Vivo T3 Pro ಮತ್ತು Vivo T3 Ultra ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ! ಹೊಸ ಆಫರ್ ಬೆಲೆ ಮತ್ತು ಫೀಚರ್ಗಳೇನು?

HIGHLIGHTS

Vivo T3 Pro ಮತ್ತು Vivo T3 Ultra ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರಿ ಬೆಲೆ ಕಡಿತಗೊಳಿಸಿದೆ.

ಎಲ್ಲ ರೂಪಾಂತರಗಳ ಮೇಲೆ 2000 ರೂಗಳ ಬೆಲೆ ಇಳಿಕೆಯೊಂದಿಗೆ 1500 ರೂಗಳ ಬ್ಯಾಂಕ್ ಡಿಸ್ಕೌಂಟ್ ಪಡೆಯಬಹುದು.

50MP ಸೆಲ್ಫಿ ಕ್ಯಾಮೆರಾ, 3D curved AMOLED ಡಿಸ್ಪ್ಲೇ, Sony IMX921 ಸೆನ್ಸರ್ ಮತ್ತು 5500mAh ಬ್ಯಾಟರಿಯನ್ನು ಹೊಂದಿವೆ.

Vivo T3 Pro ಮತ್ತು Vivo T3 Ultra ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ! ಹೊಸ ಆಫರ್ ಬೆಲೆ ಮತ್ತು ಫೀಚರ್ಗಳೇನು?

Vivo T3 Pro and Vivo T3 Ultra Price Dropped in India: ನಿಮಗೆ ಉತ್ತಮ ಬಜೆಟ್ ಬೆಲೆಗೊಂದು ಲೇಟೆಸ್ಟ್ ಕ್ಯಾಮೆರಾ ಸ್ಮಾರ್ಟ್ ಫೋನ್ ಹುಡುಕುತ್ತಿದ್ದರೆ ಭಾರತದಲ್ಲಿ ಕ್ಯಾಮೆರಾಗಳಿಗಾಗಿಯೇ ಹೆಸರುವಾಸಿಯಾಗಿರುವ ಬೆಸ್ಟ್ ಸ್ಮಾರ್ಟ್‌ಫೋನ್‌ ಬ್ರಾಂಡ್ ವಿವೋ (Vivo) ತನ್ನ ಲೇಟೆಸ್ಟ್ Vivo T3 Pro ಮತ್ತು Vivo T3 Ultra ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರಿ ಬೆಲೆ ಕಡಿತಗೊಳಿಸಿದೆ. ಲೇಟೆಸ್ಟ್ ಫೀಚರ್ಗಳೊಂದಿಗೆ ತುಂಬಿರುವ ಈ 5G ಸ್ಮಾರ್ಟ್‌ಫೋನ್‌ಗಳನ್ನು Flipkart ಮೂಲಕ ಇವುಗಳ ನೈಜ ಬೆಲೆಗಿಂತ ಅತಿ ಕಡಿಮೆ ಬೆಲೆಗೆ ಖರೀದಿಸಬಹುದು.

Digit.in Survey
✅ Thank you for completing the survey!

ಭಾರತದಲ್ಲಿ ಪ್ರಸ್ತುತ Vivo T3 Pro ಮತ್ತು Vivo T3 Ultra ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳನ್ನು ನೋಡುವುದಾದರೆ 50MP ಸೆಲ್ಫಿ ಕ್ಯಾಮೆರಾ, 3D curved AMOLED ಡಿಸ್ಪ್ಲೇ, Sony IMX921 ಸೆನ್ಸರ್ ಮತ್ತು 5500mAh ಬ್ಯಾಟರಿಯೊಂದಿಗೆ ಅನೇಕ ಪವರ್ಫುಲ್ ಫೀಚರ್ಗಳನ್ನು ಈ ಫೋನ್ಗಳು ಹೊಂದಿವೆ.

ಭಾರತದಲ್ಲಿ Vivo T3 Pro ಮತ್ತು Vivo T3 Ultra ಆಫರ್ ಬೆಲೆ:

ಪ್ರಸ್ತುತ ಫ್ಲಿಪ್ಕಾರ್ಟ್ ಮೂಲಕ ಬೆಲೆ ಕಳೆದುಕೊಂಡಿರುವ ಈ Vivo T3 Pro ಮತ್ತು Vivo T3 Ultra ಸ್ಮಾರ್ಟ್ಫೋನ್ ಬೆಲೆ ಮತ್ತು ಆಫರ್ ಬಗ್ಗೆ ಮಾತನಾಡುವುದಾದರೆ ಮೊದಲಿಗೆ Vivo T3 Pro ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹22,999 ರೂಗಳಿಗೆ ಮತ್ತು ಇದರ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹24,999 ರೂಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಆದರೆ ಈ ಫೋನ್ ಬಿಡುಗಡೆಯ ಬೆಲೆಯಲ್ಲಿ ಪ್ರಸ್ತುತ 2000 ರೂಗಳನ್ನು ಕಡಿಮೆಗೊಳಿಸಿದ್ದು HDFC ಬ್ಯಾಂಕ್ ಕಾರ್ಡ್ ಬಳಸಿಕೊಂಡು ಹೆಚ್ಚುವರಿಯಾಗಿ 1500 ರೂಗಳ ಡಿಸ್ಕೌಂಟ್ ಪಡೆಯಬಹುದು.

Vivo T3 Pro and Vivo T3 Ultra Price Dropped in India

ಇದರ ಕ್ರಮವಾಗಿ Vivo T3 Ultra ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹29,999 ರೂಗಳಿಗೆ ಮತ್ತು ಇದರ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹31,999 ರೂಗಳಿಗೆ ಮತ್ತು ಕೊನೆಯದಾಗಿ ಇದರ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹33,999 ರೂಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಇದರಲ್ಲೂ ಸಹ ಕಂಪನಿಯ ಬಿಡುಗಡೆಯ ಬೆಲೆಯಲ್ಲಿ ಪ್ರಸ್ತುತ 2000 ರೂಗಳನ್ನು ಕಡಿಮೆಗೊಳಿಸಿದ್ದು HDFC ಬ್ಯಾಂಕ್ ಕಾರ್ಡ್ ಬಳಸಿಕೊಂಡು ಹೆಚ್ಚುವರಿಯಾಗಿ 1500 ರೂಗಳ ಡಿಸ್ಕೌಂಟ್ ಸಹ ಪಡೆಯಬಹುದು.

Also Read: ಬರೋಬ್ಬರಿ 12 ಅಧಿಕ OTT ಜೊತೆಗೆ ಅನ್ಲಿಮಿಟೆಡ್ 5G ಡೇಟಾ ಮತ್ತು ಕರೆ ನೀಡುವ ಬೆಸ್ಟ್ Jio Plans ಬೆಲೆ ಎಷ್ಟು?

Vivo T3 Pro ಫೀಚರ್ ಮತ್ತು ವಿಶೇಷಣಗಳು:

Vivo T3 Pro 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಬಾಗಿದ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 4,500 nits ಗರಿಷ್ಠ ಹೊಳಪು ಮತ್ತು Schott Xensation ಗಾಜಿನ ರಕ್ಷಣೆಯನ್ನು ಹೊಂದಿದೆ. ಇದು ಸುಧಾರಿತ ಸ್ಪರ್ಶ ನಿಖರತೆಗಾಗಿ ವೆಟ್ ಟಚ್ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. Snapdragon 7 Gen 3 ಚಿಪ್‌ಸೆಟ್‌ನಿಂದ ನಡೆಸಲ್ಪಡುತ್ತಿದೆ ಮತ್ತು 8GB RAM ನೊಂದಿಗೆ ಜೋಡಿಸಲಾಗಿದೆ.

Vivo T3 Pro and Vivo T3 Ultra Price Dropped in India

ಸ್ಮಾರ್ಟ್‌ಫೋನ್‌ Android 14 ಅನ್ನು ಆಧರಿಸಿ FunTouch OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 80W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5500mAh ಬ್ಯಾಟರಿಯನ್ನು ಹೊಂದಿದೆ. ಸ್ಮಾರ್ಟ್‌ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು 8MP ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್‌ನೊಂದಿಗೆ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಆದರೆ 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳನ್ನು ನಿರ್ವಹಿಸುತ್ತದೆ.

Vivo T3 Ultra ಫೀಚರ್ ಮತ್ತು ವಿಶೇಷಣಗಳು:

Vivo T3 Ultra 5G ಸ್ಮಾರ್ಟ್‌ಫೋನ್‌ 6.78 ಇಂಚಿನ 3D ಕರ್ವ್ಡ್ AMOLED ಡಿಸ್ಪ್ಲೇಯೊಂದಿಗೆ 1.5K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ನೀಡುತ್ತದೆ. Android 14 ಆಧಾರಿತ Funtouch OS 14 ನಲ್ಲಿ ರನ್ ಆಗುತ್ತಿದೆ. ಇದು MediaTek ಡೈಮೆನ್ಸಿಟಿ 9200+ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಜೊತೆಗೆ 12GB RAM ಮತ್ತು 256GB ಸ್ಟೋರೇಜ್ ಹೊಂದಿದೆ. ಸ್ಮಾರ್ಟ್‌ಫೋನ್‌ 16,00,000 ಕ್ಕಿಂತ ಹೆಚ್ಚು ಪ್ರಭಾವಶಾಲಿ ಅಂಟುಟು ಬೆಂಚ್‌ಮಾರ್ಕ್ ಸ್ಕೋರ್ ಅನ್ನು ಸಾಧಿಸಿದೆ ಎಂದು Vivo ಹೇಳಿಕೊಂಡಿದೆ.

ಸ್ಮಾರ್ಟ್‌ಫೋನ್‌ 80W ವೇಗದ ಚಾರ್ಜಿಂಗ್‌ನೊಂದಿಗೆ 5500mAh ಬ್ಯಾಟರಿಯಿಂದ ಬೆಂಬಲಿತವಾಗಿದೆ, ಫೋನ್ ಅದರ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಉತ್ತಮವಾಗಿದ್ದು OIS ಜೊತೆಗೆ 50MP ಮೆಗಾಪಿಕ್ಸೆಲ್ ಸೋನಿ IMX921 ಮುಖ್ಯ ಸೆನ್ಸರ್ ಮತ್ತು 8MP ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಅನ್ನು ಒಳಗೊಂಡಿದೆ. 50MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವು ಸೆಲ್ಫಿಗಳಿಗೆ ಪರಿಪೂರ್ಣವಾಗಿದೆ ಮತ್ತು AI ಎರೇಸರ್ ಮತ್ತು AI ಫೋಟೋ ವರ್ಧನೆಯಂತಹ AI-ಚಾಲಿತ ಸ್ಮಾರ್ಟ್‌ಫೋನ್‌ ಫೋಟೋ ಎಡಿಟ್ ಮಾಡಲು ಅನುಕೂಲವನ್ನು ನೀಡುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo