ಜನಪ್ರಿಯ ವಿವೋ ಸಂಸ್ಥೆಯು ಹೊಸದಾಗಿ Vivo T5 Pro 5G ಸ್ಮಾರ್ಟ್‌ಫೋನ್ ಅನ್ನು ಇಂದು (ಏಪ್ರಿಲ್ 15 ರಂದು) ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್ ಮಾಡಿದೆ. ಮೀಡ್‌ರೇಂಜ್ ವಿಭಾಗದಲ್ಲಿ ಎಂಟ್ರಿ ಕೊಟ್ಟಿರುವ ಈ ಹೊಸ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 7s Gen 4 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಮೊಬೈಲ್ 9,020mAh ಸಿಲಿಕಾನ್ ಕಾರ್ಬನ್ ಬ್ಯಾಟರಿ ಸಪೋರ್ಟ್ ಒಳಗೊಂಡಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಸೋನಿ IMX882 ಸೆನ್ಸಾರ್ ಕ್ಯಾಮೆರಾ ರಚನೆ ಹೊಂದಿದೆ. ಅಲ್ಲದೇ ಇದು ಕಾಸ್ಮಿಕ್ ಬ್ಲ್ಯಾಕ್ ಮತ್ತು ಗ್ಲೇಸಿಯರ್ ಬ್ಲೂ ಕಲರ್ ಆಯ್ಕೆಗಳನ್ನು ಒಳಗೊಂಡಿದೆ. ಹಾಗಾದರೆ ವಿವೋ T5 ಪ್ರೊ 5G ಮೊಬೈಲ್‌ನ ಬೆಲೆ, ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : 5000mAh ಬ್ಯಾಟರಿ ಇರುವ ಈ ಮೊಬೈಲ್ ಜಸ್ಟ್ 8,999 ರೂ.ಗಳಿಗೆ ಲಭ್ಯ! ಬೆಸ್ಟ್ ಆಫರ್ ಇದೆ
ನೂತನ ವಿವೋ T5 ಪ್ರೊ 5G ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ವೇರಿಯಂಟ್ ಆಯ್ಕೆಗಳೊಂದಿಗೆ ಬಂದಿದೆ. ಈ ಮೊಬೈಲ್‌ನ 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ 29,999 ರೂ.ಗಳು ಆಗಿದೆ. ಹಾಗೆಯೇ 8GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 33,999 ರೂ.ಗಳು ಆಗಿದೆ. ಅದೇ ರೀತಿ 12GB RAM + 256GB ವೇರಿಯಂಟ್ ಬೆಲೆ 39,999 ರೂ.ಗಳು ಆಗಿದೆ. ಅಂದಹಾಗೆ ಈ ಮೊಬೈಲ್ ಕಾಸ್ಮಿಕ್ ಬ್ಲ್ಯಾಕ್ ಮತ್ತು ಗ್ಲೇಸಿಯರ್ ಬ್ಲೂ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಇನ್ನು ಈ ಸ್ಮಾರ್ಟ್‌ಫೋನ್ ಇದೇ ಏಪ್ರಿಲ್ 21 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ವಿವೋ ಇಂಡಿಯಾ ಆನ್‌ಲೈನ್ ಸ್ಟೋರ್ ಮೂಲಕ ಮಾರಾಟಕ್ಕೆ ಬರಲಿದೆ.
ಹೊಸ ವಿವೋ T5 ಪ್ರೊ 5G ಮೊಬೈಲ್ 6.83 ಇಂಚಿನ 1.5K AMOLED ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ ಇದರ ಸ್ಕ್ರೀನ್ 144Hz ವರೆಗೆ ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಇದರ ಡಿಸ್‌ಪ್ಲೇಯು 5,000 nits ಪೀಕ್ ಬ್ರೈಟ್ನೆಸ್ ಸಪೋರ್ಟ್ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 7s Gen 4 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಇದು ಆಂಡ್ರಾಯ್ಡ್ 16 ಆಧಾರಿತ ColorOS 16 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಹಾಗೆಯೇ ವಿವೋ T5 ಪ್ರೊ 5G ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿವೆ. ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೋನಿ IMX882 ಸೆನ್ಸರ್ ಸಾಮರ್ಥ್ಯದಲ್ಲಿ ಇದೆ ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ರಚನೆ ಹೊಂದಿದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಮೊಬೈಲ್ 32 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ 9,020mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಪಡೆದುಕೊಂಡಿದೆ.