ವಿದೇಶಕ್ಕೆ ಹೋಗುವ Airtel ಬಳಕೆದಾರರಿಗೆ ಗುಡ್‌ನ್ಯೂಸ್‌: ಉಚಿತ ರೋಮಿಂಗ್‌ ಸೌಲಭ್ಯ!

ಜನಪ್ರಿಯ Airtel ಕಂಪನಿಯು ಇದೀಗ ತನ್ನ ಬಳಕೆದಾರರಿಗಾಗಿ ಹೆಚ್ಚಿನ ಪ್ರಯೋಜನಗಳನ್ನು ಒಳಗೊಂಡ ಹೊಸ ಪೋಸ್ಟ್‌ ಪೇಯ್ಡ್ ಪ್ಲಾನ್‌ಗಳನ್ನು ಪ್ರಕಟಿಸಿದೆ. ಅಕ್ಟೋಬರ್ 8, 2026 ರಿಂದ ಗ್ರಾಹಕರು ಈ ಹೊಸ ಪೋಸ್ಟ್‌ ಪೇಯ್ಡ್ ಪ್ಲಾನ್‌ ಗಳ ಮೂಲಕ ಎಲ್ಲಾ ಹಾಲಿ ಪ್ರಯೋಜನಗಳ ಜೊತೆಗೆ ಪ್ರತಿ ವರ್ಷ ಒಂದು ಅಂತರರಾಷ್ಟ್ರೀಯ ಪ್ರವಾಸದಲ್ಲಿ ಉಚಿತ ರೋಮಿಂಗ್ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್ ಪ್ಯಾಕ್ 5 ದಿನಗಳ ವ್ಯಾಲಿಡಿಟಿ ಹೊಂದಿದ್ದು, 5GB ಡೇಟಾ, 60 ನಿಮಿಷಗಳ ಕರೆಗಳು, 25 ಔಟ್‌ಗೋಯಿಂಗ್ SMS ಹಾಗೂ ಉಚಿತ ಇನ್‌ಕಮಿಂಗ್ SMS ಗಳನ್ನು ಒದಗಿಸುತ್ತದೆ. ಗ್ರಾಹಕರು ಈ 5 ದಿನಗಳ ಪ್ಯಾಕ್ ಅನ್ನು ತಮಗೆ ಬೇಕಾದ ನಿಖರ ಸಮಯದಲ್ಲಿ ಸಕ್ರಿಯಗೊಳಿಸಿಕೊಳ್ಳುವ ಸಂಪೂರ್ಣ ಸೌಲಭ್ಯವನ್ನು ನೀಡಲಾಗಿದೆ. ಏರ್‌ಟೆಲ್ ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಪ್ಲಾನ್ ಹೊಂದಿರುವ ಗ್ರಾಹಕರಿಗೆ ಆ ಪ್ಲಾನ್‌ನಲ್ಲಿ ಒಳಗೊಂಡಿರುವ ಪ್ರತಿಯೊಬ್ಬ ಕುಟುಂಬ ಸದಸ್ಯರಿಗೂ ಈ ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್ ಆಯ್ಕೆ ಲಭ್ಯವಿರುತ್ತದೆ.

Also Read : ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ Vivo X Fold 6 ಸ್ಮಾರ್ಟ್‌ಫೋನ್‌! ಬೆಲೆ ಹಾಗೂ ಫೀಚರ್ಸ್ ಗಮನಿಸಿ

Airtel: ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್ ಸೌಲಭ್ಯ

ಫಾಸ್ಟ್ ಲೇನ್ ಟೆಕ್ನಾಲಜಿ, ಅನ್‌ಲಿಮಿಟೆಡ್ ಡೇಟಾ, ಸ್ಪ್ಯಾಮ್ ಹಾಗೂ ವಂಚನೆಯ ಲಿಂಕ್‌ಗಳ ವಿರುದ್ಧ ನೆಟ್‌ವರ್ಕ್ ಮಟ್ಟದ ರಕ್ಷಣೆಯೊಂದಿಗೆ ಅತ್ಯುತ್ತಮ ಅನುಭವ ನೀಡುವ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳಿಗೆ ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್ ಹೊಸ ಸೇರ್ಪಡೆಯಾಗಿದೆ. ಗ್ರಾಹಕರು ವಿವಿಧ ಮನರಂಜನಾ ಚಂದಾದಾರಿಕೆಗಳನ್ನು (ಸಬ್‌ಸ್ಕ್ರಿಪ್ಷನ್‌ಗಳು) ಆನಂದಿಸುವುದರ ಜೊತೆಗೆ, ಏರ್‌ಟೆಲ್ ಪೋಸ್ಟ್‌ಪೇಯ್ಡ್ ಅಡ್ವಾಂಟೇಜ್ ಕ್ಲಬ್ ಮೂಲಕ ಕಾಮಿಡಿ ಶೋಗಳು, ಸಿನಿಮಾ ಪ್ರೀಮಿಯರ್‌ಗಳು ಮತ್ತು ಸಂಗೀತ ಕಛೇರಿಗಳು ಸೇರಿದಂತೆ ಹಲವು ವಿಶೇಷ ಅನುಭವಗಳ ಪ್ರವೇಶಾವಕಾಶವನ್ನೂ ಪಡೆಯಬಹುದು.

ಹೊಸ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳ ಮಾಹಿತಿ

ಏರ್‌ಟೆಲ್‌ನ 499 ರೂ. ಪ್ಲಾನ್‌ನಲ್ಲಿ ಒಬ್ಬರಿಗೆ ಅನ್‌ಲಿಮಿಟೆಡ್ ಡೇಟಾ ಮತ್ತು ಕಾಲಿಂಗ್ ಲಭ್ಯ. ಇದರೊಂದಿಗೆ ಕಾಲಿಂಗ್, ಸ್ಪ್ಯಾಮ್ ಮತ್ತು ವಂಚನೆ ತಡೆಗಟ್ಟುವಿಕೆ, ಎಕ್ಸ್‌ ಸ್ಟ್ರೀಮ್ ಪ್ಲೇ ಪ್ರೀಮಿಯಂ, ಗೂಗಲ್ ಒನ್ ಪ್ರತಿ ವರ್ಷ ಪ್ರತಿ ಸಿಮ್‌ಗೆ 1 ಉಚಿತ ಟ್ರಿಪ್ (ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್).

ಏರ್‌ಟೆಲ್‌ನ 749 ರೂ.ಗಳ ಪ್ಲಾನಿನಲ್ಲಿ 2 ಸದಸ್ಯರ ಕುಟುಂಬ ಅನ್‌ಲಿಮಿಟೆಡ್ ಡೇಟಾ ಮತ್ತು ಕಾಲಿಂಗ್ ಸೌಲಭ್ಯ. ಹಾಗೆಯೇ ಸ್ಪ್ಯಾಮ್ ಮತ್ತು ವಂಚನೆ ತಡೆಗಟ್ಟುವಿಕೆ, ಅಮೆಜಾನ್ ಪ್ರೈಮ್, ಜಿಯೋಹಾಟ್‌ಸ್ಟಾರ್, ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ, ಗೂಗಲ್ ಒನ್ ಪ್ರತಿ ವರ್ಷ ಪ್ರತಿ ಸಿಮ್‌ಗೆ 1 ಉಚಿತ ಟ್ರಿಪ್(ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್).

ಏರ್‌ಟೆಲ್‌ನ 1049 ರೂ.ಗಳ ಪ್ಲಾನಿನಲ್ಲಿ 3 ಸದಸ್ಯರ ಕುಟುಂಬ ಅನ್‌ಲಿಮಿಟೆಡ್ ಡೇಟಾ ಮತ್ತು ಕಾಲಿಂಗ್ ಸೌಲಭ್ಯ. ಅಲ್ಲದೇ ಸ್ಪ್ಯಾಮ್ ಮತ್ತು ವಂಚನೆ ತಡೆಗಟ್ಟುವಿಕೆ ಆಪಲ್ ಐಕ್ಲೌಡ್+, ಆಪಲ್ ಮ್ಯೂಸಿಕ್, ಅಮೆಜಾನ್ ಪ್ರೈಮ್, ಜಿಯೋಹಾಟ್‌ಸ್ಟಾರ್, ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ, ಗೂಗಲ್ ಒನ್, ಪ್ರತಿ ವರ್ಷ ಪ್ರತಿ ಸಿಮ್‌ಗೆ 1 ಉಚಿತ ಟ್ರಿಪ್ (ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್).

ಏರ್‌ಟೆಲ್‌ನ 1249 ರೂ.ಗಳ ಪ್ಲಾನಿನಲ್ಲಿ 4 ಸದಸ್ಯರ ಕುಟುಂಬ ಅನ್‌ಲಿಮಿಟೆಡ್ ಡೇಟಾ ಮತ್ತು ಕಾಲಿಂಗ್ ಸೌಲಭ್ಯ. ಇದರೊಂದಿಗೆ ಸ್ಪ್ಯಾಮ್ ಮತ್ತು ವಂಚನೆ ತಡೆಗಟ್ಟುವಿಕೆ ಆಪಲ್ ಐಕ್ಲೌಡ್+, ಆಪಲ್ ಮ್ಯೂಸಿಕ್, ಅಮೆಜಾನ್ ಪ್ರೈಮ್, ಜಿಯೋಹಾಟ್‌ಸ್ಟಾರ್, ಎಕ್ಸ್‌ಸ್ಟ್ರೀಮ್ ಪ್ಲೇ ಪ್ರೀಮಿಯಂ, ಗೂಗಲ್ ಒನ್, ಪ್ರತಿ ವರ್ಷ ಪ್ರತಿ ಸಿಮ್‌ಗೆ 1 ಉಚಿತ ಟ್ರಿಪ್ (ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್).

ಏರ್‌ಟೆಲ್‌ನ 1449 ರೂ.ಗಳ ಪ್ಲಾನಿನಲ್ಲಿ 4 ಸದಸ್ಯರ ಕುಟುಂಬ ಅನ್‌ಲಿಮಿಟೆಡ್ ಡೇಟಾ ಮತ್ತು ಕಾಲಿಂಗ್ ಪ್ರಯೋಜನ. ಅಲ್ಲದೇ ಸ್ಪ್ಯಾಮ್ ಮತ್ತು ವಂಚನೆ ತಡೆಗಟ್ಟುವಿಕೆ, ನೆಟ್‌ಫ್ಲಿಕ್ಸ್ ಬೇಸಿಕ್, ಆಪಲ್ ಐಕ್ಲೌಡ್+, ಆಪಲ್ ಮ್ಯೂಸಿಕ್, ಅಮೆಜಾನ್ ಪ್ರೈಮ್, ಜಿಯೋಹಾಟ್‌ಸ್ಟಾರ್, ಎಕ್ಸ್‌ ಸ್ಟ್ರೀಮ್ ಪ್ಲೇ ಪ್ರೀಮಿಯಂ, ಗೂಗಲ್ ಒನ್, ಪ್ರತಿ ವರ್ಷ ಪ್ರತಿ ಸಿಮ್‌ಗೆ 1 ಉಚಿತ ಟ್ರಿಪ್ (ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್).

ಏರ್‌ಟೆಲ್‌ನ 1799 ರೂ.ಗಳ ಪ್ಲಾನಿನಲ್ಲಿ 5 ಸದಸ್ಯರ ಕುಟುಂಬ ಅನ್‌ಲಿಮಿಟೆಡ್ ಡೇಟಾ ಮತ್ತು ಕಾಲಿಂಗ್ ಸೌಲಭ್ಯ. ಅಲ್ಲದೇ ಸ್ಪ್ಯಾಮ್ ಮತ್ತು ವಂಚನೆ ತಡೆಗಟ್ಟುವಿಕೆ, ನೆಟ್‌ಫ್ಲಿಕ್ಸ್ ಸ್ಟ್ಯಾಂಡರ್ಡ್, ಆಪಲ್ ಐಕ್ಲೌಡ್+, ಆಪಲ್ ಮ್ಯೂಸಿಕ್, ಅಮೆಜಾನ್ ಪ್ರೈಮ್, ಜಿಯೋಹಾಟ್‌ಸ್ಟಾರ್, ಎಕ್ಸ್‌ ಸ್ಟ್ರೀಮ್ ಪ್ಲೇ ಪ್ರೀಮಿಯಂ, ಗೂಗಲ್ ಒನ್, ಪ್ರತಿ ವರ್ಷ ಪ್ರತಿ ಸಿಮ್‌ಗೆ 1 ಉಚಿತ ಟ್ರಿಪ್ (ಉಚಿತ ಇಂಟರ್‌ನ್ಯಾಷನಲ್ ರೋಮಿಂಗ್).

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :