ದಕ್ಷಿಣ ಕೊರಿಯಾದ ಟೆಕ್ ದೈತ್ಯ Samsung ಮೊಬೈಲ್ ಬ್ರಾಂಡ್‌ನ ಕೆಲವು ಸ್ಮಾರ್ಟ್‌ಫೋನ್ ಮಾಡೆಲ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಅದರಲ್ಲಿಯೂ ಮುಖ್ಯವಾಗಿ ಸಂಸ್ಥೆಯ ಬಜೆಟ್ ದರದ ಮೊಬೈಲ್‌ಗಳು ಹೆಚ್ಚಿನ ಗಮನ ಸೆಳೆದಿವೆ. ಆದರೆ ಇದೀಗ ಈ ಕಂಪನಿಯ ಕೆಲವು ಸ್ಮಾರ್ಟ್‌ಫೋನ್‌ಗಳು ಬೆಲೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿದ್ದು, ಗ್ರಾಹಕರು ಶಾಕ್ ಆಗುವಂತೆ ಆಗಿದೆ. ಸ್ಯಾಮ್‌ಸಂಗ್ ಕಂಪನಿಯ ಗ್ಯಾಲಕ್ಸಿ M ಹಾಗೂ ಗ್ಯಾಲಕ್ಸಿ F ಸರಣಿಯ Galaxy M36 ಮತ್ತು Galaxy F36 ಫೋನ್ ಮಾಡೆಲ್‌ಗಳ ಬೆಲೆಯಲ್ಲಿ ಹೆಚ್ಚಳ ಆಗಿದೆ. ಹಾಗಾದರೆ ಸ್ಯಾಮ್‌ಸಂಗ್ ಕಂಪನಿಯ ಯಾವ ಸ್ಮಾರ್ಟ್‌ಫೋನ್‌ಗಳು ಏರಿಕೆ ಕಂಡಿವೆ? ಹೊಸ ಪ್ರೈಸ್‌ಟ್ಯಾಗ್ ಎಷ್ಟು ಎಂಬ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಟ್ರಿಪಲ್ ಕ್ಯಾಮೆರಾ ಇರುವ Google Pixel 10 ಮೊಬೈಲ್ ಬೆಲೆಯಲ್ಲಿ ಭಾರೀ ಇಳಿಕೆ!
ಇದೇ ಮೇ 1 2026 ರಿಂದ ಹೊಸ ಬೆಲೆ ಜಾರಿಗೆ ಬರುವುದರೊಂದಿಗೆ ಸ್ಯಾಮ್‌ಸಂಗ್ ಭಾರತದಲ್ಲಿ ತನ್ನ ಹಲವಾರು ಸ್ಮಾರ್ಟ್‌ಫೋನ್‌ಗಳ ಬೆಲೆಗಳನ್ನು ಪರಿಷ್ಕರಿಸಿದೆ. ಈ ಬೆಲೆ ಏರಿಕೆ ಸಂಸ್ಥೆಯ ಗ್ಯಾಲಕ್ಸಿ M ಹಾಗೂ ಗ್ಯಾಲಕ್ಸಿ F ಮತ್ತು ಎಂಟ್ರಿ ಲೆವೆಲ್ ಮಾದರಿಯ 5G ಫೋನ್‌ಗಳ ಆಯ್ದ ಮಾಡೆಲ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಈ ಮೊಬೈಲ್‌ಗಳ ಬೆಲೆಯಲ್ಲಿ 1,000 ರೂ.ಗಳ ಏರಿಕೆ ಕಂಡುಬಂದಿದೆ.
ಸ್ಯಾಮಸಂಗ್ ಗ್ಯಾಲಕ್ಸಿ M36 ಮೊಬೈಲ್‌ನ 6GB + 128GB ವೇರಿಯಂಟ್ ಹಳೆಯ ದರ 20,999 ರೂ.ಗಳು ಆಗಿದ್ದು, ಈಗ ಬೆಲೆ ಹೆಚ್ಚಳದಿಂದ 21,999 ರೂ.ಗಳು ಆಗಿದೆ. ಹಾಗೆಯೇ 8GB + 256GB ವೇರಿಯಂಟ್ ಹಳೆಯ ದರವು 26,999 ರೂ.ಗಳು ಆಗಿದ್ದು, ಈಗ ಬೆಲೆ ಹೆಚ್ಚಳದಿಂದ 27,999 ರೂ.ಗಳಿಗೆ ಲಭ್ಯ. ಸ್ಯಾಮಸಂಗ್ ಗ್ಯಾಲಕ್ಸಿ F36 ಮೊಬೈಲ್‌ನ 6GB + 128GB ವೇರಿಯಂಟ್ ಹಳೆಯ ದರ 20,999 ರೂ.ಗಳು ಆಗಿದ್ದು, ಈಗ ಬೆಲೆ ಏರಿಕೆಯಿಂದಾಗಿ 21,999 ರೂ.ಗಳು ಸಿಗಲಿದೆ. ಹಾಗೆಯೇ 8GB + 256GB ವೇರಿಯಂಟ್ ಹಳೆಯ ದರವು 26,999 ರೂ.ಗಳು ಆಗಿದ್ದು, ಈಗ ಬೆಲೆ ಹೆಚ್ಚಳದಿಂದ 27,999 ರೂ.ಗಳಿಗೆ ಲಭ್ಯ.
ಇನ್ನು ಸ್ಯಾಮಸಂಗ್ ಗ್ಯಾಲಕ್ಸಿ M17 5G ಮೊಬೈಲ್‌ನ 4GB + 128GB ವೇರಿಯಂಟ್ ಹಳೆಯ ದರ 15,999 ರೂ.ಗಳು ಆಗಿದ್ದು, ಈಗ ಬೆಲೆ ಹೆಚ್ಚಳದಿಂದ 16,999 ರೂ.ಗಳು ಆಗಿದೆ. ಹಾಗೆಯೇ 8GB + 128GB ವೇರಿಯಂಟ್ ಹಳೆಯ ದರವು 19,999 ರೂ.ಗಳು ಆಗಿದ್ದು, ಈಗ ಬೆಲೆ ಹೆಚ್ಚಳದಿಂದ 20,999 ರೂ.ಗಳಿಗೆ ಲಭ್ಯ. ಅದೇ ರೀತಿ ಸ್ಯಾಮಸಂಗ್ ಗ್ಯಾಲಕ್ಸಿ F70e 5G ಫೋನ್ 4GB + 128GB ವೇರಿಯಂಟ್ ಹಳೆಯ ದರವು 14,499 ರೂ.ಗಳು ಆಗಿದ್ದು, ಈಗ ಬೆಲೆ ಹೆಚ್ಚಳದಿಂದ 15,499 ರೂ.ಗಳಿಗೆ ಲಭ್ಯ. ಸ್ಯಾಮಸಂಗ್ ಗ್ಯಾಲಕ್ಸಿ M06 5G ಫೋನಿನ 4GB + 64GB ವೇರಿಯಂಟ್ ಹಳೆಯ ದರವು 11,499 ರೂ.ಗಳು ಆಗಿದ್ದು, ಈಗ ಬೆಲೆ ಹೆಚ್ಚಳದಿಂದ 12,499 ರೂ.ಗಳಿಗೆ ಸಿಗುತ್ತದೆ.