Vivo T3 Ultra
Vivo T3 Ultra 5G Price Cut: ಭಾರತದಲ್ಲಿ ಮತ್ತೊಮ್ಮೆ ಭಾರಿ ಸದ್ದು ಮಾಡಲು ವಿವೋದಿಂದ ಮತ್ತೊಂದು 5G ಸ್ಮಾರ್ಟ್ಫೋನ್ ತನ್ನ ನೈಜ ಬೆಲೆಯನ್ನು ಕಳೆದುಕೊಂಡಿದೆ. ಇದರೊಂದಿಗೆ ಈ Vivo T3 Ultra 5G ಖರೀದಿಸುವ ಬಳಕೆದಾರರಿಗೆ ಫ್ಲಿಪ್ಕಾರ್ಟ್ ಅದ್ದೂರಿಯ ಬ್ಯಾಂಕ್ ಮತ್ತು ವಿನಿಮಯ ಡಿಸ್ಕೌಂಟ್‌ಗಳೊಂದಿಗೆ ಸುಮಾರು 25,999 ರೂಗಳಿಗೆ ಲಭ್ಯವಾಗಲಿದೆ. ಈ ಲೇಟೆಸ್ಟ್ Vivo T3 Ultra 5G ಸ್ಮಾರ್ಟ್ಫೋನ್ ಫೀಚರ್ ಮತ್ತು ವಿಶೇಷಣಗಳನ್ನು ನೋಡುವುದಾದರೆ ಫೋನ್ 50MP ಸೆಲ್ಫಿ ಕ್ಯಾಮೆರಾ ಮತ್ತು 5500mAh ಬ್ಯಾಟರಿಯೊಂದಿಗೆ ಬರುತ್ತದೆ. ಪ್ರಸ್ತ್ರುತ ಫ್ಲಿಪ್‌ಕಾರ್ಟ್‌ನಲ್ಲಿ ಇದರ ಹೈಲೈಟ್ ಫೀಚರ್ಗಳನ್ನು ಪರಿಚಯಿಸಲಾಗಿದೆ.
ಇದನ್ನೂ ಓದಿ: ಅಮೆಜಾನ್ ಪ್ರೈಮ್ ಸದಸ್ಯರಿಗೆ ‘Amazon Great Summer Sale 2025’ ಶುರು! ಭರ್ಜರಿ ಡೀಲ್ ಮತ್ತು ಡಿಸ್ಕೌಂಟ್ ಪಡೆಯಿರಿ!
Vivo T3 Ultra 5G ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ಮತ್ತು ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ Lunar Gray ಮತ್ತು Frost Green ಎಂಬ ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಪ್ರಸ್ತುತ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು 27,999 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಇದರ ಕ್ರಮವಾಗಿ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು 29,999 ರೂಗಳಿಗೆ ಮತ್ತು ಕೊನೆಯದಾಗಿ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು 31,999 ರೂಗಳಿಗೆ ಬಿಡುಗಡೆಗೊಳಿಸಿದೆ. ಆದರೆ ಕಂಪನಿ ಉತ್ತಮ ಬ್ಯಾಂಕ್ ಆಫರ್ ನೀಡುತ್ತಿದ್ದು ಸ್ಮಾರ್ಫೋನ್ 2000 ರೂಗಳ ಡಿಸ್ಕೌಂಟ್ ಸಹ ನೀಡುತ್ತಿದೆ. ಈ ಮೂಲಕ Vivo T3 Ultra 5G ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ಮೂಲಕ ಆರಂಭಿಕ 8GB ಕೇವಲ 25,999 ರೂಗಳಿಗೆ ಖರೀದಿಸಬಹುದು.
ಈ Vivo T3 Ultra 5G ಸ್ಮಾರ್ಟ್ಫೋನ್ 6.78 ಇಂಚಿನ ಕರ್ವ್ ಡಿಸ್ಪ್ಲೇಯನ್ನು 3D ಕರ್ವ್ಡ್ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಫೋನ್ 1.5K ರೆಸಲ್ಯೂಶನ್ (2800×1260 ಪಿಕ್ಸೆಲ್ಗಳು) ನೊಂದಿಗೆ ಬರುತ್ತದೆ. ಇದರ ಡಿಸ್ಪ್ಲೇಯಿಂದ ಬರುವ ಬ್ಲೂ ಲೈಟ್ (Blue Light) ಅನ್ನು ನಿಮ್ಮ ಕಣ್ಣುಗಳಿಂದ ರಕ್ಷಿಸುವ ರಕ್ಷಣೆಯೊಂದಿಗೆ ಬರುತ್ತದೆ. ಅಲ್ಲದೆ ಇದರಲ್ಲಿ ಪವರ್ಫುಲ್ ಸೌಂಡ್ ಅನುಭವ ನೀಡಲು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. Vivo T3 Ultra 5G ಸ್ಮಾರ್ಟ್ಫೋನ್ Funtouch OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: Best Portable AC: ಬೇಸಿಗೆಯಲ್ಲಿ ಬಿಸಿಲಿನಲ್ಲೂ ನಿಮ್ಮ ರೂಮನ್ನು ಕಾಶ್ಮೀರದಂತೆ ತಪಗಿಡುವ ಬೆಸ್ಟ್ ಪೋರ್ಟಬಲ್ ಏರ್ ಕೂಲರ್ಗಳು!
ಇದು ಆಂಡ್ರಾಯ್ಡ್ 14 ಅನ್ನು ಆಧರಿಸಿದೆ. ಫೋನ್ MediaTek Dimensity 9200+ ಚಿಪ್‌ಸೆಟ್ ಹೊಂದಿದೆ. Vivo T3 Ultra 5G ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾವನ್ನು OIS ಮತ್ತು ಸೋನಿ ಹೊಂದಿದೆ. IMX921 ಲೆನ್ಸ್ ಮತ್ತು 8MP ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮರಾ ಅಲ್ಟ್ರಾ-ವೈಡ್ ಲಭ್ಯವಿದೆ. ಸೆಲ್ಫಿಗಾಗಿ ಫೋನ್ 50MP ಮೆಗಾಪಿಕ್ಸೆಲ್ ಲೆನ್ಸ್ ಅನ್ನು ಹೊಂದಿದೆ. ವಿವೋದ ಸಿಗ್ನೇಚರ್ ಔರಾ ರಿಂಗ್ ಲೈಟ್ ಫೋನ್‌ನಲ್ಲಿ ಲಭ್ಯವಿದೆ.
Vivo T3 Ultra 5G ಸ್ಮಾರ್ಟ್ಫೋನ್ AI ಎರೇಸರ್ ಮತ್ತು AI ಫೋಟೋ ವರ್ಧನೆಯಂತಹ ಅನೇಕ AI ಆಧಾರಿತ ವೈಶಿಷ್ಟ್ಯಗಳು ಕ್ಯಾಮರಾದಲ್ಲಿ ಲಭ್ಯವಿದೆ. Vivo T3 Ultra 5G ಸ್ಮಾರ್ಟ್ಫೋನ್ ಫೋನ್ 4K ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಫೋನ್‌ನಲ್ಲಿ ಕಂಪನಿಯು 2 ವರ್ಷಗಳ ಅಪ್ಡೇಟ್ ಮತ್ತು 3 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ಒದಗಿಸುತ್ತದೆ. Vivo T3 Ultra 5G ಸ್ಮಾರ್ಟ್ಫೋನ್ 80W ಚಾರ್ಜಿಂಗ್ ಅನ್ನು ಬೆಂಬಲದೊಂದಿಗೆ 5500mAh ಬ್ಯಾಟರಿಯನ್ನು ಹೊಂದಿದೆ.