Vivo Y300 GT launched
Vivo Y300 GT launched: ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ ತನ್ನ ಹೊಚ್ಚ ಹೊಸ Vivo Y300 GT ಸ್ಮಾರ್ಟ್ಫೋನ್ ತನ್ನ ತಾಯ್ನಾಡಿನಲ್ಲಿ ಬಿಡುಗಡೆಗೊಳಿಸಿದೆ. ಇದರಲ್ಲಿ 12GB RAM ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿಯಂತಹ ಅನೇಕ ಫೀಚರ್ಗಳೊಂದಿಗೆ ಬರುತ್ತದೆ. ಆದರೆ ಈ Vivo Y300 GT ಸ್ಮಾರ್ಟ್ಫೋನ್ ಪ್ರಸ್ತುತ ಭಾರತದಲ್ಲಿ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲ ಎನ್ನುವುದನ್ನು ಗಮನಿಸಬಹುದು.
ಫೋನ್ ಕಡಿಮೆ ನೀಲಿ ಬೆಳಕು ಮತ್ತು ಕಡಿಮೆ ಫ್ಲಿಕರ್ ಪ್ರಮಾಣೀಕರಣಗಳೊಂದಿಗೆ 1.5K AMOLED ಡಿಸ್ಪ್ಲೇಯನ್ನು ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಬೆಲೆ ಎಷ್ಟು ಮತ್ತು ಇದರ ಫೀಚರ್ಗಳೇನು ತಿಳಿಯಿರಿ.ಚೀನಾದಲ್ಲಿ ಬಿಡುಗಡೆಯಾದ Vivo Y300 GT ಆರಂಭಿಕ ಬೆಲೆ 8GB + 256GB ಆಯ್ಕೆಗೆ CNY 1,899 (ಸರಿಸುಮಾರು ರೂ. 22,400) ರಿಂದ ಪ್ರಾರಂಭವಾಗುತ್ತದೆ. ಆದರೆ 12GB + 256GB ಮತ್ತು 12GB + 512GB ಕಾನ್ಫಿಗರೇಶನ್‌ಗಳ ಬೆಲೆಯನ್ನು ಇದರ ಕ್ರಮವಾಗಿ CNY 2,099 (ಸರಿಸುಮಾರು ರೂ. 24,400) ಮತ್ತು CNY 2,399 (ಸರಿಸುಮಾರು ರೂ. 28,400) ಆಗಿದೆ.
Vivo Y300 GT ಸ್ಮಾರ್ಟ್ಫೋನ್ 6.78 ಇಂಚಿನ 1.5K (1,260×2,800 ಪಿಕ್ಸೆಲ್‌ಗಳು) AMOLED ಡಿಸ್ಪ್ಲೇಯನ್ನು 144Hz ರಿಫ್ರೆಶ್ ರೇಟ್‌ನೊಂದಿಗೆ 360Hz ಟಚ್ ಸ್ಯಾಂಪ್ಲಿಂಗ್ ದರ, 5,500 nits ವರೆಗಿನ ಗರಿಷ್ಠ ಹೊಳಪು ಮತ್ತು HDR10+ ಬೆಂಬಲದೊಂದಿಗೆ SGS ಟೆಕ್ನಾಲಜಿ ಕಡಿಮೆ ನೀಲಿ ಬೆಳಕು ಮತ್ತು ಕಡಿಮೆ ಫ್ಲಿಕರ್ ಪ್ರಮಾಣೀಕರಣಗಳನ್ನು ಹೊಂದಿದೆ.
ಇದನ್ನೂ ಓದಿ: India-Pakistan: ಯಾವುದೇ ಪರಿಸ್ಥಿತಿಯನ್ನು ಎದುರಿಸಲು Jio, Airtel, Vi ಮತ್ತು BSNL ಸಿದ್ದರಿರುವಂತೆ ಕೇಂದ್ರದಿಂದ ಸೂಚನೆ!
ಈ ಫೋನ್ ಚೀನಾದಲ್ಲಿ ಅಧಿಕೃತ ಇ-ಸ್ಟೋರ್ ಮತ್ತು ಆಯ್ದ ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಮೂಲಕ ಖರೀದಿಸಲು ಲಭ್ಯವಿದೆ. ಇದನ್ನು ಪ್ರಸ್ತುತ ಕಪ್ಪು ಮತ್ತು ಡೆಸರ್ಟ್ ಗೋಲ್ಡ್ ಬಣ್ಣಗಳಲ್ಲಿ ನೀಡಲಾಗುತ್ತದೆ. ಈ ಸ್ಮಾರ್ಟ್‌ಫೋನ್ 4nm ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 8400 ಚಿಪ್‌ನೊಂದಿಗೆ ಚಾಲಿತವಾಗಿದ್ದು 12GB ವರೆಗಿನ LPDDR5 RAM ಮತ್ತು 512GB ವರೆಗಿನ UFS3.1 ಆನ್‌ಬೋರ್ಡ್ ಸ್ಟೋರೇಜ್ ಜೋಡಿಸಲ್ಪಟ್ಟಿದೆ.
ಇದು ಆಂಡ್ರಾಯ್ಡ್ 15-ಆಧಾರಿತ OriginOS 5 ಸ್ಕಿನ್‌ನೊಂದಿಗೆ ಬರುತ್ತದೆ. Vivo Y300 GT 7,620mAh ಬ್ಯಾಟರಿಯನ್ನು ಹೊಂದಿದ್ದು, 90W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಇದು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP65 ರೇಟಿಂಗ್ ಅನ್ನು ಹೊಂದಿದೆ.