ಲೀಡಿಂಗ್ ಮೊಬೈಲ್ ಬ್ರಾಂಡ್ಗಳ ಪೈಕಿ ಒಂದಾಗಿರುವ ಒಪ್ಪೋ ಕಂಪನಿಯ Oppo Reno 16 ಮೊಬೈಲ್ ಮಾರುಕಟ್ಟೆಯಲ್ಲಿ ಹೆಚ್ಚಿನ ಗಮನ ಸೆಳೆದಿದೆ. ಇದೀಗ ಒಪ್ಪೋ ಕಂಪನಿಯು ಈ ಮೊಬೈಲ್ ಬೆಲೆಯಲ್ಲಿ ಏರಿಕೆ ಮಾಡಿದ್ದು, ಗ್ರಾಹಕರಿಗೆ ಅಚ್ಚರಿ ನೀಡಿದೆ. ದರ ಹೆಚ್ಚಳದ ಬೆನ್ನಲ್ಲೇ ಕಂಪನಿಯು ಈ ಮೊಬೈಲ್ನಲ್ಲಿ ಹೊಸದಾಗಿ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಅನ್ನು ಪರಿಚಯಿಸಿದೆ. ಅಂದಹಾಗೆ ಈ ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 7 ಜೆನ್ 4 ಚಿಪ್ಸೆಟ್ ಪ್ರೊಸೆಸರ್ ಪವರ್ ಒಳಗೊಂಡಿದೆ. ಅಲ್ಲದೇ ಟ್ರಿಪಲ್ ಕ್ಯಾಮೆರಾ ರಚನೆಯ ಜೊತೆಗೆ 6,700mAh ಬ್ಯಾಟರಿ ಬ್ಯಾಕ್ಅಪ್ ಸಪೋರ್ಟ್ ಸಹ ಪಡೆದುಕೊಂಡಿದೆ. ಹಾಗಾದರೆ ಒಪ್ಪೋ ರೆನೋ 16 ಮೊಬೈಲ್ ಹೊಸ ದರ ಹಾಗೂ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
Also Read : ಅಧಿಕ ಡೇಟಾ ಜೊತೆಗೆ ಹೆಚ್ಚಿನ ಓಟಿಟಿ ಸೌಲಭ್ಯ ಬೇಕಿದ್ರೆ, Vi ಕಂಪನಿಯ ಈ ಪ್ಲಾನ್ ಬೆಸ್ಟ್!
ಒಪ್ಪೋ ಕಂಪನಿಯ ಒಪ್ಪೋ ರೆನೋ 16 ಮೊಬೈಲ್ನ 8GB RAM + 256GB ಸ್ಟೋರೇಜ್ ವೇರಿಯಂಟ್ ಹಳೆಯ ದರ 66,999 ರೂ.ಗಳು ಆದರೆ ಹೊಸ ಬೆಲೆ 72,999 ರೂ.ಗಳು ಆಗಿದೆ. ಅದೇ ರೀತಿ 12GB RAM + 256GB ವೇರಿಯಂಟ್ ಮಾಡೆಲ್ ಹಳೆಯ ದರ 72,999 ರೂ.ಗಳು, ಹೊಸ ದರ 79,999 ರೂ.ಗಳು ಆಗಿದೆ. ಇನ್ನು ಹೊಸದಾಗಿ ಲಾಂಚ್ ಮಾಡಿರುವ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಬೆಲೆಯು 65,999 ರೂ.ಗಳು ಆಗಿದೆ. ಇನ್ನು ಈ ಫೋನ್ ಸ್ಟಾರಿ ವೈಟ್, ಸ್ಟೆಲ್ಲರ್ ಪರ್ಪಲ್ ಮತ್ತು ಟ್ವಿಲೈಟ್ ವೈಲೆಟ್ ಕಲರ್ ಆಯ್ಕೆ ಪಡೆದಿದೆ.
ಒಪ್ಪೋ ರೆನೋ 16 ಮೊಬೈಲ್ 6.32 ಇಂಚಿನ AMOLED ಡಿಸ್ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಜೊತೆಗೆ 3,500 nits ವರೆಗಿನ ಗರಿಷ್ಠ ಬ್ರೈಟ್ನೆಸ್ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ ಕ್ವಾಲ್ಕಾಮ್ನ ಆಕ್ಟಾ ಕೋರ್ ಸ್ನಾಪ್ಡ್ರಾಗನ್ 7 ಜೆನ್ 4 ಚಿಪ್ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ 8GB RAM + 256GB ಹಾಗೂ 12GB RAM + 256GB ವೇರಿಯಂಟ್ಗಳ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಇದು ಇತ್ತೀಚಿನ Android 16 ಆಧಾರಿತ ColorOS 16 ನೊಂದಿಗೆ ಕಾರ್ಯನಿರ್ವಹಿಸಲಿದೆ.
ಹಾಗೆಯೇ ಒಪ್ಪೋ ರೆನೋ 16 ಮೊಬೈಲ್ ಟ್ರಿಪಲ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇನ್ನುಳಿದ ಎರಡು ಕ್ಯಾಮೆರಾಗಳು ಸಹ ಕ್ರಮವಾಗಿ 50 ಮೆಗಾಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿವೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಅಲ್ಲದೇ ಇದು 6,700mAh ಬ್ಯಾಟರಿ ಬ್ಯಾಕ್ಅಪ್ ಸಪೋರ್ಟ್ ಜೊತೆಗೆ 80W ವೈಯರ್ಡ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿದೆ.