ನವೆಂಬರ್ 26ಕ್ಕೆ ಭಾರತದಲ್ಲಿ Vivo X500 ಸರಣಿ ಬಿಡುಗಡೆ: ನಿರೀಕ್ಷಿತ ಫೀಚರ್ಸ್ ಏನು?
ಜನಪ್ರಿಯ Vivo ತನ್ನ ಹೊಸ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇತ್ತೀಚೆಗೆ Vivo X500 ಸರಣಿಯ ಬಗ್ಗೆ ಸುಳಿವು ನೀಡಿದ್ದ ಕಂಪನಿಯು ಇದೀಗ ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಈ ಹೊಸ ಸರಣಿಯಲ್ಲಿ ವಿವೋ X500, ವಿವೋ X500 ಪ್ರೊ ಮತ್ತು ವಿವೋ X500 ಪ್ರೊ ಮ್ಯಾಕ್ಸ್ ಸೇರಿದಂತೆ ಮೂರು ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಬರಲಿವೆ ಎಂದು ಹೇಳಲಾಗುತ್ತಿದೆ. ಈ ಫೋನ್ ಸರಣಿಯು ಡಿಸ್ಪ್ಲೇ, ಪ್ರೊಸೆಸರ್, ಬಿಗ್ ಬ್ಯಾಟರಿ ಮತ್ತು ಕ್ಯಾಮೆರಾ ವ್ಯವಸ್ಥೆಯೊಂದಿಗೆ ಈ ಸರಣಿ ಗ್ರಾಹಕರ ಗಮನ ಸೆಳೆಯುವ ನಿರೀಕ್ಷೆಯಿದೆ. ಹಾಗಾದರೆ ವಿವೋ X500 ಸರಣಿಯ ಬಿಡುಗಡೆ ದಿನಾಂಕ, ನಿರೀಕ್ಷಿತ ಫೀಚರ್ಸ್ ಮತ್ತು ಬೆಲೆಗಳ ಬಗ್ಗೆ ಇಲ್ಲಿದೆ ಮಾಹಿತಿ.
Vivo X500 ಸರಣಿ ಲಾಂಚ್ ಡೇಟ್ ಮಾಹಿತಿ
ವಿವೋ X500 ಸರಣಿಯು ನವೆಂಬರ್ 26 ರಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಸರಣಿಯು ವಿವೋ X500, ವಿವೋ X500 ಪ್ರೊ ಮತ್ತು ವಿವೋ X500 ಪ್ರೊ ಮ್ಯಾಕ್ಸ್ ಮಾಡೆಲ್ ಒಳಗೊಂಡಿರಲಿದೆ. ಇದರೊಂದಿಗೆ ವಿವೋ X500 ಪ್ರೊ ಮ್ಯಾಕ್ಸ್ Photographer Kit ಮತ್ತು Vivo Imaging Grip Kit ಎಂಬ ವಿಶೇಷ ಫೋಟೋಗ್ರಫಿ ಪರಿಕರಗಳನ್ನು ಕಂಪನಿ ಪರಿಚಯಿಸಲಿದೆ ಎನ್ನಲಾಗಿದೆ.
ವಿವೋ X500 ನಿರೀಕ್ಷಿತ ಫೀಚರ್ಸ್
ವಿವೋ X500 ಮಾದರಿಯು 6.59 ಇಂಚಿನ 1.5K OLED ಡಿಸ್ಪ್ಲೇ ಹೊಂದಿರಲಿದೆ. ಇದು 144Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಕಾರ್ಯಕ್ಷಮತೆಗಾಗಿ Dimensity 9600M ಚಿಪ್ಸೆಟ್ ನೀಡಲಾಗಿದೆ ಎಂದು ವರದಿಯಾಗಿದೆ. ಬ್ಯಾಟರಿ ವಿಚಾರದಲ್ಲಿಯೂ ಈ ಫೋನ್ ಗಮನ ಸೆಳೆಯುತ್ತದೆ. ಇದರಲ್ಲಿ 7,500mAh ಸಾಮರ್ಥ್ಯದ ಬ್ಯಾಟರಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ 50MP ಪ್ರೈಮರಿ ಕ್ಯಾಮೆರಾ ಜೊತೆಗೆ ಪ್ರತ್ಯೇಕ ಟೆಲಿಫೋಟೋ ಸೆನ್ಸರ್ ಇರಲಿದೆ.
ವಿವೋ X500 ಪ್ರೊ ನಿರೀಕ್ಷಿತ ಫೀಚರ್ಸ್
ವಿವೋ X500 Pro ಈ ಸರಣಿಯ ಕಾಂಪ್ಯಾಕ್ಟ್ ಮಾದರಿಯಾಗಿರಲಿದೆ. ಇದು 6.36 ಇಂಚಿನ 1.5K LTPO OLED ಡಿಸ್ಪ್ಲೇ ಹೊಂದಿದ್ದು, 144Hz ರಿಫ್ರೆಶ್ ರೇಟ್ ಬೆಂಬಲಿಸಲಿದೆ. ಈ ಫೋನ್ನಲ್ಲಿ 2nm ತಂತ್ರಜ್ಞಾನ ಆಧಾರಿತ Dimensity 9600 Pro ಪ್ರೊಸೆಸರ್ ಇರಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ 6,510mAh ಬ್ಯಾಟರಿ ನೀಡುವ ನಿರೀಕ್ಷೆಯಿದೆ. ಫೋಟೋಗ್ರಫಿಗಾಗಿ 50MP ಪ್ರೈಮರಿ ಕ್ಯಾಮೆರಾ ಮತ್ತು ಪ್ರತ್ಯೇಕ ಟೆಲಿಫೋಟೋ ಸೆನ್ಸರ್ ಇರಲಿದೆ.
ವಿವೋ X500 ಪ್ರೊ ಮ್ಯಾಕ್ಸ್ ನಿರೀಕ್ಷಿತ ಫೀಚರ್ಸ್
ಈ ಸರಣಿಯ ಅತ್ಯುನ್ನತ ಮಾದರಿಯಾಗಿರುವ Vivo X500 Pro Max ಕ್ಯಾಮೆರಾ ಮತ್ತು ಡಿಸ್ಪ್ಲೇ ವಿಚಾರದಲ್ಲಿ ಹೆಚ್ಚು ವಿಶೇಷತೆಗಳನ್ನು ಹೊಂದಿರಲಿದೆ. ಚೀನಾದಲ್ಲಿ ಬಿಡುಗಡೆಯಾಗಲಿರುವ ಈ ಮಾದರಿಯ ನಿರೀಕ್ಷಿತ ಫೀಚರ್ಸ್ ಪ್ರಕಾರ, ಇದರಲ್ಲಿ 6.85 ಇಂಚಿನ 2K ರೆಸಲ್ಯೂಶನ್ ಹೊಂದಿರುವ 144Hz ಡಿಸ್ಪ್ಲೇ ಇರಲಿದೆ. Dimensity 9600 Pro ಚಿಪ್ಸೆಟ್ ಮತ್ತು 8,000mAh ಬ್ಯಾಟರಿ ಕೂಡ ಇದರ ಪ್ರಮುಖ ಆಕರ್ಷಣೆಗಳಾಗಿವೆ. ಕ್ಯಾಮೆರಾ ವಿಭಾಗದಲ್ಲಿ 50MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 50MP ಸೆಲ್ಫಿ ಕ್ಯಾಮೆರಾ ಇರಲಿವೆ ಎಂದು ವರದಿಯಾಗಿದೆ. ಇದರ ಪ್ರಮುಖ ಆಕರ್ಷಣೆ 200MP ZEISS APO ಟೆಲಿಫೋಟೋ ಲೆನ್ಸ್. ಇದು 3.5x ಆಪ್ಟಿಕಲ್ ಜೂಮ್ ಮತ್ತು CIPA 7.0 ಸ್ಟೆಬಿಲೈಸೇಶನ್ ಸಾಮರ್ಥ್ಯ ಹೊಂದಿರಲಿದೆ ಎಂದು ಹೇಳಲಾಗಿದೆ.