ಇಂದು Xiaomi 17T ಸ್ಮಾರ್ಟ್‌ಫೋನ್‌ ಸೇಲ್‌ ಪ್ರಾರಂಭ! ಬೆಲೆ ಹಾಗೂ ಫೀಚರ್ಸ್‌ ನೋಡಿ

HIGHLIGHTS

ಇಂದು ಭಾರತದಲ್ಲಿ ಶಿಯೋಮಿ 17T ಫೋನ್‌ ಸೇಲ್‌ ಶುರು

ಶಿಯೋಮಿ 17T ಫೋನ್‌ 6,500mAh ಬ್ಯಾಟರಿ ಒಳಗೊಂಡಿದೆ

ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಅಲ್ಟ್ರಾ ಪ್ರೊಸೆಸರ್‌ ಪಡೆದಿದೆ

ಶಿಯೋಮಿ ಕಂಪನಿಯ ಹೊಸ Xiaomi 17T ಸ್ಮಾರ್ಟ್‌ಫೋನ್‌ ಇಂದು (ಜೂನ್ 10 ರಂದು) ದೇಶೀಯಲ್ಲಿ ಮಾರುಕಟ್ಟೆಗೆ ಸೇಲ್‌ ಶುರು ಮಾಡಲಿದೆ. ಇನ್ನು ಈ ಮೊಬೈಲ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಅಲ್ಟ್ರಾ ಚಿಪ್‌ಸೆಟ್ ಪ್ರೊಸೆಸರ್‌ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಮೊಬೈಲ್‌ 50MP ಪ್ರಾಥಮಿಕ ಕ್ಯಾಮೆರಾ ರಚನೆ ಸಹ ಪಡೆದಿದೆ. ಹಾಗೆಯೇ ಈ ಫೋನ್‌ ಬ್ಲ್ಯಾಕ್‌, ಬ್ಲೂ ಹಾಗೂ ವೈಲೇಟ್ ಬಣ್ಣಗಳ ಆಯ್ಕೆ ಹೊಂದಿದೆ. ಹಾಗಾದರೆ ಶಿಯೋಮಿ 17T ಸ್ಮಾರ್ಟ್‌ಫೋನ್‌ನ ಸೇಲ್‌ ಮಾಹಿತಿ ಹಾಗೂ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : 256GB ಸ್ಟೋರೇಜ್ ಇರುವ iQOO 15R ಮೊಬೈಲ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!

ಇಂದು Xiaomi 17T ಮೊಬೈಲ್‌ ಸೇಲ್‌

ಶಿಯೋಮಿ ಸಂಸ್ಥೆಯ ಮುಂಬರುವ ನೂತನ ಶಿಯೋಮಿ 17T ಸ್ಮಾರ್ಟ್‌ಫೋನ್‌ ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್‌ ಇಂದು (ಜೂನ್ 10 ರಂದು) ಮಧ್ಯಾಹ್ನ 12 ಗಂಟೆಗೆ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಪ್ರಾರಂಭ ಮಾಡಲಿದೆ. ಈ ಮೊಬೈಲ್‌ನ 12GB RAM + 256GB ಸ್ಟೋರೇಜ್‌ ವೇರಿಯಂಟ್‌ 59,999 ರೂ.ಗಳ ಬೆಲೆಯನ್ನು ಹೊಂದಿದೆ (ಸೇಲ್‌ ದಿನದಂದು 54,999ರೂ.ಗಳಿಗೆ ಲಭ್ಯ). ಹಾಗೆಯೇ 512GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 64,999 ರೂ.ಗಳು ಆಗಿದೆ. ಇನ್ನು ಈ ಫೋನ್‌ ಬ್ಲ್ಯಾಕ್‌, ಬ್ಲೂ ಹಾಗೂ ವೈಲೇಟ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ಶಿಯೋಮಿ 17T ಫೋನ್‌ ಫೀಚರ್ಸ್‌ ಹೀಗಿವೆ

ಶಿಯೋಮಿ 17T ಮೊಬೈಲ್‌ 6.59 ಇಂಚಿನ 1.5K AMOLED ಡಿಸ್‌ಪ್ಲೇ ಹೊಂದಿದ್ದು ಇದರ ಜೊತೆಗೆ ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದುಕೊಂಡಿದೆ. ಹಾಗೆಯೇ ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8500 ಅಲ್ಟ್ರಾ ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 12GB RAM + 256GB ಹಾಗೂ 12GB + 512GB ಸ್ಟೋರೇಜ್‌ ವೇರಿಯಂಟ್ ಆಯ್ಕೆ ಪಡೆದಿದೆ. ಅಲ್ಲದೇ ಥರ್ಮಲ್ ನಿರ್ವಹಣೆಗಾಗಿ ಫೋನ್ ಕಂಪನಿಯ 3D ಐಸ್‌ಲೂಪ್ ಕೂಲಿಂಗ್ ವ್ಯವಸ್ಥೆಯ ಸೌಲಭ್ಯ ಪಡೆದುಕೊಂಡಿದೆ.

ಶಿಯೋಮಿ 17T ಮೊಬೈಲ್‌ ಲೀಕಾ ಟ್ಯೂನ್ಡ್ ಟ್ರಿಪಲ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು OIS ನೊಂದಿಗೆ 50MP ಲೈಟ್ ಫ್ಯೂಷನ್ 800 ಸೆನ್ಸಾರ್‌ ಆಗಿದೆ. ಸೆಕೆಂಡರಿ ಕ್ಯಾಮೆರಾವು 50MP ಸೆನ್ಸಾರ್‌ ಹಾಗೂ ತೃತೀಯ ಕ್ಯಾಮೆರಾ 12MP ಸೆನ್ಸರ್ ಸಾಮರ್ಥ್ಯದಲ್ಲಿ ಇದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್‌ 6,500mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 67W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಅನ್ನು ಪಡೆದುಕೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :