Samsung ಕಂಪನಿಯ ಈ ಸ್ಮಾರ್ಟ್‌ಫೋನ್‌ಗಳು ಇನ್ನು ದುಬಾರಿ! ಇಲ್ಲಿದೆ ಮಾಹಿತಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಸರಣಿಯ ಕೆಲವು ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ
ಹೊಸ ಪರಿಷ್ಕೃತ ದರಗಳು ಇದೇ ಮಾರ್ಚ್ 5 ರಿಂದ ಜಾರಿಗೆ ಬಂದಿವೆ ಎಂದು ವರದಿಗಳಾಗಿವೆ
ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆಯ ಬಗ್ಗೆ ಕಂಪನಿಯು ಇನ್ನೂ ಅಧಿಕೃತವಾಗಿ ವಿವರಿಸಿಲ್ಲ
ಭಾರತೀಯ ಮಾರುಕಟ್ಟೆಯಲ್ಲಿ Samsung ಕಂಪನಿಯ ಮೊಬೈಲ್‌ಗಳಿಗೆ ಸಖತ್ ಡಿಮ್ಯಾಂಡ್ ಇದೆ. ಆದರೆ ಸ್ಯಾಮ್‌ಸಂಗ್ ಫೋನ್ ಪ್ರಿಯರಿಗೆ ಇದೀಗ ಶಾಕಿಂಗ್ ಸುದ್ದಿ ಇದೆ. ಭಾರತದಲ್ಲಿ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ಸರಣಿಯ ಹಲವಾರು ಮೊಬೈಲ್‌ಗಳ ಬೆಲೆಗಳಲ್ಲಿ ಏರಿಕೆ ಆಗಿದೆ ಎಂದು ವರದಿಯಾಗಿದೆ. ಪರಿಷ್ಕೃತ ಬೆಲೆಗಳು ಇದೇ ಮಾರ್ಚ್ 5, 2026 ರಿಂದ ಜಾರಿಗೆ ಬಂದಿವೆ. ಸ್ಯಾಮ್‌ಸಂಗ್ ಸಂಸ್ಥೆಯ Galaxy M36, Galaxy F36 ಮತ್ತು Galaxy M17 5G ಮೊಬೈಲ್ ಸೇರಿದಂತೆ ಮೀಡ್‌ರೇಂಜ್ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆಯಲ್ಲಿ ಕಾಣಿಸಿಕೊಂಡಿವೆ. ಬೆಲೆ ಏರಿಕೆಯ ಬಗ್ಗೆ ಟಿಪ್‌ಸ್ಟರ್ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದರೆ ಬೆಲೆ ಏರಿಕೆ ಕಂಡ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Amazon EPL 2026: 55 ಇಂಚಿನ ಈ Sony ಸ್ಮಾರ್ಟ್‌ಟಿವಿಗೆ ಭರ್ಜರಿ ಡಿಸ್ಕೌಂಟ್
Samsung Galaxy ಫೋನ್‌ಗಳ ಪರಿಷ್ಕೃತ ಬೆಲೆಗಳು
ಟಿಪ್‌ಸ್ಟರ್ ಮಾಹಿತಿ ಪ್ರಕಾರ ಸ್ಯಾಮ್‌ಸಂಗ್ ಗ್ಯಾಲಕ್ಸಿ M36 ಮೊಬೈಲ್ ಭಾರತದಲ್ಲಿ 8GB + 128GB ವೇರಿಯಂಟ್ ದರದಲ್ಲಿ 500 ರೂಗಳ ಏರಿಕೆಯಾಗಿದ್ದು, ಪರಿಷ್ಕೃತ ಬೆಲೆ 21,999 ರೂಗಳು ಆಗಿದೆ. ಹಾಗೆಯೇ 8GB + 256GB ವೇರಿಯಂಟ್ ದರದಲ್ಲಿ 1,500 ರೂಗಳ ಏರಿಕೆ ಕಂಡಿದ್ದು, ಇದರ ಪರಿಷ್ಕೃತ ಬೆಲೆ 25,999 ರೂಗಳು ಆಗಿದೆ. ಅದೇ ರೀತಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M17 5G ಮೊಬೈಲ್ 6GB + 128GB ವೇರಿಯಂಟ್ ದರದಲ್ಲಿ 500 ರೂಗಳ ಏರಿಕೆಯಾಗಿದ್ದು, ಪರಿಷ್ಕೃತ ಬೆಲೆ 16,499 ರೂಗಳು ಆಗಿದೆ. ಹಾಗೆಯೇ 8GB + 128GB ವೇರಿಯಂಟ್ ದರದಲ್ಲಿ 1,000 ರೂಗಳ ಏರಿಕೆ ಕಂಡಿದ್ದು, ಇದರ ಪರಿಷ್ಕೃತ ಬೆಲೆ 18,499 ರೂಗಳು ಆಗಿದೆ.

ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ F17 5G ಮೊಬೈಲ್ ಬೆಲೆ 1,000 ರೂ.ಗಳ ವರೆಗೆ ಏರಿಕೆಯಾಗಿದೆ ಎಂದು ವರದಿಗಳಾಗಿವೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ A17 5G ಮೊಬೈಲ್ ಬೆಲೆ ವೇರಿಯಂಟ್‌ಗೆ ಅನುಗುಣವಾಗಿ 3,000 ರೂ.ಗಳ ವರೆಗೆ ಏರಿಕೆ ಕಾಣಬಹುದು. ಅದೇ ರೀತಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A06 5G ಮೊಬೈಲ್ ದರದಲ್ಲಿ 1,500 ರೂ.ಗಳ ವರೆಗೆ ಏರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಅಂದಹಾಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆಯ ಬಗ್ಗೆ ಇನ್ನೂ ಅಧಿಕೃತವಾಗಿ ವಿವರಿಸಿಲ್ಲ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಮೊಬೈಲ್‌ಗಳ ಬೆಲೆ ಪರಿಷ್ಕರಣೆಯು ಗ್ರಾಹಕರಿಗೆ ಅಚ್ಚರಿ ಎನಿಸಿದೆ. ಹಾಗೆಯೇ ಒಪ್ಪೋ ಮೊಬೈಲ್ ಕಂಪನಿಯು ಕೂಡ ಆಯ್ದ ಕೆಲವು ಫೋನ್‌ಗಳ ಬೆಲೆ ಏರಿಕೆ ಮಾಡುವ ಸೂಚನೆಗಳಿ ಇವೆ ಎನ್ನಲಾಗಿದೆ. ಮುಖ್ಯವಾಗಿ ಒಪ್ಪೋ A6 ಪ್ರೊ, ಒಪ್ಪೋ A6x ಮತ್ತು ಒಪ್ಪೋ ರೆನೋ 15C ಶ್ರೇಣಿಯ ಮೊಬೈಲ್‌ಗಳು ಕೂಡಾ ಶೀಘ್ರದಲ್ಲೇ ಬೆಲೆ ಏರಿಕೆಯನ್ನು ಕಾಣುವ ನಿರೀಕ್ಷೆಗಳು ಇವೆ ಎನ್ನಲಾಗಿದೆ. ಆದರೆ ಗಮನಿಸಬೇಕಾದ ಸಂಗತಿಯೆಂದರೆ ಕಂಪನಿಗಳು ಅಧಿಕೃತ ದೃಢೀಕರಣ ಹೊರಹಾಕಿಲ್ಲ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile