Airtel New Offer: ಬೆಲೆ ಏರಿಕೆ ಬದಲಾಗಿ ಏರ್ಟೆಲ್​ ಈಗ ಹೊಸ ಆಫರ್ ತಂದಿದೆ ನೋಡಿ! ಬಳಕೆದಾರರು ಫುಲ್ ಖುಷ್!

Airtel New Offer: ಬೆಲೆ ಏರಿಕೆ ಬದಲಾಗಿ ಏರ್ಟೆಲ್​ ಈಗ ಹೊಸ ಆಫರ್ ತಂದಿದೆ ನೋಡಿ! ಬಳಕೆದಾರರು ಫುಲ್ ಖುಷ್!
HIGHLIGHTS

ಏರ್ಟೆಲ್ ತನ್ನ ಮೂರು ಯೋಜನೆಗಳಲ್ಲಿ ಓಟಿಟಿ ನೋಡಬಹುದಾದ ಸೌಲಭ್ಯವನ್ನು ನೀಡಿದೆ

ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ನ ಪ್ರಯೋಜನ ಮತ್ತು ಒಂದು ವರ್ಷದ ಮಾನ್ಯತೆಯೊಂದಿಗೆ ನೀಡಿದೆ

ಪ್ರತಿದಿನ 3GB ಡೇಟಾ, ಅನಿಯಮಿತ ಧ್ವನಿ ಕರೆ, 100 SMS ಜೊತೆಗೆ ಏರ್ಟೆಲ್​ನ ಕೆಲ ಆಫರ್​ಗಳಿಂದ ಕೂಡಿದೆ.

Airtel reintroduced new prepaid plans: ಏರ್ಟೆಲ್ ಆರಂಭದಲ್ಲಿ ಬೆಲೆ ಏರಿಕೆ ನಂತರ 500MB ಉಚಿತ ಡೇಟಾ ಬಳಿಕ ಇದೀಗ ಏರ್ಟೆಲ್ ತನ್ನ ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಫ್ರೀ ಟ್ರಯಲ್ ಲಾಭಗಳನ್ನು ಹೊಂದಿರುವ ಯೋಜನೆಗಳನ್ನು ಪರಿಚಯಿಸಿದೆ. ಆರಂಭದಲ್ಲಿ ಬೆಲೆ ಏರಿಕೆ ನಂತರ 500MB ಉಚಿತ ಡೇಟಾ ಬಳಿಕ ಇದೀಗ ಏರ್ಟೆಲ್ ತನ್ನ ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಫ್ರೀ ಟ್ರಯಲ್ ಲಾಭಗಳನ್ನು ಹೊಂದಿರುವ ಯೋಜನೆಗಳನ್ನು ಪರಿಚಯಿಸಿದೆ.

ಏರ್ಟೆಲ್​ನ ರೂ. 599, ರೂ. 838 ಮತ್ತು ರೂ. 3359 ಪ್ಲಾನ್‌ಗಳು 

ಏರ್ಟೆಲ್ ತನ್ನ ಮೂರು ಯೋಜನೆಗಳಲ್ಲಿ ಓಟಿಟಿ ನೋಡಬಹುದಾದ ಸೌಲಭ್ಯವನ್ನು ನೀಡಿದೆ. ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ನ ಪ್ರಯೋಜನ ಮತ್ತು ಒಂದು ವರ್ಷದ ಮಾನ್ಯತೆಯೊಂದಿಗೆ ಏರ್ಟೆಲ್​ನ ರೂ. 599, ರೂ. 838 ಮತ್ತು ರೂ. 3359 ಪ್ಲಾನ್‌ಗಳು ವಿಭಿನ್ನ ವ್ಯಾಲಿಡಿಟಿಗಳು ಮತ್ತು ವಿಭಿನ್ನ ಪ್ರಯೋಜನಗಳೊಂದಿಗೆ ಬಳಕೆದಾರರಿಗೆ ಲಭ್ಯವಿವೆ. ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ OTT ಪ್ರಯೋಜನವನ್ನು ನೀಡುವ ಏರ್ಟೆಲ್‌ನ ಮೊದಲ ಯೋಜನೆಯು ರೂ. 599 ಬೆಲೆಯನ್ನು ಹೊಂದಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಪ್ರತಿದಿನ 3GB ಡೇಟಾ, ಅನಿಯಮಿತ ಧ್ವನಿ ಕರೆ, 100 SMS ಜೊತೆಗೆ ಏರ್ಟೆಲ್​ನ ಕೆಲ ಆಫರ್​ಗಳಿಂದ ಕೂಡಿದೆ.

ಅಂತೆಯೆ ರೂ. 838 ಯೋಜನೆಯು 2GB ದೈನಂದಿನ ಡೇಟಾವನ್ನು ನೀಡುತ್ತದೆ. ಆದರೆ 56 ದಿನಗಳ ದೀರ್ಘಾವಧಿಯ ಮಾನ್ಯತೆ ಹೊಂದಿದೆ. ಇದರಲ್ಲೂ ಅನಿಯಮಿತ ಕರೆ ಸೇರಿದಂತೆ ಹಿಂದಿನ ಪ್ಲಾನ್​ನ ಎಲ್ಲ ಸೌಲಭ್ಯ ನೀಡಲಾಗಿದೆ. ಕೊನೇಯದಾಗಿ 3359 ರೂ. ಯೋಜನೆಯು 365 ದಿನಗಳು ಮಾನ್ಯತೆ ಹೊಂದಿದೆ. ಪ್ರತಿ ದಿನ 2GB ಡೇಟಾ ನೀಡಲಾಗಿದ್ದು ಅನಿಯಮಿತ ಧ್ವನಿ ಕರೆ, 100 SMS/ದಿನ ಮತ್ತು ಏರ್ಟೆಲ್‌ ಥ್ಯಾಂಕ್ಸ್ ಪ್ರಯೋಜನಗಳೊಂದಿಗೆ ಎರಡೂ ಯೋಜನೆಗಳು Wynk Music, Shaw Academy, FASTag ನಲ್ಲಿ ರೂ. 100 ಕ್ಯಾಶ್‌ಬ್ಯಾಕ್ ಆಫರ್​ನಿಂದ ಕೂಡಿದೆ.

ಇತ್ತೀಚೆಗಷ್ಟೆ ಏರ್ಟೆಲ್ ತನ್ನ ನಾಲ್ಕು ಪ್ರಿಪೇಯ್ಡ್ ಯೋಜನೆಗಳ ಡೇಟಾ ಪ್ರಯೋಜನಗಳನ್ನು 500MB ಉಚಿತ ಡೇಟಾದೊಂದಿಗೆ ನವೀಕರಿಸಿತ್ತು. ಅಂದರೆ ಏರ್ಟೆಲ್​ನ ರೂ. 719, ರೂ. 299, ರೂ. 265 ಮತ್ತು ರೂ. 839 ಪ್ಲಾನ್‌ಗಳೊಂದಿಗೆ ರೀಚಾರ್ಜ್ ಮಾಡುವ ಬಳಕೆದಾರರು ಪ್ರತಿದಿನ 500MB ಡೇಟಾವನ್ನು ಕಂಪನಿಯಿಂದ ಉಚಿತವಾಗಿ ಪಡೆಯಲು ಸಾಧ್ಯವಾಗುತ್ತದೆ. ಆದರೆ ಈ 500MB ಡೇಟಾ ಆಫರ್ ಅನ್ನು ಗ್ರಾಹಕರು ರಿಡೀಮ್ ಮಾಡಿಕೊಳ್ಳಬೇಕಿದೆ. ಅಂದರೆ ಈ ನಾಲ್ಕು ಯೋಜನೆಗಳಲ್ಲಿ ಒಂದು ಯೋಜನೆಯನ್ನು ರೀಚಾರ್ಜ್ ಮಾಡಲು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಿಮ್ಮ ಸಂಖ್ಯೆಗೆ Airtel ನೀಡುತ್ತಿರುವ ಇತ್ತೀಚಿನ ಉತ್ತಮ ಪ್ಲಾನ್‌ಗಳನ್ನು ಇಲ್ಲಿಂದ My Offers ಉಚಿತವಾಗಿ ಪರೀಕ್ಷಿಸಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo