Realme P4x 5G with 7000mAh Battery Launched in India Price Features specs
ಭಾರತದಲ್ಲಿ ಈ ತಿಂಗಳ ಮೊದಲ ವಾರದಲ್ಲೇ ರಿಯಲ್ಮಿ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಮುಂಬರಲಿರುವ ಹೊಸ Realme P4x 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸಾಧನವು MediaTek Dimensity 7400 Ultra ಚಿಪ್‌ಸೆಟ್ ಮತ್ತು ದೊಡ್ಡ 7000mAh ಬ್ಯಾಟರಿಯನ್ನು ಹೊಂದಿದೆ ಎಂದು ಈಗಾಗಲೇ ದೃಢಪಡಿಸಲಾಗಿದೆ. ಅದರ ಅಧಿಕೃತ ಬಿಡುಗಡೆಗೂ ಮುನ್ನ ಒಬ್ಬ ಟಿಪ್‌ಸ್ಟರ್ ಈ ಸ್ಮಾರ್ಟ್ಫೋನ್ ಬೆಲೆ, RAM ಮತ್ತು ಸ್ಟೋರೇಜ್ ಸಂರಚನೆ ಸೇರಿದಂತೆ ಕೆಲವು ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ವೈಶಿಷ್ಟ್ಯಗಳು ಈ ಫೋನ್ ಅನ್ನು ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಭರವಸೆಯ ಆಯ್ಕೆಯನ್ನಾಗಿ ಮಾಡುತ್ತದೆ.
ಜನಪ್ರಿಯ ಮತ್ತು ಇತ್ತೀಚೆಗೆ ಹೆಚ್ಚು ಸಡ್ಡು ಮಾಡುತ್ತಿರುವ ಈ ಟೆಕ್ ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಇನ್‌ಸ್ಟಾಗ್ರಾಮ್‌ನಲ್ಲಿ Realme P4x 5G ಬೆಲೆಯ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಅದರ ವಿವಿಧ ರೂಪಾಂತರಗಳ ಬೆಲೆಯನ್ನು ವಿವರಿಸುತ್ತಾರೆ. ಇದರ ಪ್ರಕಾರ Realme P4x 5G ಯ ಮೂಲ ರೂಪಾಂತರ ಅಂದರೆ 6GB ಮತ್ತು 128GB ರೂಪಾಂತರದ ಬೆಲೆ ₹15,999 ಆಗಿರಬಹುದು. ಮತ್ತೊಂದು ಇದರ 8GB ಮತ್ತು 128GB ರೂಪಾಂತರದ ಬೆಲೆ ₹17,499 ಆಗಿರಬಹುದು. ಟಾಪ್-ಎಂಡ್ ಮಾದರಿ ಅಂದರೆ 8GB ಮತ್ತು 256GB ರೂಪಾಂತರದ ಬೆಲೆ ₹19,499 ಆಗಿರಬಹುದು.
Realme P4x 5G ಸ್ಮಾರ್ಟ್ಫೋನ್ 6.72 ಇಂಚಿನ ಪೂರ್ಣ-HD+ ಡಿಸ್ಪ್ಲೇಯೊಂದಿಗೆ 144Hz ವರೆಗೆ ರಿಫ್ರೆಶ್ ದರ ಮತ್ತು 1,000 nits ಗರಿಷ್ಠ ಹೊಳಪನ್ನು ನೀಡುತ್ತದೆ. AI ಆಧಾರಿತ 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಘಟಕದೊಂದಿಗೆ ಬರುವುದು ದೃಢಪಟ್ಟಿದೆ. 2MP ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ಹೊಂದಿದೆ ಎಂದು ವದಂತಿಗಳಿವೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಇದು 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಅಲ್ಟ್ರಾ 5G ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದ್ದು 8GB ವರೆಗೆ ಡೈನಾಮಿಕ್ RAM ಬೆಂಬಲವನ್ನು ಹೊಂದಿದೆ. ಇದು 45W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 7,000mAh ಬ್ಯಾಟರಿಯನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಉಷ್ಣ ನಿರ್ವಹಣೆಗಾಗಿ ವೇಪರ್ ಚೇಂಬರ್ (VC) ಅನ್ನು ಹೊಂದಿರುತ್ತದೆ.