iQOO Z11 Turbo
ಈಗ ಚೀನಾದಲ್ಲಿ ಇಂದು ಜನಪ್ರಿಯ ಮತ್ತು ಪವರ್ಫುಲ್ iQOO Z11 Turbo ಸ್ಮಾರ್ಟ್ಫೋನ್ ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು iQOO ಕಂಪನಿಯ Z-ಸರಣಿಯಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತಂದಿದೆ. ಮೊದಲು ಈ ಸರಣಿಯು ಕೇವಲ ಮಧ್ಯಮ ಶ್ರೇಣಿಯ ಫೋನ್‌ಗಳಿಗೆ ಸೀಮಿತವಾಗಿತ್ತು ಆದರೆ ಈ ಹೊಸ Z11 Turbo ಅನ್ನು ಅತಿ ವೇಗ ಮತ್ತು ಪವರ್ ಹೊಂದಿರುವ ಫ್ಲ್ಯಾಗ್‌ಶಿಪ್-ಕಿಲ್ಲರ್ ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಸ್ಮಾರ್ಟ್‌ಫೋನ್ 15ನೇ ಜನವರಿ 2026 ರಂದು ಬಿಡುಗಡೆಯಾಗಿದ್ದು ಗೇಮಿಂಗ್ ಆಡುವವರಿಗೆ ಮತ್ತು ಹೆಚ್ಚು ಕೆಲಸ ಮಾಡುವವರಿಗೆ ಇದು ಅತ್ಯುತ್ತಮವಾಗಿದೆ. ಇದರ ವಿನ್ಯಾಸವು ಪ್ರೀಮಿಯಂ ಆಗಿದ್ದು ಮೆಟಲ್ ಫ್ರೇಮ್ ಮತ್ತು ಗ್ಲಾಸ್ ಬ್ಯಾಕ್ ಹೊಂದಿದೆ.
iQOO ಕಂಪನಿಯು ಈ ಫೋನ್‌ನ ಬೆಲೆಯನ್ನು ಗ್ರಾಹಕರು ಕೈಗೆಟುಕುವಂತೆ ಮತ್ತು ಸ್ಪರ್ಧಾತ್ಮಕವಾಗಿ ನಿಗದಿಪಡಿಸಲಾಗಿದೆ. ಫೋನ್ ವಿವಿಧ ನಿಯತಾಂಕಗಳು ಮತ್ತು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದ್ದು ಬಜೆಟ್‌ಗೆ ತಕ್ಕಂತೆ ಆರಿಸಿಕೊಳ್ಳಬಹುದು. ಇದರ ಆರಂಭಿಕ ಮಾದರಿ 12GB + 256GB ಬೆಲೆ 2,699 ಯುವಾನ್ (ಭಾರತದಲ್ಲಿ ಸುಮಾರು ₹32,000 ರೂಪಾಯಿಗಳು). ಇನ್ನು ಅತಿ ಹೆಚ್ಚು ಸ್ಟೋರೇಜ್ ಬೇಕಾದವರಿಗೆ 16GB + 1TB ಮಾದರಿಯು 3,999 (ಅಂದರೆ ಸುಮಾರು ₹47,000 ರೂಪಾಯಿಗಳು) ಬೆಲೆಯಲ್ಲಿ ಲಭ್ಯವಿದೆ. ಅತ್ಯಂತ ದುಬಾರಿ ಫೋನ್‌ಗಳಲ್ಲಿ ಇರುವಂತಹ ಸೌಲಭ್ಯಗಳನ್ನು ಈ ಫೋನ್ ಕಡಿಮೆ ಬೆಲೆಗೆ ನೀಡುತ್ತಿರುವುದು ಇದರ ವಿಶೇಷತೆಯಾಗಿದೆ.
ತಾಂತ್ರಿಕವಾಗಿ iQOO Z11 Turbo ಅತ್ಯಂತ ಶಕ್ತಿಶಾಲಿಯಾಗಿದೆ. ಇದು ವಿಶ್ವದ ವೇಗವಾದ Qualcomm Snapdragon 8 Gen 5 ಪ್ರೊಸೆಸರ್ ಅನ್ನು ಬಳಸಲಾಗಿದೆ. ಫೋನ್‌ನ ಡಿಸ್‌ಪ್ಲೇ ಬಗ್ಗೆ ಹೇಳುವುದಾದರೆ ಇದು 6.59-ಇಂಚಿನ 1.5K AMOLED ಪರದೆಯನ್ನು ಹೊಂದಿದ್ದು 144Hz ರಿಫ್ರೆಶ್ ರೇಟ್ ಮಾಡಲಾಗಿದೆ. ಸಾಮಾನ್ಯವಾಗಿ ಫೋನ್ ಬಳಸುವಾಗ ಅಥವಾ ಗೇಮ್ ಆಡುವಾಗ ತುಂಬಾ ಸ್ಮೂತ್ ಆಗಿರುತ್ತದೆ. ಕ್ಯಾಮೆರಾ ವಿಚಾರದಲ್ಲಿ ಮೊದಲ ಬಾರಿಗೆ 200MP ಸ್ಯಾಮ್‌ಸಂಗ್ ಸೆನ್ಸರ್ ಜೊತೆಗೆ ಪ್ರೈಮರಿಯಲ್ಲಿ ಹೊಂದಿದೆ. ಇದು ನೋಡಲು ತುಂಬಾ ಆಕರ್ಷಕವಾಗಿದೆ. ಇದು ನೀಲಿ, ಹ್ಯಾಲೋ ಪಿಂಕ್, ಪೋಲಾರ್ ನೈಟ್ ಬ್ಲಾಕ್ ಮತ್ತು ಸ್ಕೈ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.
ಈ ಫೋನ್ ಆಂಡ್ರಾಯ್ಡ್ 16 ಆಧಾರಿತ ಲೇಟೆಸ್ಟ್ OriginOS 6 ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಫೋಟೋಗಳನ್ನು ಅತ್ಯಂತ ಸ್ಪಷ್ಟವಾಗಿ ತೋರಿಸುತ್ತದೆ ಸೆರೆಹಿಡಿಯುತ್ತದೆ. ಇದರ ಜೊತೆಗೆ 8MP ಅಲ್ಟ್ರಾ-ವೈಡ್ ಮತ್ತು 32MP ಸೆಲ್ಫಿ ಕ್ಯಾಮೆರಾ ಕೂಡ ಇದೆ. ಈ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಇದರ 7,600mAh ದೊಡ್ಡ ಬ್ಯಾಟರಿ ಫೋನ್ ಇದು 100W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು ಈ ಫೋನ್‌ಗೆ IP68 ಮತ್ತು IP69 ರೇಟಿಂಗ್ ಒದಗಿಸಲಾಗಿದೆ. ಇದು ಫೋನ್‌ನ ಬಾಳಿಕೆಯನ್ನು ಹೊಂದಿದೆ.