32MP ಸೆಲ್ಫಿ ಕ್ಯಾಮೆರಾದ Nothing Phone (2a) ಮೊದಲ ಮಾರಾಟದಲ್ಲೆ ಭರ್ಜರಿ ಆಫರ್‌ಗಳನ್ನು ನೀಡುತ್ತಿರುವ ನಥಿಂಗ್!

32MP ಸೆಲ್ಫಿ ಕ್ಯಾಮೆರಾದ Nothing Phone (2a) ಮೊದಲ ಮಾರಾಟದಲ್ಲೆ ಭರ್ಜರಿ ಆಫರ್‌ಗಳನ್ನು ನೀಡುತ್ತಿರುವ ನಥಿಂಗ್!
HIGHLIGHTS

ಭಾರತದಲ್ಲಿ ಕಳೆದ ವಾರ ನಥಿಂಗ್ ತನ್ನ ಲೇಟೆಸ್ಟ್ Nothing Phone (2a) ಫೋನ್ ಬಿಡುಗಡೆಗೊಳಿಸಿದೆ

Nothing Phone (2a) ಆರಂಭಿಕ ವೇರಿಯೆಂಟ್ 8GB RAM ಮತ್ತು 128GB ಸ್ಟೋರೇಜ್ ಕೇವಲ ₹23,999 ರೂಗಳಿಗೆ ಅನಾವರಣ.

Nothing Phone (2a) ಮೊದಲ ಮಾರಾಟದಲ್ಲಿ ಬ್ಯಾಂಕ್ ಮತ್ತು ವಿನಿಮಯದ ಆಫರ್ಗಳೊಂದಿಗೆ ಕೇವಲ ₹19,999 ರೂಗಳಿಗೆ ಖರೀದಿಸಬಹುದು.

Nothing Phone (2a) Sale is Live in India: ಭಾರತದಲ್ಲಿ ಕಳೆದ ವಾರ ಜನಪ್ರಿಯ ಪಾರದರ್ಶಕ ಸ್ಮಾರ್ಟ್ಫೋನ್ ತಯಾರಕ ನಥಿಂಗ್ ತನ್ನ ಲೇಟೆಸ್ಟ್ Nothing Phone (2a) ಫೋನ್ ಬಿಡುಗಡೆ ಮಾಡಲಾಗಿದ್ದು ಇದನ್ನು ಕಂಪನಿ ಆರಂಭಿಕ ವೇರಿಯೆಂಟ್ 8GB RAM ಮತ್ತು 128GB ಸ್ಟೋರೇಜ್ ಕೇವಲ ₹23,999 ರೂಗಳಿಗೆ ಬಿಡುಗಡೆಗೊಳಿಸಿದೆ. ಆದರೆ Nothing Phone (2a) ಬಿಡುಗಡೆಯ ಮೊದಲ ಸಂದರ್ಭದಲ್ಲಿ ಆಸಕ್ತರು ಬ್ಯಾಂಕ್ ಮತ್ತು ವಿನಿಮಯದ ಆಫರ್ಗಳೊಂದಿಗೆ ಕೇವಲ ₹19,999 ರೂಗಳಿಗೆ ಖರೀದಿಸುವ ಒಂದು ದಿನದ ಭರ್ಜರಿ ಆಫರ್ ಅನ್ನು ಕಂಪನಿ ನೀಡುತ್ತಿದೆ. Nothing Phone (2a) ಸ್ಮಾರ್ಟ್ಫೋನ್ ಇಂದು 12ನೇ ಮಾರ್ಚ್ 2024 ರಂದು ಮಧ್ಯಾಹ್ನ 12:00 ಗಂಟೆಯಿಂದ ಶುರುವಾಗಿದ್ದು ಇನ್ನೂ ಕೆಲವೇ ಗಂಟೆಗಳು ಉಳಿದಿವೆ.

Also Read: 84 ದಿನಗಳಿಗೆ ಉಚಿತ Disney+ Hotstar ಜೊತೆಗೆ 168GB ಡೇಟಾ ನೀಡುವ Jio ಮತ್ತು Airtel ಬೆಸ್ಟ್ ಪ್ಲಾನ್!

Nothing Phone (2a) ಬಿಡುಗಡೆಯ ಆಫರ್‌ಗಳನ್ನು ಪಡೆಯುವುದು ಹೇಗೆ?

ಹೊಸ ಸ್ಮಾರ್ಟ್ಫೋನ್ ಕೊಳ್ಳಲು ಬಯಸುವ ಆಸಕ್ತರು Nothing Phone (2a) ಮೊದಲ ಮಾರಾಟದಲ್ಲೆ ಭರ್ಜರಿ ಆಫರ್‌ಗಳನ್ನು ಪಡೆಯಬಹುದು. ಯಾಕಂದರೆ ಈ ಸ್ಮಾರ್ಟ್ಫೋನ್ ಖರೀದಿಸಲು ಬಯಸುವ ಬಳಕೆದಾರರು HDFC ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವುದರೊಂದಿಗೆ ನೇರವಾಗಿ ₹2000 ತ್ವರಿತ ರಿಯಾಯಿತಿ ಪಡೆಯುವಿರಿ. ಅಷ್ಟೇಯಲ್ಲದೆ ನಿಮ್ಮ ಹಳೆಯ ಸ್ಮಾರ್ಟ್ಫೋನ್ ಅನ್ನು ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಕನಿಷ್ಠ ₹2000 ರೂಗಳ ರಿಯಾಯಿತಿಯನ್ನು ಸಹ ಪಡೆಯುವಿರಿ. ಈ ಆಫರ್ ಕೇವಲ ಇಂದು 12ನೇ ಮಾರ್ಚ್ 2024 ಮಧ್ಯರಾತ್ರಿಯವರೆಗೆ ಮಾತ್ರ ಲಭ್ಯವಿರುತ್ತದೆ.

ಕಂಪನಿ ಈ ಸ್ಮಾರ್ಟ್ಫೋನ್ ಅನ್ನು ಒಟ್ಟಾರೆಯಾಗಿ 3 ರೂಪಾಂತರಗಳಲ್ಲಿ ಬಿಡುಗಡೆಗೊಳಿಸಿದ್ದು 8GB RAM ಮತ್ತು 128GB ಸ್ಟೋರೇಜ್ ಬೆಲೆ 23,999 ರೂಗಳಿಗಿದ್ದು ಇದರ 8GB RAM ಮತ್ತು 256GB ಸ್ಟೋರೇಜ್ ಬೆಲೆ 25,999 ರೂಗಳಿಗಿದ್ದು ಕೊನೆಯದಾಗಿ ಇದರ 12GB RAM ಮತ್ತು 256GB ಸ್ಟೋರೇಜ್ ಬೆಲೆ 27,999 ರೂಗಳಾಗಿದೆ. ಈ ಸ್ಮಾರ್ಟ್ಫೋನ್ ಅನ್ನು ಮೇಲಿನ ಬೆಸ್ಟ್ ಬೆಲೆಯಲ್ಲಿ ಖರೀದಿಸಲು Buy Now ಮೇಲೆ ಕ್ಲಿಕ್ ಮಾಡಿ ಇಂದೇ ಉತ್ತಮ ಆಫರ್ಗಳೊಂದಿಗೆ ಖರೀದಿಸಬಹುದು.

ಭಾರತದಲ್ಲಿ ನಥಿಂಗ್ Phone (2a) ವಿಶೇಷಣಗಳು

ಈ ಲೇಟೆಸ್ಟ್ Nothing Phone (2a) ಫೋನ್ 2a 6.7 ಸ್ಮಾರ್ಟ್ಫೋನ್ ಇಂಚಿನ ಪೂರ್ಣ HD+ AMOLED ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 1300 nits ಗರಿಷ್ಠ ಹೊಳಪನ್ನು ಹೊಂದಿದೆ. ಸ್ಮಾರ್ಟ್‌ಫೋನ್ MediaTek Dimensity 7200 Pro ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. 12GB RAM ಮತ್ತು 256GB ವರೆಗೆ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು 50MP ಪ್ರೈಮರಿ ಸೆನ್ಸರ್ OIS ಮತ್ತು EIS ಮತ್ತು 50MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ಗೆ ಬೆಂಬಲಿಸುತ್ತದೆ. Nothing Phone (2a) ಎಲ್ಲಾ ಸೆಲ್ಫಿ ಮತ್ತು ವೀಡಿಯೊ ಕರೆ-ಸಂಬಂಧಿತ ಅವಶ್ಯಕತೆಗಳನ್ನು ನಿರ್ವಹಿಸಲು ಸ್ಮಾರ್ಟ್‌ಫೋನ್ 32MP ಮುಂಭಾಗದ ಸಂವೇದಕದೊಂದಿಗೆ ಬರುತ್ತದೆ. ಕೆಪೋನೆಯದಾಗಿ ಫೋನ್ 5000mAh ಬ್ಯಾಟರಿಯೊಂದಿಗೆ 45W ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo