Vivo T5 Pro 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಏರಿಕೆ! ಖರೀದಿಸುವ ಮುನ್ನ ಇಲ್ಲಿ ಗಮನಿಸಿ

HIGHLIGHTS

ವಿವೋ T5 ಪ್ರೊ ಮೊಬೈಲ್‌ ದರದಲ್ಲಿ ಭಾರೀ ಏರಿಕೆ

ವಿವೋ T5 ಪ್ರೊ ಫೋನ್‌ ಬೆಲೆಯಲ್ಲಿ 7,000 ರೂ.ಗಳ ಹೆಚ್ಚಳ

ವಿವೋ T5 ಪ್ರೊ ಮೊಬೈಲ್‌ ಸ್ನಾಪ್‌ಡ್ರಾಗನ್ 7s Gen 4 ಪ್ರೊಸೆಸರ್‌ ಒಳಗೊಂಡಿದೆ

Vivo T5 Pro 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಏರಿಕೆ! ಖರೀದಿಸುವ ಮುನ್ನ ಇಲ್ಲಿ ಗಮನಿಸಿ

ಜನಪ್ರಿಯ ಮೊಬೈಲ್‌ ಎನಿಸಿರುವ ವಿವೋ ಕಂಪನಿಯ ಕೆಲವು ಸ್ಮಾರ್ಟ್‌ಫೋನ್‌ಗಳು ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಆದರೆ ಇದೀಗ ವಿವೋ ಸಂಸ್ಥೆಯ Vivo T5 Pro 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ದಿಢೀರ್‌ ಏರಿಕೆ ಆಗಿದ್ದು ಖರೀದಿದಾರರು ಅಚ್ಚರಿಪಡುವಂತೆ ಆಗಿದೆ. ವಿವೋ ಈ ಮೊಬೈಲ್‌ ಬೆಲೆಯಲ್ಲಿ 7,000 ರೂ.ಗಳ ಪರಿಷ್ಕರಣೆ ಮಾಡಿರುವುದರಿಂದ ಹೊಸ ಫೋನ್‌ ಖರೀದಿಸುವ ಗ್ರಾಹಕರು ಎರಡು ಬಾರಿ ಯೋಚಿಸುವಂತಾಗಿದೆ. ಅಂದಹಾಗೆ ಈ ಫೋನ್‌ ಸ್ನಾಪ್‌ಡ್ರಾಗನ್ 7s Gen 4 ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಮೊಬೈಲ್‌ 9,020mAh ಸಿಲಿಕಾನ್‌ ಕಾರ್ಬನ್‌ ಬ್ಯಾಟರಿ ಸಪೋರ್ಟ್‌ ಒಳಗೊಂಡಿದೆ. ಹಾಗಾದರೆ ವಿವೋ T5 ಪ್ರೊ 5G ಫೋನಿನ ಹೊಸ ಬೆಲೆ ಹಾಗೂ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Moto G Max ಮೊಬೈಲ್‌ನ ಫಸ್ಟ್‌ ಸೇಲ್‌ ನಾಳೆ ಪ್ರಾರಂಭ; ಜಬರ್ದಸ್ತ್‌ ಫೀಚರ್ಸ್‌

Vivo T5 Pro 5G ಮೊಬೈಲ್‌ ಬೆಲೆಯಲ್ಲಿ ಏರಿಕೆ

ಭಾರತದಲ್ಲಿ ವಿವೋ ಸಂಸ್ಥೆಯ ವಿವೋ T5 ಪ್ರೊ 5G ಮೊಬೈಲ್‌ ಬೆಲೆಯಲ್ಲಿ ಏಕಾಏಕಿ ಏರಿಕೆ ಆಗಿದೆ. ಈ ಮೊಬೈಲ್‌ನ 8GB + 128GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 35,999 ರೂ.ಗಳು ಆಗಿದ್ದರೆ, ಹೊಸ ಬೆಲೆ 41,999 ರೂ.ಗಳು ಆಗಿದೆ. ಇನ್ನು 8GB + 256GB ಸ್ಟೋರೇಜ್‌ ವೇರಿಯಂಟ್‌ ಹಳೆಯ ದರ 39,999 ರೂ.ಗಳು ಆಗಿದ್ದರೆ, ಹೊಸ ಪ್ರೈಸ್‌ಟ್ಯಾಗ್‌ 46,999 ರೂ.ಗಳು ಆಗಿದೆ.

vivo t5 pro

ವಿವೋ T5 ಪ್ರೊ 5G ಮೊಬೈಲ್‌ ಫೀಚರ್ಸ್‌

ಹೊಸ ವಿವೋ T5 ಪ್ರೊ 5G ಮೊಬೈಲ್‌ 6.83 ಇಂಚಿನ 1.5K AMOLED ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ ಇದರ ಸ್ಕ್ರೀನ್‌ 144Hz ವರೆಗೆ ರಿಫ್ರೆಶ್ ರೇಟ್‌ ಅನ್ನು ಪಡೆದಿದೆ. ಇದರ ಡಿಸ್‌ಪ್ಲೇಯು 5,000 nits ಪೀಕ್‌ ಬ್ರೈಟ್ನೆಸ್‌ ಸಪೋರ್ಟ್‌ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್‌ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 7s Gen 4 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಇದು ಆಂಡ್ರಾಯ್ಡ್ 16 ಆಧಾರಿತ ColorOS 16 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಹಾಗೆಯೇ ವಿವೋ T5 ಪ್ರೊ 5G ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿವೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೋನಿ IMX882 ಸೆನ್ಸರ್ ಸಾಮರ್ಥ್ಯದಲ್ಲಿ ಇದೆ ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ರಚನೆ ಹೊಂದಿದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಮೊಬೈಲ್‌ 32 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್‌ 9,020mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಅನ್ನು ಪಡೆದುಕೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile