Vivo T4 Ultra Launch Date Confirmed - Digit Kannada
Upcoming Vivo T4 Ultra Launch Date Confirmed: ವಿವೋ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಮುಂಬರಲಿರುವ Vivo T4 Ultra ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿದ್ದು ಇದರ ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಬಹುದು. ಭಾರತದಲ್ಲಿ ಈ Vivo T4 Ultra ಸ್ಮಾರ್ಟ್ಫೋನ್ ಇದೆ ಮುಂದಿನ ವಾರ 2025 ರಂದು ಅಧಿಕೃತವಾಗಿ ಬಿಡುಗಡೆಯಾಗಲಿರುವುದಾಗಿ ಕಂಪನಿ ಈಗಾಗಲೇ ಪೋಸ್ಟ್ ಮಾಡಿದೆ.
ಸ್ಮಾರ್ಟ್ಫೋನ್ 100x ಟೆಲಿಫೋಟೋ ಮ್ಯಾಕ್ರೋ ಜೂಮ್ ಅನ್ನು ನೀಡುವ ವಿಭಾಗದ ಮೊದಲ ಸ್ಮಾರ್ಟ್‌ಫೋನ್ ಆಗಿದ್ದು ಕಂಪನಿ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟವಾಗಲಿದೆ. ಈ ಮುಂಬರಲಿರುವ ವಿವೋ ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿರುವ ಸ್ಮಾರ್ಟ್ಫೋನ್ ಬ್ರಾಂಡ್ ಭಾರತದಲ್ಲಿ Vivo T4 Ultra ಸ್ಮಾರ್ಟ್ಫೋನ್ 11ನೇ ಜೂನ್ 2025 ರಂದು ಮಧ್ಯಾಹ್ನ 12:00 ಗಂಟೆಗೆ ಬಿಡುಗಡೆಯನ್ನು ನಿಗದಿ ಮಾಡಿದೆ.
ಈಗಾಗಲೇ ಮೇಲೆ ಹೇಳಿರುವಂತೆ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟವಾಗಲಿದೆ. ಈ ಸ್ಮಾರ್ಟ್ಫೋನ್ ವಿನ್ಯಾಸ ಮತ್ತು ಬಣ್ಣದ ವಿಷಯದಲ್ಲಿ ಸ್ಮಾರ್ಟ್‌ಫೋನ್ ಕಂಪನಿಯು ಎರಡು ಆಯ್ಕೆಗಳನ್ನು ಬಹಿರಂಗಪಡಿಸಿದೆ. ಈ Vivo T4 Ultra ಸ್ಮಾರ್ಟ್ಫೋನ್ ಕ್ಲಾಸಿಕ್ ಕಪ್ಪು ಮುಕ್ತಾಯ ಮತ್ತು ಬಿಳಿ ಮತ್ತು ಕಂದು ಬಣ್ಣದೊಂದಿಗೆ ಬರುತ್ತದೆ.
ಇದನ್ನೂ ಓದಿ: Tips And Tricks: ನಿಮ್ಮ ಹಳೆ ಸ್ಮಾರ್ಟ್ಫೋನ್ ಅನ್ನು ಸಿಸಿ ಕ್ಯಾಮೆರಾವನ್ನಾಗಿ ಬಳಸೋದು ಹೇಗೆ ಗೊತ್ತಾ?
Vivo T4 Ultra ಸ್ಮಾರ್ಟ್ಫೋನ್ MediaTe Dimensity 9300 ಪ್ರೊಸೆಸರ್ನಿಂದ ಚಾಲಿತವಾಗುವ ನಿರೀಕ್ಷೆಗಳಿವೆ.ಹೆಚ್ಚುವರಿಯಾಗಿ ಈ ಸ್ಮಾರ್ಟ್ಫೋನ್ ಟೆಲಿಫೋಟೋ ಸೆನ್ಸರ್ 50MP ಲೆನ್ಸ್ ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿವೋ ಈ ಫೋನ್ ಅನ್ನು ಭಾರತದಲ್ಲಿ ಯಾವಾಗ ಬಿಡುಗಡೆ ಮಾಡುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.
ಈ ಮುಂಬರಲಿರುವ Vivo T4 Ultra ಅತ್ಯುತ್ತಮ ಫೀಚರ್ಗಳೆಂದರೆ ಅದರ ಪ್ರಮುಖ ಮಟ್ಟದ ಜೂಮ್ ಸಾಮರ್ಥ್ಯ ಈ ಸ್ಮಾರ್ಟ್ಫೋನ್ ಬ್ಯಾಕ್ ಪ್ಯಾನಲ್ Vivo T4 Ultra ಕಂಡುಬರುವಂತೆಯೇ ಅಂಡಾಕಾರದ ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ. ಸ್ಮಾರ್ಟ್ಫೋನ್ AI ಕ್ಯಾಮೆರಾ ಸೆನ್ಸರ್ಗಳಿಂದ ತುಂಬಿದ್ದು ಅತ್ಯುತ್ತಮ ಕ್ಯಾಮೆರಾ ಸೆನ್ಸರ್ ಹೊಂದಿದೆ. ಸ್ಮಾರ್ಟ್ಫೋನ್ ಕ್ಯಾಮೆರಾ ವಿಭಾಗದಲ್ಲಿ ಮಾಡ್ಯೂಲ್ 100X ಟೆಲಿಫೋಟೋ ಜೂಮ್ ಅನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ. ಅಲ್ಲದೆ ಇದರಲ್ಲಿ 10x ಡಿಜಿಟಲ್ ಜೂಮ್‌ಗೆ ಬೆಂಬಲವನ್ನು ಬರುತ್ತದೆ.