Nothing Phone 3a
Nothing Phone (2a) Price Cut: ಜನಪ್ರಿಯ ನಥಿಂಗ್ (Nothing) ಸ್ಮಾರ್ಟ್ಫೋನ್ ಬ್ರಾಂಡ್ ಈಗಷ್ಟೇ Nothing Phone 3a Series ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಕಂಪನಿ ಈ ಸ್ಮಾರ್ಟ್ಫೋನ್ ಬಿಡುಗಡೆಯ ಅಡಿಯಲ್ಲಿ ಈಗಾಗಲೇ ಲಭ್ಯವಿರುವ Nothing Phone (2a) ಸ್ಮಾರ್ಟ್ಫೋನ್ ಬೆಲೆಯನ್ನು ಅಮೆಜಾನ್‌ನಲ್ಲಿ ಕಡಿತಗೊಳಿಸಿದೆ. ಹಾಗಾದ್ರೆ ಈ Nothing Phone (2a) ಸ್ಮಾರ್ಟ್ಫೋನ್ ಹೊಸ ಬೆಲೆ ಎಷ್ಟು? ಮತ್ತು ಇದರೊಂದಿಗೆ ಬರುವ ಫೀಚರ್ಗಳೇನು ಎಲ್ಲ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಪರಿಶೀಲಿಸಬಹುದು.
ಸ್ಮಾರ್ಟ್ಫೋನ್ ಆರಂಭಿಕ ರೂಪಾಂತರವನ್ನು 19,429 ರೂಗಳಿಗೆ ಅಮೆಜಾನ್‌ನಲ್ಲಿ ಪಟ್ಟಿ ಮಾಡಲಾಗಿದೆ ಆದರೆ ಬ್ಯಾಂಕ್ ಮತ್ತು ವಿನಿಮಯ ಆಫರ್ ಅಡಿಯಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಆಸಕ್ತ ಗ್ರಾಹಕರು ಖರೀದಿಸಬಹುದು. ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಕೇವಲ 19,429 ರೂಗಳಿಗೆ ಪಟ್ಟಿಯಾಗಿದ್ದರೆ ಇದರ 8GB RAM ಮತ್ತು 256GB ಸ್ಟೋರೇಜ್ ಕೇವಲ 24,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಇದರೊಂದಿಗೆ BOBCARD ಮತ್ತು Federal Bank ಕ್ರೆಡಿಟ್ ಕಾರ್ಡ್ ಬಳಸಿಕೊಂಡು EMI ಮೂಲಕ ಖರೀದಿಸುವವರಿಗೆ 1000 ಹೆಚ್ಚುವರಿ ಡಿಸ್ಕೌಂಟ್ ಲಭ್ಯವಿದೆ.
ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ Nothing Phone (2a) ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 18,350 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: Nothing Phone 3a ಅಧಿಕೃತವಾಗಿ ಬಿಡುಗಡೆ! ಆಫರ್ ಬೆಲೆ ಎಷ್ಟು ಮತ್ತು ಟಾಪ್ 5 ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ
ಈ ಲೇಟೆಸ್ಟ್ Nothing Phone (2a) ಫೋನ್ 2a 6.7 ಸ್ಮಾರ್ಟ್ಫೋನ್ ಇಂಚಿನ ಪೂರ್ಣ HD+ AMOLED ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 1300 nits ಗರಿಷ್ಠ ಹೊಳಪನ್ನು ಹೊಂದಿದೆ. ಸ್ಮಾರ್ಟ್‌ಫೋನ್ MediaTek Dimensity 7200 Pro ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. 12GB RAM ಮತ್ತು 256GB ವರೆಗೆ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.
ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು 50MP ಪ್ರೈಮರಿ ಸೆನ್ಸರ್ OIS ಮತ್ತು EIS ಮತ್ತು 50MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ಗೆ ಬೆಂಬಲಿಸುತ್ತದೆ. Nothing Phone (2a) ಎಲ್ಲಾ ಸೆಲ್ಫಿ ಮತ್ತು ವೀಡಿಯೊ ಕರೆ ಸಂಬಂಧಿತ ಅವಶ್ಯಕತೆಗಳನ್ನು ನಿರ್ವಹಿಸಲು ಸ್ಮಾರ್ಟ್‌ಫೋನ್ 32MP ಮುಂಭಾಗದ ಸೆನ್ಸರ್ನೊಂದಿಗೆ ಬರುತ್ತದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್ 5000mAh ಬ್ಯಾಟರಿಯೊಂದಿಗೆ 45W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ.