Jio Rs 299 vs Airtel Rs 349 Recharge plan Validity data benefits compare
Airtel vs Jio: ಟೆಲಿಕಾಂ ವಲಯದಲ್ಲಿ ಏರ್‌ಟೆಲ್ ಮತ್ತು ಜಿಯೋ ಲೀಡಿಂಗ್ ಸ್ಥಾನದಲ್ಲಿರುವ ಕಂಪನಿಗಳಾಗಿವೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಎರಡೂ ಟೆಲಿಕಾಂಗಳು ವಿವಿಧ ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿವೆ. ಅದರಲ್ಲೂ ಹೆಚ್ಚಿನ ಡೇಟಾ ಹಾಗೂ ದೀರ್ಘಾವಧಿಯ ವ್ಯಾಲಿಡಿಟಿ ಬಯಸುವ ಬಳಕೆದಾರರಿಗೆ ಕೆಲವು ಪ್ಲಾನ್‌ಗಳು ಹೆಚ್ಚು ಗಮನ ಸೆಳೆಯುತ್ತವೆ. ಈ ಪೈಕಿ ಭಾರ್ತಿ ಏರ್‌ಟೆಲ್ ಮತ್ತು ಜಿಯೋ ಸಂಸ್ಥೆಗಳ 399 ರೂ.ಗಳ ರೀಚಾರ್ಜ್ ಪ್ಲಾನ್‌ಗಳು ಒಂದೇ ಬೆಲೆಯಲ್ಲಿದ್ದರೂ, ಡೇಟಾ ಮತ್ತು ವ್ಯಾಲಿಡಿಟಿ ವಿಚಾರದಲ್ಲಿ ವ್ಯತ್ಯಾಸ ಹೊಂದಿವೆ. ಹಾಗಾದರೆ ಏರ್‌ಟೆಲ್ ಮತ್ತು ಜಿಯೋಗಳ 399 ರೂ.ಗಳ ಬೆಲೆಯ ಈ ಎರಡು ರೀಚಾರ್ಜ್ ಯೋಜನೆಗಳಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ? ಇಲ್ಲಿದೆ ಸಂಪೂರ್ಣ ಹೋಲಿಕೆ.
Also Read : ಡಿಸ್ಕೌಂಟ್ ಬೆಲೆಯಲ್ಲಿ Vivo T5 Lite ಮೊಬೈಲ್ ಖರೀದಿಸಲು ಈ ಆಫರ್ ಬೊಂಬಾಟ್!
ಭಾರ್ತಿ ಏರ್‌ಟೆಲ್‌ನ 399 ರೂ.ಗಳ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5GB ಡೇಟಾ ಸಿಗಲಿದೆ. ಈ ಪ್ರೀಪೇಯ್ಡ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಪ್ರಯೋಜನವೂ ಸಿಗುತ್ತದೆ. ಇದರ ಜತೆಗೆ ಅಡೊಬ್ ಎಕ್ಸ್‌ಪ್ರೆಸ್ ಪ್ರಿಮಿಯಮ್ ಚಂದಾದಾರಿಕೆ ಸಹ ದೊರೆಯುತ್ತದೆ.
ರಿಲಯನ್ಸ್ ಜಿಯೋದ 399 ರೂ.ಗಳ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5GB ಡೇಟಾ ಪ್ರಯೋಜನ ಲಭ್ಯ. ಈ ಪ್ರೀಪೇಯ್ಡ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಪ್ರಯೋಜನವೂ ಸಿಗುತ್ತದೆ. ಇದರ ಜತೆಗೆ ಫ್ಯಾನ್ಸ್ ಕೋಡ್, ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯುತ್ತದೆ.
399 ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಜಿಯೋ ಹಾಗೂ ಏರ್‌ಟೆಲ್‌ನ ಯೋಜನೆಗಳು ಆಕರ್ಷಕ ಎನಿಸಿವೆ. ಅದಾಗ್ಯೂ, ಜಿಯೋ ಹಾಟ್‌ಸ್ಟಾರ್ ಓಟಿಟಿ ಬಯಸುವವರಿಗೆ ಜಿಯೋ ಪ್ಲಾನ್ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಜಿಯೋ ಯೋಜನೆಯಲ್ಲಿ ಫ್ಯಾನ್ ಕೋಡ್, ಜಿಯೋ ಹಾಟ್‌ಸ್ಟಾರ್ ಹಾಗೂ ಜಿಯೋ ಗೇಮ್ಸ್ ಚಂದಾದಾರಿಕೆ ಆಯ್ಕೆ ನೀಡಲಾಗಿದೆ. ಆದರೆ ಏರ್‌ಟೆಲ್ ಬಳಕೆದಾರರಿಗೆ ಅದರ 399 ರೂ.ಗಳ ಪ್ಲಾನ್ ಸೂಕ್ತವಾಗಿರಬಹುದು. ವಿಶೇಷವಾಗಿ ಅಡೊಬ್ ಎಕ್ಸ್‌ಪ್ರೆಸ್ ಪ್ರಿಮಿಯಮ್ ಚಂದಾದಾರಿಕೆ ಬಯಸುವ ಏರ್‌ಟೆಲ್ ಗ್ರಾಹಕರಿಗೆ ಈ ಯೋಜನೆ ಉತ್ತಮ ಎನಿಸಬಹುದು.