Airtel ಟೆಲಿಕಾಂನ ಈ ಅಗ್ಗದ ಪ್ಲಾನ್‌ನಲ್ಲಿ 77 ದಿನಗಳ ವ್ಯಾಲಿಡಿಟಿ ಆಕರ್ಷಕ ಡೇಟಾ ಸೌಲಭ್ಯ!
ಏರ್‌ಟೆಲ್ ಸಂಸ್ಥೆಯ 489 ರೂ.ಗಳ ಪ್ಲಾನ್ ಅಗ್ಗದ ಬೆಲೆಯಲ್ಲಿ ಉತ್ತಮ ಆಯ್ಕೆ
ಏರ್‌ಟೆಲ್ ಕಂಪನಿಯ ಈ ಪ್ರೀಪೇಯ್ಡ್ ಯೋಜನೆಯಲ್ಲಿ ಆಕರ್ಷಕ ಡೇಟಾ ಸೌಲಭ್ಯ
ಏರ್‌ಟೆಲ್ ಟೆಲಿಕಾಂನ ಈ ರೀಚಾರ್ಜ್ ಪ್ಲಾನ್‌ನಲ್ಲಿ ಉಚಿತ ವಾಯ್ಸ್ ಕರೆ ಪ್ರಯೋಜನ
ದೇಶದ ದ್ವಿತೀಯ ದೊಡ್ಡ ಟೆಲಿಕಾಂ ಸಂಸ್ಥೆ ಎನಿಸಿರುವ Airtel ಕಂಪನಿಯು ಕೆಲವು ಆಕರ್ಷಕ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ವಿ ಸಂಸ್ಥೆ ಹಾಗೂ ಜಿಯೋ ಟೆಲಿಕಾಂಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿದೆ. ಅಲ್ಲದೇ ಬಳಕೆದಾರರ ಅನುಕೂಲಕ್ಕೆ ಅನುಗುಣವಾಗಿ ಭಿನ್ನ ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳ ಆಯ್ಕೆಗಳನ್ನು ನೀಡಿದೆ. ಅದರಲ್ಲೂ ಕಂಪನಿಯ ಕಡಿಮೆ ಬೆಲೆಯಲ್ಲಿ ಆಕರ್ಷಕ ಡೇಟಾ ಅಥವಾ ಉತ್ತಮ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಕೆಲವು ಪ್ಲಾನ್‌ಗಳು ಹೆಚ್ಚು ಉಪಯುಕ್ತವಾಗಿವೆ. ಅಂತಹ ಯೋಜನೆಗಳ ಪಟ್ಟಿಯಲ್ಲಿ 489 ರೂ.ಗಳ ಪ್ರೀಪೇಯ್ಡ್ ಪ್ಲಾನ್ ಸಹ ಗಮನ ಸೆಳೆಯುತ್ತದೆ. ಪ್ರಮುಖವಾಗಿ ಹೆಚ್ಚಿನ ದೈನಂದಿನ ಡೇಟಾ ಅಗತ್ಯವಿರುವವರಿಗೆ ಈ ಯೋಜನೆ ಆಕರ್ಷಕ ಪ್ಲಾನ್ ಎನಿಸಬಹುದು. ಹಾಗಾದರೆ ಏರ್‌ಟೆಲ್ ಟೆಲಿಕಾಂನ 489 ರೂ.ಗಳ ಪ್ಲಾನ್‌ನಲ್ಲಿ ಲಭ್ಯವಿರುವ ಡೇಟಾ ಮತ್ತು ಇತರ ಪ್ರಯೋಜನಗಳ ಮಾಹಿತಿ ಮುಂದೆ ನೋಡೋಣ.
SurveyAlso Read : ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ Vivo X Fold 6 ಸ್ಮಾರ್ಟ್‌ಫೋನ್! ಬೆಲೆ ಹಾಗೂ ಫೀಚರ್ಸ್ ಗಮನಿಸಿ
Airtel 489 ರೂ.ಗಳ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್ ಟೆಲಿಕಾಂನ 489 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟು 6GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 77 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 600 SMS ಪ್ರಯೋಜನ ಸಹ ಲಭ್ಯ ಆಗುವುದು.

ಏರ್‌ಟೆಲ್ ಕಂಪನಿಯ 979 ರೂ.ಗಳ ಪ್ಲಾನ್
ಏರ್‌ಟೆಲ್ ಟೆಲಿಕಾಂನ 979 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 SMS ಪ್ರಯೋಜನ ಸಹ ಲಭ್ಯ ಆಗುವುದು. ಈ ಪ್ಲಾನ್ ಕೆಲವು ಓಟಿಟಿ ಸೌಲಭ್ಯ ಸಹ ಪಡೆದಿದೆ.
ಏರ್‌ಟೆಲ್ ಕಂಪನಿಯ 838 ರೂ.ಗಳ ಪ್ಲಾನ್
ಏರ್‌ಟೆಲ್ ಟೆಲಿಕಾಂನ 838 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 3GB ಡೇಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 SMS ಸೌಲಭ್ಯ ಕೂಡಾ ಲಭ್ಯ.
ಏರ್‌ಟೆಲ್ ಸಂಸ್ಥೆಯ 429 ರೂ.ಗಳ ಪ್ಲಾನ್
ಏರ್‌ಟೆಲ್ ಟೆಲಿಕಾಂನ 429 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 2.5GB ಡೇಟಾ ಪ್ರಯೋಜನ ಸಿಗಲಿದೆ. ಇದರ ಜೊತೆಗೆ ಈ ರೀಚಾರ್ಜ್ ಯೋಜನೆಯು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಆಗುವುದು.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
