Galaxy M07
ಅಮೆಜಾನ್ ತಾಣದಲ್ಲಿ ಚಾಲ್ತಿ ಇರುವ Amazon Great Indian Festival Sale 2026 ಸೇಲ್ ಆನ್ಲೈನ್ ಶಾಪಿಂಗ್ ಪ್ರಿಯರ ಗಮನ ಸೆಳೆಯುತ್ತಿದೆ. ಈ ಮಾರಾಟದಲ್ಲಿ ಆಯ್ದ ಫೋನ್ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಿದ್ದು, ಆ ಪೈಕಿ Samsung Galaxy M07 ಮೊಬೈಲ್ ಗಮನಾರ್ಹ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್ಗಳ ಕೊಡುಗೆಗಳು ಹಾಗೂ ಎಕ್ಸ್ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಅವಕಾಶ ಇದೆ. ಈ ಮೊಬೈಲ್ ಆಕ್ಟಾ-ಕೋರ್ MediaTek Helio G99 ಚಿಪ್ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಸ್ಮಾರ್ಟ್ಫೋನ್ 5,000mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಮೊಬೈಲ್ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಅಮೆಜಾನ್ ಇ ಕಾಮರ್ಸ್ ವೆಬ್ಸೈಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ M07 ಮೊಬೈಲ್ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : 50MP ಸೆಲ್ಫಿ ಕ್ಯಾಮೆರಾ ಸೌಲಭ್ಯದ OPPO F35 Pro ಮೊಬೈಲ್ಗೆ ಈಗ ಭರ್ಜರಿ ಡಿಸ್ಕೌಂಟ್!
ಅಗ್ಗದ ಬೆಲೆ ಹಾಗೂ ಆಕರ್ಷಕ ಫೀಚರ್ಸ್ ಮೂಲಕ ಗ್ರಾಹಕರ ಗಮನ ಸೆಳೆದಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ M07 ಮೊಬೈಲ್ ಅಮೆಜಾನ್ ಇ ಕಾಮರ್ಸ್ ಪ್ಲಾಟ್ಫಾರ್ಮ್ ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಮೊಬೈಲ್ 4GB + 64GB ಸ್ಟೋರೇಜ್ ವೇರಿಯಂಟ್ ಬೆಲೆ 16,999 ರೂ.ಗಳು ಆಗಿದ್ದು, ಆದರೆ ಆಫರ್ನಲ್ಲಿ ಪ್ರಸ್ತುತ ಈ ಮೊಬೈಲ್ 11,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್ ಅನ್ನು ಗ್ರಾಹಕರು ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ಸ್ಯಾಮ್ಸಂಗ್ ಗ್ಯಾಲಕ್ಸಿ M07 ಸ್ಮಾರ್ಟ್ಫೋನ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.
ಸ್ಯಾಮ್ಸಂಗ್ ಗ್ಯಾಲಕ್ಸಿ M07 ಮೊಬೈಲ್ 6.7 ಇಂಚಿನ HD+ ಪ್ಯಾನೆಲ್ ಡಿಸ್ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್ 90Hz ರಿಫ್ರೆಶ್ ರೇಟ್ ಜೊತೆಗೆ 260ppi ಪಿಕ್ಸೆಲ್ ಸಾಂದ್ರತೆ ಅನ್ನು ಪಡೆದಿದೆ. ಹಾಗೆಯೇ ಈ ಫೋನ್ ಆಕ್ಟಾ ಕೋರ್ MediaTek Helio G99 ಚಿಪ್ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇದಕ್ಕೆ ಪೂರಕವಾಗಿ 4GB RAM + 64GB ವೇರಿಯಂಟ್ಗಳ ಆಯ್ಕೆ ಒಳಗೊಂಡಿದೆ. ಹಾಗೆಯೇ ಧೂಳು ಮತ್ತು ನೀರಿನ ಸಿಂಚನದಿಂದ ರಕ್ಷಣೆ ಪಡೆಯಲು IP54 ರೇಟಿಂಗ್ ಅನ್ನು ಹೊಂದಿದೆ.
ಹಾಗೆಯೇ ಸ್ಯಾಮ್ಸಂಗ್ ಗ್ಯಾಲಕ್ಸಿ M07 ಮೊಬೈಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಮುಖ್ಯ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದ್ದು, ಸೆಕೆಂಡರಿ ಕ್ಯಾಮೆರಾವು 2MP ಸೆನ್ಸಾರ್ ಸೌಲಭ್ಯ ಪಡೆದಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಅಲ್ಲದೇ ಇದು 5,000mAh ಬ್ಯಾಟರಿ ಬ್ಯಾಕ್ಅಪ್ ಸಪೋರ್ಟ್ ಜೊತೆಗೆ 25W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿದೆ.
Disclosure: This Article Contains Affiliate Links