Vivo Y300 GT ಬರೋಬ್ಬರಿ 7620mAh ಬ್ಯಾಟರಿ ಮತ್ತು Dimensity 8400 ಚಿಪ್ನೊಂದಿಗೆ ಬಿಡುಗಡೆ!
ವಿವೋ ತನ್ನ ಹೊಚ್ಚ ಹೊಸ Vivo Y300 GT ಸ್ಮಾರ್ಟ್ಫೋನ್ ತನ್ನ ತಾಯ್ನಾಡಿನಲ್ಲಿ ಬಿಡುಗಡೆಗೊಳಿಸಿದೆ.
Vivo Y300 GT ಸ್ಮಾರ್ಟ್ಫೋನ್ 2GB RAM ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿಯೊಂದಿಗೆ ಪರಿಚಯವಾಗಿದೆ.
Vivo Y300 GT ಸ್ಮಾರ್ಟ್ಫೋನ್ ಚೀನಾದಲ್ಲಿ ಬೆಲೆ ಎಷ್ಟು ಮತ್ತು ಇದರ ಫೀಚರ್ಗಳೇನು ತಿಳಿಯಿರಿ.
Vivo Y300 GT launched: ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ ತನ್ನ ಹೊಚ್ಚ ಹೊಸ Vivo Y300 GT ಸ್ಮಾರ್ಟ್ಫೋನ್ ತನ್ನ ತಾಯ್ನಾಡಿನಲ್ಲಿ ಬಿಡುಗಡೆಗೊಳಿಸಿದೆ. ಇದರಲ್ಲಿ 12GB RAM ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿಯಂತಹ ಅನೇಕ ಫೀಚರ್ಗಳೊಂದಿಗೆ ಬರುತ್ತದೆ. ಆದರೆ ಈ Vivo Y300 GT ಸ್ಮಾರ್ಟ್ಫೋನ್ ಪ್ರಸ್ತುತ ಭಾರತದಲ್ಲಿ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲ ಎನ್ನುವುದನ್ನು ಗಮನಿಸಬಹುದು.
Vivo Y300 GT ಸ್ಮಾರ್ಟ್ಫೋನ್ ಬೆಲೆ ಎಷ್ಟು?
ಫೋನ್ ಕಡಿಮೆ ನೀಲಿ ಬೆಳಕು ಮತ್ತು ಕಡಿಮೆ ಫ್ಲಿಕರ್ ಪ್ರಮಾಣೀಕರಣಗಳೊಂದಿಗೆ 1.5K AMOLED ಡಿಸ್ಪ್ಲೇಯನ್ನು ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಬೆಲೆ ಎಷ್ಟು ಮತ್ತು ಇದರ ಫೀಚರ್ಗಳೇನು ತಿಳಿಯಿರಿ.ಚೀನಾದಲ್ಲಿ ಬಿಡುಗಡೆಯಾದ Vivo Y300 GT ಆರಂಭಿಕ ಬೆಲೆ 8GB + 256GB ಆಯ್ಕೆಗೆ CNY 1,899 (ಸರಿಸುಮಾರು ರೂ. 22,400) ರಿಂದ ಪ್ರಾರಂಭವಾಗುತ್ತದೆ. ಆದರೆ 12GB + 256GB ಮತ್ತು 12GB + 512GB ಕಾನ್ಫಿಗರೇಶನ್ಗಳ ಬೆಲೆಯನ್ನು ಇದರ ಕ್ರಮವಾಗಿ CNY 2,099 (ಸರಿಸುಮಾರು ರೂ. 24,400) ಮತ್ತು CNY 2,399 (ಸರಿಸುಮಾರು ರೂ. 28,400) ಆಗಿದೆ.
Vivo Y300 GT ಸ್ಮಾರ್ಟ್ಫೋನ್ ಫೀಚರ್ ಮತ್ತು ವಿಶೇಷತೆಗಳೇನು?
Vivo Y300 GT ಸ್ಮಾರ್ಟ್ಫೋನ್ 6.78 ಇಂಚಿನ 1.5K (1,260×2,800 ಪಿಕ್ಸೆಲ್ಗಳು) AMOLED ಡಿಸ್ಪ್ಲೇಯನ್ನು 144Hz ರಿಫ್ರೆಶ್ ರೇಟ್ನೊಂದಿಗೆ 360Hz ಟಚ್ ಸ್ಯಾಂಪ್ಲಿಂಗ್ ದರ, 5,500 nits ವರೆಗಿನ ಗರಿಷ್ಠ ಹೊಳಪು ಮತ್ತು HDR10+ ಬೆಂಬಲದೊಂದಿಗೆ SGS ಟೆಕ್ನಾಲಜಿ ಕಡಿಮೆ ನೀಲಿ ಬೆಳಕು ಮತ್ತು ಕಡಿಮೆ ಫ್ಲಿಕರ್ ಪ್ರಮಾಣೀಕರಣಗಳನ್ನು ಹೊಂದಿದೆ.
ಇದನ್ನೂ ಓದಿ: India-Pakistan: ಯಾವುದೇ ಪರಿಸ್ಥಿತಿಯನ್ನು ಎದುರಿಸಲು Jio, Airtel, Vi ಮತ್ತು BSNL ಸಿದ್ದರಿರುವಂತೆ ಕೇಂದ್ರದಿಂದ ಸೂಚನೆ!
ಈ ಫೋನ್ ಚೀನಾದಲ್ಲಿ ಅಧಿಕೃತ ಇ-ಸ್ಟೋರ್ ಮತ್ತು ಆಯ್ದ ಆನ್ಲೈನ್ ಚಿಲ್ಲರೆ ವ್ಯಾಪಾರಿಗಳ ಮೂಲಕ ಖರೀದಿಸಲು ಲಭ್ಯವಿದೆ. ಇದನ್ನು ಪ್ರಸ್ತುತ ಕಪ್ಪು ಮತ್ತು ಡೆಸರ್ಟ್ ಗೋಲ್ಡ್ ಬಣ್ಣಗಳಲ್ಲಿ ನೀಡಲಾಗುತ್ತದೆ. ಈ ಸ್ಮಾರ್ಟ್ಫೋನ್ 4nm ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 8400 ಚಿಪ್ನೊಂದಿಗೆ ಚಾಲಿತವಾಗಿದ್ದು 12GB ವರೆಗಿನ LPDDR5 RAM ಮತ್ತು 512GB ವರೆಗಿನ UFS3.1 ಆನ್ಬೋರ್ಡ್ ಸ್ಟೋರೇಜ್ ಜೋಡಿಸಲ್ಪಟ್ಟಿದೆ.
ಇದು ಆಂಡ್ರಾಯ್ಡ್ 15-ಆಧಾರಿತ OriginOS 5 ಸ್ಕಿನ್ನೊಂದಿಗೆ ಬರುತ್ತದೆ. Vivo Y300 GT 7,620mAh ಬ್ಯಾಟರಿಯನ್ನು ಹೊಂದಿದ್ದು, 90W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಇದು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP65 ರೇಟಿಂಗ್ ಅನ್ನು ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile