Ai+ Nova 2 Power 5G
Ai+ ಮೊಬೈಲ್ ಕಂಪನಿಯ ನೂತನ Ai+ Nova 2 Power 5G ಸ್ಮಾರ್ಟ್‌ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ ಈ Ai+ ನೋವಾ 2 ಪವರ್ 5G ಫೋನ್ ಇಂದು (ಸೆಪ್ಟೆಂಬರ್ 23 ರಂದು) ಭಾರತೀಯ ಮಾರುಕಟ್ಟೆಯಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಸೇಲ್ ಪ್ರಾರಂಭ ಮಾಡಲಿದೆ. ಈ ನೂತನ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7100 5G ಚಿಪ್‌ಸೆಟ್ ಸೌಲಭ್ಯದ ಜೊತೆಗೆ 7,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ. ಅಲ್ಲದೇ ಈ ಫೋನ್ ಗೋಲ್ಡನ್ ಬ್ಲೂ ಫ್ಯೂಷನ್, ಬ್ಲೂ ಫ್ಯೂಷನ್, ಓಷನ್ ಗ್ರೀನ್, ಡೀಪ್ ಪರ್ಪಲ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಕಲರ್ ಆಯ್ಕೆಯನ್ನು ಒಳಗೊಂಡಿದೆ. ಹಾಗಾದರೇ Ai+ ನೋವಾ 2 ಪವರ್ 5G ಮೊಬೈಲ್ ಸೇಲ್, ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Vi ಟೆಲಿಕಾಂನ 625 ರೂ.ಗಳ ಪ್ಲಾನ್‌ನಲ್ಲಿ ಜಬರ್ದಸ್ತ್ ಡೇಟಾ ಜೊತೆಗೆ 60 ದಿನಗಳ ವ್ಯಾಲಿಡಿಟಿ
ದೇಶೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹೊಸ Ai+ ನೋವಾ 2 ಪವರ್ 5G ಮೊಬೈಲ್ ಇಂದು (ಸೆಪ್ಟೆಂಬರ್ 23 ರಂದು) 11:59PM ಗಂಟೆಗೆ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಮೂಲಕ ಸೇಲ್ ಶುರು ಮಾಡಲಿದೆ. ಈ ಮೊಬೈಲ್‌ನ ಆರಂಭಿಕ 6GB RAM + 128GB ಸ್ಟೋರೇಜ್ ವೇರಿಯಂಟ್ 16,999 ರೂ.ಗಳ ಬೆಲೆಯನ್ನು ಹೊಂದಿದೆ. ಹಾಗೆಯೇ 8GB RAM + 128GB ಸ್ಟೋರೇಜ್ ವೇರಿಯಂಟ್ 17,999 ರೂ.ಗಳ ಬೆಲೆಯನ್ನು ಹೊಂದಿದೆ. ಈ ಫೋನ್ ಈ ಫೋನ್ ಗೋಲ್ಡನ್ ಬ್ಲೂ ಫ್ಯೂಷನ್, ಬ್ಲೂ ಫ್ಯೂಷನ್, ಓಷನ್ ಗ್ರೀನ್, ಡೀಪ್ ಪರ್ಪಲ್ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
Ai+ ನೋವಾ 2 ಪವರ್ 5G ಸ್ಮಾರ್ಟ್‌ಫೋನ್ 6.75 ಇಂಚಿನ HD+ IPS LCD ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 120Hz ರಿಫ್ರೆಶ್ ರೇಟ್ ಜೊತೆಗೆ 450 ನಿಟ್ಸ್ ಬ್ರೈಟ್ನೆಸ್ ಸೌಲಭ್ಯ ಅನ್ನು ಪಡೆದಿದೆ. ಇದರ ಸ್ಕ್ರೀನ್ 720×1,600 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7100 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಇದು ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್ ಸಪೋರ್ಟ್ ಪಡೆದಿದೆ. ಅಲ್ಲದೇ ಮೈಕ್ರೋ ಎಸ್‌ಡಿ (microSD) ಕಾರ್ಡ್ ಬಳಸಿ ಸ್ಟೋರೇಜ್ ಅನ್ನು 1TB ವರೆಗೆ ವಿಸ್ತರಿಸಬಹುದು ಎಂದು ಕಂಪನಿ ತಿಳಿಸಿದೆ.
ಹಾಗೆಯೇ Ai+ ನೋವಾ 2 ಪವರ್ 5G ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 48MP ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 8MP ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 13MP ಕ್ಯಾಮೆರಾ ಪಡೆದುಕೊಂಡಿದೆ. ಪ್ರಮುಖ ಹೈಲೈಟ್‌ಯೆಂದರೆ ಇದು 7,000mAh ಬ್ಯಾಟರಿ ಸಪೋರ್ಟ್ ಹೊಂದಿರುವ ಜೊತೆಗೆ 33W ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.