Free' ಕೊಡುಗೆಯಡಿ 299 ರೂ.ಗಳ ಮೌಲ್ಯದ ಮತ್ತೊಂದು ರೀಚಾರ್ಜ್ ವೋಚರ್ ಅನ್ನು ಉಚಿತವಾಗಿ ಪಡೆಯಬಹುದು. ಅಂದರೆ 299 ರೂ.ಗಳ ರೀಚಾರ್ಜ್ ಮಾಡಿದರೆ ಅದೇ ಮೊತ್ತದ ಹೆಚ್ಚುವರಿ ವೋಚರ್ ನಿಮ್ಮ ಖಾತೆಗೆ ಸೇರುತ್ತದೆ.
ಜಿಯೋ 349 ರೂ.ಗಳ ಪ್ಲಾನ್ ಜೊತೆ ಉಚಿತ ವೋಚರ್
ಜಿಯೋ ಟೆಲಿಕಾಂನ 349 ರೂ.ಗಳ ಪ್ರಿಪೇಯ್ಡ್ ಯೋಜನೆಯು ಪ್ರತಿದಿನ 2GB ಡೇಟಾ ಸೌಲಭ್ಯವನ್ನು ನೀಡುತ್ತದೆ. ಇದರ ಜೊತೆಗೆ ಅನಿಯಮಿತ ವಾಯ್ಸ್ ಕರೆಗಳು ಮತ್ತು ದಿನಕ್ಕೆ 100 SMS ಪ್ರಯೋಜನಗಳು ಲಭ್ಯವಿವೆ. ಈ ಪ್ಲಾನ್ನಲ್ಲಿ ಅನಿಯಮಿತ 5G ಸೇವೆ, JioHotstar Mobile ಚಂದಾದಾರಿಕೆ ಹಾಗೂ 50GB ಸ್ಟೋರೇಜ್ ಹೊಂದಿರುವ JioAICloud ಸೌಲಭ್ಯವೂ ಸೇರಿವೆ. ಇದರ ಮತ್ತೊಂದು ಆಕರ್ಷಕ ಪ್ರಯೋಜನವೆಂದರೆ Canva Pro Lite ಚಂದಾದಾರಿಕೆಯನ್ನು 12 ತಿಂಗಳವರೆಗೆ ಉಚಿತವಾಗಿ ಪಡೆಯಬಹುದು. ಇನ್ನು 'Buy 1 Get 1 Free' ಆಫರ್ಗೆ ಅರ್ಹರಾಗಿರುವ ಗ್ರಾಹಕರು 349 ರೂ.ಗಳ ಮತ್ತೊಂದು ರೀಚಾರ್ಜ್ ವೋಚರ್ ಅನ್ನು ಯಾವುದೇ ಹೆಚ್ಚುವರಿ ಹಣ ಪಾವತಿಸದೆ ಪಡೆಯಬಹುದು.
ನಿಮ್ಮ ಜಿಯೋ ಸಂಖ್ಯೆಗೆ ಈ ಆಫರ್ ಲಭ್ಯವಿದೆಯೇ? ಹೀಗೆ ಚೆಕ್ ಮಾಡಿ
ಈ ವಿಶೇಷ ಕೊಡುಗೆ ಎಲ್ಲ ಜಿಯೋ ಬಳಕೆದಾರರಿಗೂ ಅನ್ವಯಿಸುವುದಿಲ್ಲ. ಆಯ್ದ ಮೊಬೈಲ್ ಸಂಖ್ಯೆಗಳಿಗಷ್ಟೇ ಲಭ್ಯವಿರುವುದರಿಂದ ರೀಚಾರ್ಜ್ ಮಾಡುವ ಮೊದಲು MyJio ಆಪ್ನಲ್ಲಿ ಆಫರ್ ಇದೆಯೇ ಎಂದು ಪರಿಶೀಲಿಸಿಕೊಳ್ಳಿ. ಇದಕ್ಕಾಗಿ ಮೊದಲು MyJio ಆಪ್ ತೆರೆಯಿರಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ ಲಾಗ್ ಇನ್ ಆಗಿ. ನಂತರ ಹೋಮ್ಪೇಜ್ನಲ್ಲಿ ಕಾಣಿಸುವ ಪ್ರೊಮೋಷನಲ್ ಬ್ಯಾನರ್ಗಳನ್ನು ಗಮನಿಸಿ. ನಿಮ್ಮ ಸಂಖ್ಯೆಗೆ ಈ ಕೊಡುಗೆ ಲಭ್ಯವಿದ್ದರೆ, ಅಲ್ಲಿ 'Buy 1 Get 1 Free' ಆಫರ್ ಬಗ್ಗೆ ಮಾಹಿತಿ ಕಾಣಿಸಬಹುದು.
ಇದಲ್ಲದೆ, ಆಪ್ನಲ್ಲಿರುವ 'Recommended Plans For You' ವಿಭಾಗದಲ್ಲಿಯೂ ಪರಿಶೀಲಿಸಬಹುದು. ಅಲ್ಲಿ 299 ರೂ.ಗಳ ಮತ್ತು 349 ರೂ.ಗಳ ರೀಚಾರ್ಜ್ ಪ್ಲಾನ್ಗಳ ಮೇಲೆ 'Buy 1 Get 1 Free' ಎಂಬ ಬ್ಯಾಡ್ಜ್ ಕಾಣಿಸಿಕೊಂಡರೆ, ನಿಮ್ಮ ಸಂಖ್ಯೆಗೆ ಈ ಆಫರ್ ಲಭ್ಯವಿದೆ ಎಂದರ್ಥ. ಆಫರ್ ಅಡಿಯಲ್ಲಿ ರೀಚಾರ್ಜ್ ಯಶಸ್ವಿಯಾದ ಬಳಿಕ ಏಳು ದಿನಗಳ ಒಳಗೆ ಎರಡನೇ ರೀಚಾರ್ಜ್ ವೋಚರ್ ಅನ್ನು MyJio ಆಪ್ನ 'Vouchers' ವಿಭಾಗಕ್ಕೆ ಸೇರಿಸಲಾಗುತ್ತದೆ.
Manthesh B
Manthesh B ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್ಇಂಡಿಯಾ ಸಂಸ್ಥೆಯ ಗಿಜ್ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
View full profile