Vivo Y300c Launched in China
ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ (Vivo) ಇಂದು ಸದ್ದಿಲ್ಲದೇ ತನ್ನ ತಾಯ್ನಾಡಿನಲ್ಲಿ ಹೊಸ Vivo Y300c ಸ್ಮಾರ್ಟ್ಫೋನ್ 6500mAh ಬ್ಯಾಟರಿಯೊಂದಿಗೆ ಬಿಡುಗಡೆಗೊಳಿಸಿದೆ. ಪ್ರಸ್ತುತ Vivo Y300c ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. Vivo Y300c ಸ್ಮಾರ್ಟ್ಫೋನ್ ಡಿಸೆಂಟಾಗಿ ನಡೆಯುವ MediaTek Dimensity 6300 ಚಿಪ್‌ಸೆಟ್ ಮತ್ತು 12GB RAM ಜೊತೆಗೆ 120Hz ರಿಫ್ರೆಶ್ ದರದೊಂದಿಗೆ 6.77 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಬಗ್ಗೆ ಸಂಪೂರ್ಣ ವಿವರಣೆಗಳೊಂದಿಗೆ ಬೆಲೆ ಮತ್ತು ಆಫರ್ ಎಲ್ಲವನ್ನು ಈ ಕೆಳಗೆ ತಿಳಿಯಬಹುದು.
ಈ ಅದ್ದೂರಿಯ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ (Vivo) ಬಿಡುಗಡೆಗೊಳಿಸಿದ ಈ Vivo Y300c ಸ್ಮಾರ್ಟ್ಫೋನ್ ಬೆಲೆಯನ್ನು ನೋಡುವುದಾದರೆ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ಚೀನಾದಲ್ಲಿ CNY 1,399 (ಸರಿಸುಮಾರು ರೂ. 16,000) ಮತ್ತೊಂದು 12GB RAM ಮತ್ತು 512GB ಸ್ಟೋರೇಜ್ ಚೀನಾದಲ್ಲಿ CNY 1,599 (ಸರಿಸುಮಾರು ರೂ. 19,000) ಆಗಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಜಾಗತಿಕವಾಗಿ Green Pine, Snow White ಮತ್ತು Star Diamond Black ಬಣ್ಣಗಳಲ್ಲಿ ಪರಿಚಯಿಸಲಾಗಿದೆ. ಆದರೆ ಭಾರತದಲ್ಲಿ ಯಾವ ಬೆಲೆಗೆ ಬರಲಿದೆ ಎನ್ನುವುದರ ಯಾವುದೇ ಮಾಹಿತಿಗಳಿಲ್ಲ.
Vivo Y300c ಸ್ಮಾರ್ಟ್ಫೋನ್ 6.77 ಇಂಚಿನ FHD+ (1080×2392) OLED ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಫೋನ್ 94.21% ಸ್ಕ್ರೀನ್ ಟು ಬಾಡಿಯನ್ನು 387 ಪಿಪಿಐ ಪಿಕ್ಸೆಲ್ ಡೆನ್ಸಿಟಿಯನ್ನು ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ ನಿಮಗೆ 120Hz ರಿಫ್ರೇಶ್ ರೇಟ್ ಹೊಂದಿದೆ. ಈ ಸ್ಮಾರ್ಟ್ಫೋನ್ ಕ್ಯಾಮೆರಾದ ಬಗ್ಗೆ ಮಾತಾನಡುವುದಾದರೆ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊನದಿದ್ದು 50MP ಪ್ರೈಮರಿ f/1.8 ಅಪರ್ಚರ್ ಮತ್ತೊಂದು f/2.4 ಅಪರ್ಚರ್ ಹೊಂದಿರುವ 2MP ಮೆಗಾಪಿಕ್ಸೆಲ್ ಬ್ಲರ್ ಕ್ಯಾಮೆರಾ ಸೇರಿವೆ.
ಇದನ್ನೂ ಓದಿ: ಬರೋಬ್ಬರಿ 7300mAh ಬ್ಯಾಟರಿಯ iQOO Z10 5G ಸ್ಮಾರ್ಟ್‌ಫೋನ್ ಭಾರಿ ಡಿಸ್ಕೌಂಟ್‌ಗಳೊಂದಿಗೆ ಮಾರಾಟ!
ಅಲ್ಲದೆ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ ನಿಮಗೆ 8MP ಕ್ಯಾಮೆರಾವನ್ನು ಹೊಂದಿದೆ. Vivo Y300c ಸ್ಮಾರ್ಟ್ಫೋನ್ MediaTek Dimensity 6300 ಚಿಪ್‌ಸೆಟ್ ಅನ್ನು 12GB LPDDR4X RAM ಮತ್ತು 512GB ವರೆಗೆ UFS2.2 ಸ್ಟೋರೇಜ್ ಜೊತೆಗೆ ಜೋಡಿಸಲಾಗಿದೆ. ಸ್ಮಾರ್ಟ್ಫೋನ್ ನಿಮಗೆ ಆಂಡ್ರಾಯ್ಡ್ 15 ಜೊತೆಗೆ ನಡೆಯುತ್ತದೆ. ಈಗಾಗಲೇ ಹೇಳಿರುವಂತೆ 6500mAh ಬ್ಯಾಟರಿಯನ್ನು ಹೊಂದಿದ್ದು 44W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.
ಹೆಚ್ಚುವರಿಯಾಗಿ ಸಂಪರ್ಕದ ವಿಷಯದಲ್ಲಿ ವಿವೋ Y300c ಬ್ಲೂಟೂತ್ 5.4, GPS, AGPS, Beidou, GLONASS, Galileo, QZSS, OTG, Wi-Fi, ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್ ಅನ್ನು ಸಹ ಬೆಂಬಲಿಸುತ್ತದೆ.