TECNO POVA Curve 5G launched in India
TECNO POVA Curve 5G launched in India: ಭಾರತದಲ್ಲಿ ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಟೆಕ್ನೋ (TECNO) ತನ್ನ ಲೇಟೆಸ್ಟ್ TECNO POVA Curve 5G ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಸ್ಮಾರ್ಟ್ಫೋನ್ 64MP ಪ್ರೈಮರಿ Sony IMX682 ಕ್ಯಾಮೆರಾ, 5500mAh ಬ್ಯಾಟರಿ ಮತ್ತು Dimensity 7300 Ultimate ಪ್ರೊಸೆಸರ್ನೊಂದಿಗೆ ಬರುತ್ತದೆ. TECNO POVA Curve 5G ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಆರಂಭಿಕ ಬೆಲೆ 6GB RAM ಮಾದರಿ ಸುಮಾರು 15,999 ರೂಗಳಿಗೆ ಪರಿಚಯಿಸಿದೆ. ಹಾಗಾದ್ರೆ ಈ ಸ್ಮಾರ್ಟ್ಫೋನ್ ಆಫರ್ ಬೆಲೆ ಮತ್ತು ಸಂಪೂರ್ಣ ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ.
TECNO POVA Curve 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹15,999 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 128GB ೪ಸ್ಟೋರೇಜ್ ರೂಪಾಂತರವನ್ನು ₹16,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಮತ್ತು ಆಫ್‌ಲೈನ್ ಮಾರ್ಕೆಟ್ಗಳಲ್ಲಿ 5ನೇ ಜೂನ್ 2025 ರಿಂದ ಮಧ್ಯಾಹ್ನ 12:00 ಗಂಟೆಗೆ ಖರೀದಿಸಬಹುದು.
ಭಾರತದಲ್ಲಿ TECNO POVA Curve 5G ಸ್ಮಾರ್ಟ್ಫೋನ್ 6.78 ಇಂಚಿನ ಪೂರ್ಣ-HD+ (1,080×2,436 ಪಿಕ್ಸೆಲ್‌ಗಳು) ಕರ್ವ್ AMOLED ಡಿಸ್ಪ್ಲೇಯನ್ನು 144Hz ರಿಫ್ರೆಶ್ ದರ, 93.8 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು 1,300 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ. ಸ್ಕ್ರೀನ್ ಪ್ರೊಟೆಕ್ಷನ್‌ಗಾಗಿ ಗೊರಿಲ್ಲಾ ಗ್ಲಾಸ್ 5 ಗ್ಲಾಸ್ ಹೊಂದಿದೆ. ಫೋನ್ 64MP ಸೋನಿ IMX682 ಸೆನ್ಸರ್ ಹೊಂದಿದ್ದು AI- ಬೆಂಬಲಿತ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಅಲ್ಲದೆ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 13MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
ಇದನ್ನೂ ಓದಿ: Digital ID: ಮನೆಗಳಿಗೊಂದು ವಿಶೇಷ ಡಿಜಿಟಲ್ ಐಡಿ ತರಲು ಸರ್ಕಾರ ಸಜ್ಜು! ಯಾಕೆ ಮತ್ತು ಪ್ರಯೋಜನವೇನು ತಿಳಿಯಿರಿ!
ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಅಲ್ಟಿಮೇಟ್ ಪ್ರೊಸೆಸರ್ ಹೊಂದಿದೆ. ಮತ್ತು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್ ಜೊತೆಗೆ ಬರುತ್ತದೆ. TECNO POVA Curve 5G ಸ್ಮಾರ್ಟ್ಫೋನ್ 45W ಚಾರ್ಜಿಂಗ್ ಬೆಂಬಲದೊಂದಿಗೆ 5500mAh ಬ್ಯಾಟರಿಯನ್ನು ಹೊಂದಿದೆ. ವಿಶೇಷವಾಗಿ ಬ್ಲೂಟೂತ್ 5.4, NFC ಮತ್ತು Wi-Fi 6 ಅನ್ನು ಹೊಂದಿದೆ. ಇದು ಉತ್ತಮ ಸೌಂಡ್ Dolby Atmos ಬೆಂಬಲದೊಂದಿಗೆ ಸ್ಟೀರಿಯೊ ಸ್ಪೀಕರ್‌ಗಳನ್ನು ಹೊಂದಿದೆ ಮತ್ತು IP64-ರೇಟೆಡ್ ಬಿಲ್ಡ್ ಅನ್ನು ಹೊಂದಿದೆ.