Upcoming Nothing Phone 3a design leaks
Nothing Phone 3a Design: ನಥಿಂಗ್ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್ ಶ್ರೇಣಿಯಾದ Nothing Phone 3a Series ಮುಂದಿನ ತಿಂಗಳು ಅಂದರೆ 4ನೇ ಮಾರ್ಚ್ 2025 ರಂದು ಪರಿಚಯಿಸಲು ಸಜ್ಜಾಗಿದೆ. ಈ ಸರಣಿಯಲ್ಲಿ ನಿಮಗೆ ಎರಡು Nothing Phone 3a ಮತ್ತು Nothing Phone 3a Pro ಎಂಬ ಮಾದರಿಗಳನ್ನು ನಿರೀಕ್ಷಿಸಬಹುದು. ಪ್ರಸ್ತುತ Nothing Phone 3a ಸ್ಮಾರ್ಟ್ಫೋನ್ ಕಳೆದ ವರ್ಷದ MediaTek Dimensity ಚಿಪ್‌ಸೆಟ್‌ಗಳೊಂದಿಗಿಂತ ಭಿನ್ನವಾಗಿ ಈ ಬಾರಿ ಜನಪ್ರಿಯ ಮತ್ತು ಪವರ್ಫುಲ್ Qualcomm Snapdragon ಚಿಪ್‌ಸೆಟ್‌ಗಳೊಂದಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ.
ಜನಪ್ರಿಯ ಮುಂಬರಲಿರುವ ನಥಿಂಗ್ (Nothing) ಸ್ಮಾರ್ಟ್ಫೋನ್ ಇತ್ತೀಚಿನ ಟೀಸರ್ ಅಡಿಯಲ್ಲಿ Nothing Phone 3a ಸ್ಮಾರ್ಟ್ಫೋನ್ ಕ್ಯಾಮೆರಾ ಮಾಡ್ಯೂಲ್ ವಿನ್ಯಾಸದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಈಗ ಟೀಸರ್ ಈ ಎರಡು ಮಾದರಿಗಳನ್ನು ಒಳಗೊಂಡಿದ್ದು ಒಂದು ಸಮತಲ ರೇಖೆಯಲ್ಲಿ ಮೂರು ಚುಕ್ಕೆಗಳನ್ನು ಹೊಂದಿದ್ದರೆ ಇನ್ನೊಂದು L ಆಕಾರದಲ್ಲಿದೆ. ಇದು Nothing Phone 3a ಮತ್ತು Nothing Phone 3a Pro ವಿಭಿನ್ನ ಹಿಂಬದಿಯ ಕ್ಯಾಮೆರಾ ವಿನ್ಯಾಸಗಳನ್ನು ಹೊಂದಿರಬಹುದು ಎಂದು ಸೂಚಿಸುತ್ತದೆ.
ಪ್ರಸ್ತುತ ಸೋರಿಕೆಗಳ ಪ್ರಕಾರ Nothing Phone 3a ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.72 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ಹೆಚ್ಚುವರಿಯಾಗಿ ಹ್ಯಾಂಡ್‌ಸೆಟ್ IP64 ರೇಟಿಂಗ್ ಅನ್ನು ಹೊಂದಿರುತ್ತದೆ ಇದು ಧೂಳು ಮತ್ತು ನೀರಿನ ಪ್ರತಿರೋಧವನ್ನು ಒದಗಿಸುತ್ತದೆ. Nothing Phone 3a ಸ್ಮಾರ್ಟ್ಫೋನ್ Qualcomm Snapdragon ಚಿಪ್‌ಸೆಟ್‌ಗಳೊಂದಿಗೆ ಪ್ರೊಸೆಸರ್‌ನಿಂದ ಚಾಲಿತವಾಗಬಹುದು.
Nothing Phone 3a ದೊಡ್ಡ ಮುಖ್ಯಾಂಶಗಳಲ್ಲಿ ಒಂದು ಅದರ ಟ್ರಿಪಲ್-ಕ್ಯಾಮೆರಾ ವ್ಯವಸ್ಥೆಯಾಗಿದೆ. ಫೋನ್ 50MP ಪ್ರೈಮರಿ ಕ್ಯಾಮೆರಾ ಸೆನ್ಸರ್ ಮತ್ತೊಂದು 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2x ಜೂಮ್ ಹೊಂದಿರುವ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿರುವ ನಿರೀಕ್ಷೆಯಿದೆ. Nothing Phone 2a ಫೋನಿಗೆ ಹೋಲಿಸಿದರೆ ಈ ನಥಿಂಗ್ ಫೋನ್‌ಗಳು ಮೀಸಲಾದ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರಲಿಲ್ಲವಾದ್ದರಿಂದ ಇದು ಗಮನಾರ್ಹವಾದ ಅಪ್‌ಗ್ರೇಡ್ ಆಗಲಿದೆ. ಹೆಚ್ಚುವರಿಯಾಗಿ ಈ ಸ್ಮಾರ್ಟ್ಫೋನ್ 45W ಫಾಸ್ಟ್ ಚಾರ್ಜರ್ ಜೊತೆಗೆ ಫೋನ್ 5,000mAh ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಗಳಿವೆ.