Xiaomi 17 ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆಗೆ ದಿನಾಂಕ ನಿಗದಿ; ಅಚ್ಚರಿಯ ಫೀಚರ್ಸ್ ಖಚಿತ!
ಇದೇ ಫೆಬ್ರವರಿ 28 ರಂದು Xiaomi 17 ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ
ಈ ಸರಣಿಯು Snapdragon 8 Elite Gen 5 ಪ್ರೊಸೆಸರ್ ಪಡೆದಿರಲಿದೆ
Xiaomi 17 ಮತ್ತು Xiaomi 17 Ultra ಫೋನ್‌ಗಳು 120Hz ರಿಫ್ರೆಶ್ ರೇಟ್ ಪಡೆದಿರಲಿವೆ
Xiaomi ಸಂಸ್ಥೆಯು ಲೀಡಿಂಗ್ ಮೊಬೈಲ್ ಬ್ರ್ಯಾಂಡ್‌ಗಳ ಪೈಕಿ ಒಂದಾಗಿ ಗುರುತಿಸಿಕೊಂಡಿದೆ. ಶಿಯೋಮಿ ಕಂಪನಿಯು ಇದೀಗ Xiaomi 17 ಸ್ಮಾರ್ಟ್‌ಫೋನ್ ಸರಣಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ಫ್ಲ್ಯಾಗ್‌ಶಿಪ್ ಸರಣಿಯು Xiaomi 17 ಮತ್ತು Xiaomi 17 Ultra ಮಾಡೆಲ್‌ಗಳನ್ನು ಒಳಗೊಂಡಿರುವುದು ಬಹುತೇಕ ಪಕ್ಕಾ ಆಗಿದೆ. ಅಂದಹಾಗೆ ಈ ದೈತ್ಯ ಸರಣಿಯು ಇದೇ ವಾರದಲ್ಲಿ ಜಾಗತಿಕ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇನ್ನು ಪ್ರೀಮಿಯಂ ರೇಂಜ್‌ನಲ್ಲಿ ಲಗ್ಗೆ ಇಡಲಿರುವ ಈ ಸರಣಿ ಬಿಡುಗಡೆಗೂ ಮುನ್ನವೇ Xiaomi 17 ಮತ್ತು Xiaomi 17 Ultra ಸ್ಮಾರ್ಟ್‌ಫೋನ್‌ಗಳ ಬೆಲೆ ಲೀಕ್ ಆಗಿದ್ದು ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿವೆ. ಹಾಗಾದರೇ Xiaomi 17 ಮತ್ತು Xiaomi 17 Ultra ಫೋನ್‌ಗಳ ಲಾಂಚ್ ದಿನಾಂಕ, ನಿರೀಕ್ಷಿತ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ದೈತ್ಯ iQOO 15 ಬೆಲೆಯಲ್ಲಿ ಭರ್ಜರಿ ಇಳಿಕೆ! ಟ್ರಿಪಲ್ 50MP ಕ್ಯಾಮೆರಾ, ಬಿಗ್ ಬ್ಯಾಟರಿ ಸಪೋರ್ಟ್
Xiaomi 17 ಮತ್ತು Xiaomi 17 Ultra ಬಿಡುಗಡೆ ದಿನಾಂಕ
ಶಿಯೋಮಿ ಕಂಪನಿಯ Xiaomi 17 ಮತ್ತು Xiaomi 17 Ultra ಫೋನ್‌ಗಳು ಇದೇ ಫೆಬ್ರವರಿ 28 ರಂದು ಜಾಗತಿಕ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ. ಇನ್ನು ಟಿಪ್‌ಸ್ಟಾರ್‌ಗಳ ಲೀಕ್ ಮಾಹಿತಿಯಂತೆ Xiaomi 17 ಫೋನ್ 80,000 ರೂ.ಗಳ ಬೆಲೆಯನ್ನು ಪಡೆದಿರಬಹುದು ಎಂದು ಹೇಳಲಾಗಿದೆ. ಅದೇ ರೀತಿ Xiaomi 17 Ultra ಮೊಬೈಲ್ 1,25,000 ರೂಗಳ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಈ ಎರಡು ಫೋನ್‌ಗಳ ನಿರೀಕ್ಷಿತ ಬೆಲೆ ಗಮನಿಸಿದರೆ ಈ ಎರಡು ದೈತ್ಯ ಮೊಬೈಲ್‌ಗಳು ಆಪಲ್ ಐಫೋನ್ 17 ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ S25 ಸರಣಿಯ ಫೋನ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಸೂಚನೆಗಳನ್ನು ಹೊರಹಾಕಿವೆ.

Xiaomi 17 ನಿರೀಕ್ಷಿತ ಫೀಚರ್ಸ್ ಮಾಹಿತಿ
ಶಿಯೋಮಿ ಸಂಸ್ಥೆಯ ಮುಂಬರುವ Xiaomi 17 ಸ್ಮಾರ್ಟ್‌ಫೋನ್ 6.3 ಇಂಚಿನ OLED ಮಾದರಿಯ ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಹಾಗೆಯೇ ಈ ಮೊಬೈಲ್ Snapdragon 8 Elite Gen 5 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿರಲಿದೆ. ಇನ್ನು ಇದು Leica ಲೆನ್ಸ್ ಒಳಗೊಂಡ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿರಲಿದ್ದು ಇದರ ಮುಖ್ಯ ಕ್ಯಾಮೆರಾವು 50MP ಸೆನ್ಸಾರ್ ಆಗಿರಲಿದೆ. ಇನ್ನುಳಿದ ಎರಡು ಕ್ಯಾಮೆರಾಗಳು ಸಹ 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಬರಲಿವೆ ಎನ್ನಲಾಗಿದೆ. ಅಂದಹಾಗೆ ಈ ಫೋನ್ 7,000mAh ಬ್ಯಾಟರಿ ಬ್ಯಾಕ್‌ಅಪ್ ಬೆಂಬಲ ಹೊಂದಿರಬಹುದು.
Xiaomi 17 Ultra ನಿರೀಕ್ಷಿತ ಫೀಚರ್ಸ್ ಮಾಹಿತಿ
Xiaomi ಸ್ಮಾರ್ಟ್‌ಫೋನ್ ಸಂಸ್ಥೆಯ ನೂತನ Xiaomi 17 Ultra ಇದು 120Hz ರಿಫ್ರೆಶ್ ರೇಟ್ ಜೊತೆಗೆ ವಿಶಾಲ 6.9 ಇಂಚಿನ LTPO AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಹಾಗೆಯೇ ಈ ಮೊಬೈಲ್ ಕೂಡಾ ಕ್ವಾಲ್ಕಮ್‌ನ ಇತ್ತೀಚಿನ Snapdragon 8 Elite Gen 5 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಇನ್ನು ಇದು Leica ಲೆನ್ಸ್ ಒಳಗೊಂಡ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿರಲಿದ್ದು ಇದರ ಮುಖ್ಯ ಕ್ಯಾಮೆರಾವು 200MP ಟೆಲಿಫೋಟೋ ಸೆನ್ಸಾರ್ ಆಗಿರಲಿದೆ. ಇನ್ನುಳಿದ ಎರಡು ಕ್ಯಾಮೆರಾಗಳು ಸಹ 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಬರಲಿವೆ ಎಂದು ಹೇಳಲಾಗಿದೆ. ಅಂದಹಾಗೆ ಈ ಫೋನ್ 6,800mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 90W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಸಪೋರ್ಟ್ ಹೊಂದಿರಬಹುದು.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile