Airtel ಟೆಲಿಕಾಂನ ಈ ಬಜೆಟ್‌ ಬೆಲೆಯ ಯೋಜನೆಯಲ್ಲಿ 365 ದಿನಗಳ ವ್ಯಾಲಿಡಿಟಿ ಲಭ್ಯ!

HIGHLIGHTS

ಏರ್‌ಟೆಲ್‌ನ ಈ ಯೋಜನೆ ವಾರ್ಷಿಕ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ

ಏರ್‌ಟೆಲ್‌ 1849 ರೂ.ಗಳ ಯೋಜನೆಯಲ್ಲಿ 365 ದಿನಗಳ ವ್ಯಾಲಿಡಿಟಿ ಪ್ರಯೋಜನ

ಈ ಯೋಜನೆಯಲ್ಲಿ Adobe express Premium ಚಂದಾದಾರಿಕೆ ದೊರೆಯುತ್ತದೆ

ಜನಪ್ರಿಯ Airtel ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಹಾಗೂ ವಿ ಸಂಸ್ಥೆಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿದೆ. ಏರ್‌ಟೆಲ್‌ ಗ್ರಾಹಕರನ್ನು ಸೆಳೆಯಲು ಭಿನ್ನ ಬೆಲೆಯ ಯೋಜನೆಗಳ ಆಯ್ಕೆ ಒಳಗೊಂಡಿದೆ. ಅವುಗಳಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ವ್ಯಾಲಿಡಿಟಿ ಇರುವ ಪ್ಲಾನ್‌ಗಳು ಸೇರಿವೆ. ಅದಾಗ್ಯೂ, ಮುಖ್ಯವಾಗಿ ಬಜೆಟ್‌ ದರದಲ್ಲಿ ವಾರ್ಷಿಕ ವ್ಯಾಲಿಡಿಟಿ ನೀಡುವ ಯೋಜನೆಗಳು ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಏರ್‌ಟೆಲ್‌ ಟೆಲಿಕಾಂನ 1849 ರೂ.ಗಳ ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಂಡಿದೆ. ಈ ಬಜೆಟ್ ಬೆಲೆಯ ಯೋಜನೆಯು ಎಸ್‌ಎಮ್‌ಎಸ್‌ ಸೌಲಭ್ಯ ಪಡೆದುಕೊಂಡಿರುವ ಜೊತೆಗೆ 365 ದಿನಗಳ ವ್ಯಾಲಿಡಿಟಿ ಸಹ ಒಳಗೊಂಡಿದೆ. ಇದರೊಂದಿಗೆ ಓಟಿಟಿ ಪ್ರಯೋಜನ ಸಹ ಒಳಗೊಂಡಿದೆ. ಹಾಗಾದರೆ ಏರ್‌ಟೆಲ್‌ ಟೆಲಿಕಾಂನ 1849 ರೂ.ಗಳ ಪ್ಲಾನ್‌ ಹಾಗೂ ಇತರೆ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.

Also Read : Xiaomi ಕಂಪನಿಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ; ಜಬರ್ದಸ್ತ್‌ ಸೌಂಡ್‌ ವ್ಯವಸ್ಥೆ

Airtel ಟೆಲಿಕಾಂನ 1849 ರೂ.ಗಳ ಯೋಜನೆಯ ಮಾಹಿತಿ

ಏರ್‌ಟೆಲ್‌ ಟೆಲಿಕಾಂನ 1849 ರೂ.ಗಳ ವಾರ್ಷಿಕ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 365 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್‌ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ರೀಚಾರ್ಜ್‌ ಪ್ಲಾನಿನಲ್ಲಿ ಒಟ್ಟು 3600 ಎಸ್‌ಎಮ್‌ಎಸ್‌ ಪ್ರಯೋಜನ ಕೂಡಾ ಸಿಗಲಿದೆ. ಈ ವ್ಯಾಲಿಡಿಟಿ ಸೌಲಭ್ಯದ ಪ್ಲಾನ್‌ ಆಗಿದ್ದು, ಇದರಲ್ಲಿ ಡೇಟಾ ಪ್ರಯೋಜನ ಇರುವುದಿಲ್ಲ. ಹಾಗೆಯೇ ಈ ಪ್ಲಾನಿನಲ್ಲಿ Adobe express Premium ಚಂದಾದಾರಿಕೆ ಸೌಲಭ್ಯ ಲಭ್ಯ.

ಏರ್‌ಟೆಲ್‌ನ ಇತರೆ ಆಕರ್ಷಕ ಪ್ಲಾನ್‌ಗಳ ಮಾಹಿತಿ

ಏರ್‌ಟೆಲ್‌ ಕಂಪನಿಯ 2249 ರೂ.ಗಳ ವಾರ್ಷಿಕ ವ್ಯಾಲಿಡಿಟಿ ಪ್ರೀಪೇಯ್ಡ್‌ ರೀಚಾರ್ಜ್‌ ಬಳಕೆದಾರರಿಗೆ ಒಟ್ಟು 365 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಯೋಜನೆಯಲ್ಲಿ ಒಟ್ಟಾರೇ ವಾರ್ಷಿಕ ವ್ಯಾಲಿಡಿಟಿ ಅವಧಿಗೆ 30GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್‌ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ರೀಚಾರ್ಜ್‌ ಪ್ಲಾನಿನಲ್ಲಿ ಒಟ್ಟು 3600 ಎಸ್‌ಎಮ್‌ಎಸ್‌ ಪ್ರಯೋಜನ ಕೂಡಾ ಸಿಗಲಿದೆ. ಹಾಗೆಯೇ ಈ ಪ್ಲಾನಿನಲ್ಲಿ Adobe express Premium ಚಂದಾದಾರಿಕೆ ಸೌಲಭ್ಯ ಲಭ್ಯ.

ಏರ್‌ಟೆಲ್‌ ಟೆಲಿಕಾಂನ 3599 ರೂ.ಗಳ ವಾರ್ಷಿಕ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನ್‌ನಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯುತ್ತದೆ. ಅಂದಹಾಗೆ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದುಕೊಂಡಿದೆ. ಇನ್ನು ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಹಾಗೆಯೇ ಈ ಯೋಜನೆಯಲ್ಲಿ Adobe express Premium ಚಂದಾದಾರಿಕೆ ಸೌಲಭ್ಯ ಲಭ್ಯ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :