Airtel
Airtel Plans: ದೇಶದ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆ ಎನಿಸಿರುವ ಭಾರ್ತಿ Airtel ಹಲವು ಆಕರ್ಷಕ ಯೋಜನೆಗಳ ಆಯ್ಕೆಗಳನ್ನು ಒಳಗೊಂಡಿದೆ. ಇದೀಗ Airtel ಸಂಸ್ಥೆಯು ತನ್ನ 399 ರೂ.ಗಳ ಮತ್ತು 449 ರೂ.ಗಳ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಅಪ್‌ಡೇಟ್ ಮಾಡಿದ್ದು ಪ್ಲಾನ್ ಬೆಲೆಗಳನ್ನು ಬದಲಾಯಿಸದೆ ಅನಿಯಮಿತ 4G ಮತ್ತು 5G ಡೇಟಾವನ್ನು ಲಭ್ಯ ಮಾಡಿದೆ. ಸಂಸ್ಥೆಯ ಈ ಪ್ರೀಪೇಯ್ಡ್ ಪ್ಲಾನ್‌ಗಳು ಹೊಸ ಯೋಜನೆಗಳಲ್ಲ. ಆದರೆ ಈ ಯೋಜನೆಗಳ ಡೇಟಾ ಪ್ರಯೋಜನವನ್ನು Unlimited ಎಂದು ಬದಲಾಯಿಸಲಾಗಿದೆ. ಅನ್‌ಲಿಮಿಟೆಡ್ ಕೊಡುಗೆಯು 399 ರೂ.ಗಳ ಮತ್ತು 449 ರೂ.ಗಳ ಪ್ರಿಪೇಯ್ಡ್ ಪ್ಲಾನ್‌ಗಳಿಗೆ ಮಾತ್ರ ಅನ್ವಯಿಸುತ್ತದೆ ಎನ್ನಲಾಗಿದೆ. ಹಾಗಾದರೆ Airtel ಕಂಪನಿಯ 399 ರೂ.ಗಳ ಮತ್ತು 449 ರೂ.ಗಳ ಪ್ರಿಪೇಯ್ಡ್ ಪ್ಲಾನ್‌ಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ.
Also Read : Jio ಟೆಲಿಕಾಂ ಈ ಪ್ಲಾನ್‌ಗಳಲ್ಲಿ Netflix ಚಂದಾದಾರಿಕೆ ಉಚಿತ! ಪ್ರತಿದಿನ Data, ಉಚಿತ ವಾಯ್ಸ್ ಕರೆಗಳು ಲಭ್ಯ
ಭಾರ್ತಿ Airtel ಸಂಸ್ಥೆಯ 399 ರೂಗಳ ಪ್ಲಾನ್ ಕಡಿಮೆ ಬೆಲೆಯಲ್ಲಿ ಅಧಿಕ ಡೇಟಾ ಸೌಲಭ್ಯ ಬಯಸುವ ಗ್ರಾಹಕರಿಗೆ ಸೂಕ್ತ ಎನಿಸಿಕೊಂಡಿದೆ. ಇನ್ನು Airtel ನ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ Unlimited + 2.5GB ಪ್ರತಿದಿನ ಡೇಟಾ ಸೌಲಭ್ಯ ಸಹ ಲಭ್ಯ ಆಗಲಿದೆ. ಇಲ್ಲದೇ ವ್ಯಾಲಿಡಿಟಿ ಅವಧಿಯಲ್ಲಿ ದೇಶದ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಉಚಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇದರೊಂದಿಗೆ ಪ್ರತಿದಿನ 100 SMS ಪ್ರಯೋಜನ ಸಹ ಬಳಕೆದಾರರಿಗೆ ಲಭ್ಯವಾಗಲಿದೆ. ಇದರೊಂದಿಗೆ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ, ಒಂದು ವರ್ಷದ Adobe Express Premium ಚಂದಾದಾರಿಕೆಯ ಸೌಲಭ್ಯ ದೊರೆಯುತ್ತದೆ.
ಭಾರ್ತಿ Airtel ಸಂಸ್ಥೆಯ 449 ರೂಗಳ ಪ್ಲಾನ್ ಅನಿಯಮಿತ ಡೇಟಾ ಪ್ರಯೋಜನ ಬಯಸುವ ಬಳಕೆದಾರರಿಗೆ ಅತ್ಯುತ್ತಮ ಎನಿಸಿಕೊಂಡಿದೆ. ಅಂದಹಾಗೆ ಈ ಪ್ರೀಪೇಯ್ಡ್ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಒಳಗೊಂಡಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ Unlimited + 4 GB ಪ್ರತಿದಿನ ಡೇಟಾ ಪ್ರಯೋಜನ ಲಭ್ಯ ಆಗಲಿದೆ. ಹಾಗೆಯೇ ವ್ಯಾಲಿಡಿಟಿ ಅವಧಿಯಲ್ಲಿ ದೇಶದ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಉಚಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಪಡೆದುಕೊಂಡಿದೆ. ಇದರೊಂದಿಗೆ ಪ್ರತಿದಿನ 100 SMS ಪ್ರಯೋಜನ ಸಹ ಬಳಕೆದಾರರಿಗೆ ಲಭ್ಯವಾಗಲಿದೆ.
ಇದರೊಂದಿಗೆ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ, ಒಂದು ವರ್ಷದ Adobe Express Premium ಚಂದಾದಾರಿಕೆಯ ಸೌಲಭ್ಯ ದೊರೆಯುತ್ತದೆ. ಹಾಗೆಯೇ ಈ ಯೋಜನೆಯು Google One (30GB ಕ್ಲೌಡ್ ಸ್ಟೋರೇಜ್) ಪ್ರಯೋಜನ ಸಹ ಪಡೆದುಕೊಂಡಿದೆ. ಅಲ್ಲದೇ 28 ದಿನಗಳಿಗೆ SonyLIV ಆಕ್ಸಸ್ ಸೌಲಭ್ಯ ಜೊತೆಗೆ ಉಚಿತ HelloTunes ಅನ್ನು ಒಳಗೊಂಡಿದೆ. ಈ ಬೆಲೆ ವಿಭಾಗದಲ್ಲಿ ಏರ್‌ಟೆಲ್‌ನ ಈ ಯೋಜನೆಗಳು ಜಿಯೋ ಹಾಗೂ ವಿ ಟೆಲಿಕಾಂನ ಪ್ಲಾನ್‌ಗಳಿಗಿಂತ ಆಕರ್ಷಕವಾಗಿ ಕಾಣಿಸಿವೆ.