Xiaomi Mi 9 SE ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು 48MP ಕ್ಯಾಮೆರಾ 6GB RAM ಮತ್ತು ಈ ಫೀಚರ್ಗಳನ್ನು ನಿರೀಕ್ಷಿಸಬವುದು.
ಹಿಂಭಾಗದಲ್ಲಿ 48MP + 13MP + 8MP ಮತ್ತು ಸೆಲ್ಫಿಗಾಗಿ 20MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
ಭಾರತದಲ್ಲಿ ನಂಬರ್ 1 ಸ್ಮಾರ್ಟ್ಫೋನ್ ತಯಾರರಾದ Xiaomi ಕಂಪನ ತನ್ನ ಮುಂದಿನ 48MP ಮೆಗಾಪಿಕ್ಸೆಲ್ ಕ್ಯಾಮೆರಾದ Xiaomi Mi 9 SE ಸ್ಮಾರ್ಟ್ಫೋನನ್ನು ಶೀಘ್ರದಲ್ಲೇ ಭಾರತದಲ್ಲಿ ಆರಂಭಿಸಲಿದ್ದಾರೆ. ಕಳೆದ ತಿಂಗಳು ಈ ಸ್ಮಾರ್ಟ್ಫೋನ್ ಚೀನಾದಲ್ಲಿ ಬಿಡುಗಡೆಯಾಯಿತು. Xiaomi ತನ್ನ ಜಾಗತಿಕ ವೆಬ್ಸೈಟ್ ಅಲ್ಲಿ Xiaomi Mi 9 SE ಸ್ಮಾರ್ಟ್ಫೋನ್ ಪಟ್ಟಿ ಮಾಡಿದೆ. ಈ ಸ್ಮಾರ್ಟ್ಫೋನ್ ಶೀಘ್ರದಲ್ಲೇ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಬಿಡುಗಡೆಯಾಗಲಿದೆ ಎಂದರ್ಥ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 712 ಚಿಪ್ಸೆಟ್ ಪ್ರೊಸೆಸರೊಂದಿಗೆ 6GB ಯ RAM ಅನ್ನು ಹೊಂದಿದೆ.
ಈ Xiaomi Mi 9 SE ಆರಂಭಿಕ ಬೆಲೆಗೆ ಚೀನಾದಲ್ಲಿ ಪ್ರಾರಂಭಿಸಿದೆ 1,999 ಯುವಾನ್ (ಸುಮಾರು 21,200 ರೂಗಳು). ಮತ್ತು ಈ ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. 6GB ಯ RAM / 64GB ಸ್ಟೋರೇಜ್ ಮತ್ತು 6GB ಯ RAM / 128GB ಯ ಸ್ಟೋರೇಜ್. ಅದರ ಎರಡನೇ ರೂಪಾಂತರ (6GB RAM / 128 GB) ಅನ್ನು 2,299 ಯುವಾನ್ (ಸುಮಾರು 24,350 ರೂಗಳು) ನಲ್ಲಿ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಈ ಸ್ಮಾರ್ಟ್ಫೋನ್ ಅನ್ನು ಸುಮಾರು 15,000 ರಿಂದ 20,000 ರೂಗಳೊಳಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಈ ಸ್ಮಾರ್ಟ್ಫೋನಿನ ಬಗ್ಗೆ ಚೀನಾದಲ್ಲಿ ಬಿಡುಗಡೆಯಾಗಿರುವ ವೇರಿಯಂಟ್ ಫೀಚರ್ಗಳ ಹೇಳಬೇಕೆಂದರೆ ಇದು 5.97 ಇಂಚಿನ ಫುಲ್ HD+ ಡಿಸ್ಪ್ಲೇಯನ್ನು ನೀಡುತ್ತದೆ. ಈ ಫೋನ್ ಡ್ಯುಯಲ್ 4G ವೋಲ್ಟಿಯನ್ನು ಬೆಂಬಲಿಸುತ್ತದೆ. ಆಂಡ್ರಾಯ್ಡ್ 9.0 ಪೈ ಆಧರಿಸಿ MIUI10 ಆಪರೇಟಿಂಗ್ ಸಿಸ್ಟಂನಲ್ಲಿ ಈ ಸ್ಮಾರ್ಟ್ಫೋನ್ ಕಾರ್ಯನಿರ್ವಹಿಸುತ್ತದೆ. ಫೋನ್ ಸಹ ಪ್ರದರ್ಶನದ ಫಿಂಗರ್ಪ್ರಿಂಟ್ ಸೆನ್ಸರ್ ಅನ್ನು ಹೊಂದಿದೆ. ಅದರ ಹಿಂದೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಕ್ಯಾಮೆರಾ ಫೀಚರ್ಗಳ ಸೆನ್ಸರ್ಗಳಲ್ಲಿ 48MP ಮೆಗಾಪಿಕ್ಸೆಲ್ಗಳವರೆಗಿರುವ 13MP ಮೆಗಾಪಿಕ್ಸೆಲ್ಗಳವರೆಗಿರುವ ಮತ್ತೋಂದು 8MP ಮೆಗಾಪಿಕ್ಸೆಲ್ಗಳವರೆಗಿರುವ ಹೊಂದಿದೆ ಟ್ರಿಪಲ್ ಕ್ಯಾಮೆರಾ ಹೊಂದಿದೆ.
ಈ ಫೋನ್ ವಿಡಿಯೋ ಕಾಲಿಂಗ್ ಮತ್ತು ಸೆಲ್ಫಿಗಾಗಿ ಫ್ರಂಟಲ್ಲಿ 20MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಈ ಫೋನಿಗೆ ಪವರ್ ನೀಡಲು 3070mAh ಬ್ಯಾಟರಿಯನ್ನು ಹೊಂದಿದೆ. ಇದು 18w ವ್ಯಾಟ್ಗಳ ವೇಗದ ಚಾರ್ಜಿಂಗ್ ಫೋನ್ ಬೆಂಬಲಿಸುತ್ತದೆ. Xiaomi ಚೀನಾದಲ್ಲಿ ಒಟ್ಟಾರೆಯಾಗಿ ಮೂರು ಹೊಸ ಸ್ಮಾರ್ಟ್ಫೋನ್ಗಳನ್ನು ಕಳೆದ ತಿಂಗಳು ಬಿಡುಗಡೆಗೊಳಿಸಿದೆ. ಅವೆಂದರೆ Xiaomi Mi 9, Mi 9 Transparent Edition ಮತ್ತು Mi 9 SE ಪ್ರಾರಂಭಿಸಲಾಯಿತು. ಈ ಸ್ಮಾರ್ಟ್ಫೋನ್ಗಳು ಭಾರತದಲ್ಲಿನ ಬೆಲೆ ಅಥವಾ ಲಭ್ಯತೆ ಅಥವಾ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile