Samsung Galaxy F70 Pro vs OnePlus N6: ಈ ಎರಡು ಫೋನ್‌ಗಳಲ್ಲಿ ಖರೀದಿಗೆ ಯಾವುದು ಬೆಸ್ಟ್‌

HIGHLIGHTS

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F70 ಪ್ರೊ VS ಒನ್‌ಪ್ಲಸ್‌ N6 ಯಾವುದು ಬೆಸ್ಟ್‌

ಒನ್‌ಪ್ಲಸ್‌ N6 ಮೊಬೈಲ್‌ 8,000mAh ಬ್ಯಾಟರಿ ಮೂಲಕ ಗಮನ ಸೆಳೆದಿದೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F70 ಪ್ರೊ ಫೋನ್‌ ಟ್ರಿಪಲ್‌ ಕ್ಯಾಮೆರಾ ಮೂಲಕ ಆಕರ್ಷಕ ಎನಸಿದೆ

ಜನಪ್ರಿಯ ಸ್ಯಾಮ್‌ಸಂಗ್‌ ಕಂಪನಿಯು ಇತ್ತೀಚಿಗಷ್ಟೆ ಮಾರುಕಟ್ಟೆಗೆ ಹೊಸದಾಗಿ Samsung Galaxy F70 Pro ಮೊಬೈಲ್‌ ಬಿಡುಗಡೆ ಮಾಡಿದ್ದು, ಈ ಫೋನ್ ಗ್ರಾಹಕರ ಗಮನ ಸೆಳೆಯುತ್ತಿದೆ. ಹಾಗೆಯೇ ಒನ್‌ಪ್ಲಸ್‌ ಕಂಪನಿಯು ಇತ್ತೀಚಿಗೆ ಲಾಂಚ್ ಮಾಡಿರುವ OnePlus N6 ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಎರಡು ಮೀಡ್‌ರೇಂಜ್‌ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್ಸ್‌ ಒಳಗೊಂಡಿದ್ದು, ಉತ್ತಮ ಕಾರ್ಯವೈಖರಿ ಮತ್ತು ಅತ್ಯುತ್ತಮ ಡಿಸೈನ್‌ ಮೂಲಕ ಹೆಚ್ಚಿನ ಗಮನ ಸೆಳೆಯುತ್ತಿವೆ. ಅದಾಗ್ಯೂ, ಈ ಎರಡು ಸ್ಮಾರ್ಟ್‌ಫೋನ್‌ಗಳ ನಡುವೆ ಕೆಲವು ಭಿನ್ನತೆಗಳು ಇವೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ VS ಒನ್‌ಪ್ಲಸ್‌ N6 ಇವೆರಡು ಮೊಬೈಲ್‌ಗಳಲ್ಲಿ ಖರೀದಿಗೆ ಯಾವ ಫೋನ್‌ ಉತ್ತಮ? ಇವುಗಳ ಫೀಚರ್ಸ್‌ ಹೇಗಿವೆ ಮುಂದೆ ತಿಳಿಯೋಣ.

Also Read : ChatGPT ಮಾತ್ರವಲ್ಲ! ವಿದ್ಯಾರ್ಥಿಗಳಿಗೆ ಉಪಯುಕ್ತ AI ಟೂಲ್‌ಗಳು ಇಲ್ಲಿವೆ ನೋಡಿ

Samsung Galaxy F70 Pro vs OnePlus N6

ಈ ಎರಡು ಸ್ಮಾರ್ಟ್‌ಫೋನ್‌ಗಳು ಇತ್ತೀಚಿಗಷ್ಟೆ ಭಾರತೀಯ ಮೊಬೈಲ್‌ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮೀಡ್‌ರೇಂಗ್‌ ವಿಭಾಗದಲ್ಲಿ ಕಾಣಿಸಿಕೊಂಡಿರುವ ಈ ಫೋನ್‌ಗಳು ಬಹುತೇಖ ಸಾಮ್ಯತೆ ಎಂಬಂತೆ ತೋರಿಸರು ಕೆಲವು ಭಿನ್ನತೆಗಳನ್ನು ಒಳಗೊಂಡಿವೆ. ಹಾಗಾದರೆ ಈ ಎರಡು ಮೊಬೈಲ್‌ಗಳ ಫೀಚರ್ಸ್ಗಳ ಭಿನ್ನತೆ ಏನು ಹಾಗೂ ಯಾವುದು ಯೋಗ್ಯ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಡಿಸ್‌ಪ್ಲೇ ಮತ್ತು ಡಿಸೈನ್‌ ಮಾಹಿತಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ ಮತ್ತು ಒನ್‌ಪ್ಲಸ್‌ N6 ಫೋನ್‌ಗಳು ಡಿಸ್‌ಪ್ಲೇ ನೋಡುವುದಾರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ ಫೋನ್‌ 6.7 ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್‌ಪ್ಲೇ ಪಡೆದಿದೆ. ಹಾಗೆಯೇ 120Hz ರಿಫ್ರೆಶ್ ರೇಟ್‌ ಹೊಂದಿದೆ. ಅದೇ ರೀತಿ ಒನ್‌ಪ್ಲಸ್‌ N6 ಫೋನ್ 6.75 ಇಂಚಿನ HD+ LCD ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್‌ ಜೊತೆಗೆ 1570 x 720 ಪಿಕ್ಸಲ್‌ ರೆಸಲ್ಯೂಶನ್‌ ಒಳಗೊಂಡಿದೆ. ಈ ವಿಭಾಗದಲ್ಲಿ ಸ್ಯಾಮ್‌ಸಂಗ್‌ ಆಕರ್ಷಕ ಎನಿಸುತ್ತದೆ.

ಪ್ರೊಸೆಸರ್‌ ಪವರ್‌ನಲ್ಲಿ ಯಾರು ಕಿಂಗ್?

ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ ಮೊಬೈಲ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 Gen 3 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಹೊಂದಿದೆ. ಅಲ್ಲದೇ 6GB+128GB ಹಾಗೂ 8GB+256GB ಸ್ಟೋರೇಜ್‌ ಸಪೋರ್ಟ್‌ ಪಡೆದುಕೊಂಡಿದೆ. ಇನ್ನು ಒನ್‌ಪ್ಲಸ್‌ N6 ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6360 ಅಪೆಕ್ಸ್ ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡುತ್ತದೆ. ಇನ್ನು ಒನ್‌ಪ್ಲಸ್‌ N6 ಮೊಬೈಲ್‌ 4GB+128GB ಹಾಗೂ 6GB+128GB ವೇರಿಯಂಟ್‌ ಆಯ್ಕೆಗಳನ್ನು ಫೋನ್‌ಗಳು ಪಡೆದುಕೊಂಡಿವೆ. ಸ್ನ್ಯಾಪ್‌ಡ್ರಾಗನ್‌ ಪ್ರೊಸೆಸರ್‌ ಬಯಸುವವರಿಗೆ ಸ್ಯಾಮ್‌ಸಂಗ್‌ ಗಮನ ಸೆಳೆಯುತ್ತದೆ.

ಕ್ಯಾಮೆರಾ ಸೆನ್ಸಾರ್‌ ಯಾವುದು ಬೆಸ್ಟ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ ಮೊಬೈಲ್‌ ಹಿಂಭಾಗದಲ್ಲಿ 50MP + 5MP + 2MP ಕ್ಯಾಮೆರಾ ಸೆನ್ಸಾರ್‌ ರಚನೆ ಪಡೆದಿದೆ. ಹಾಗೆಯೇ ಮುಂಭಾಗದಲ್ಲಿ 12MP ಸೆನ್ಸಾರ್‌ ಕ್ಯಾಮೆರಾ ಪಡೆದುಕೊಂಡಿದೆ. ಇನ್ನು ಒನ್‌ಪ್ಲಸ್‌ N6 ಫೋನ್‌ ಹಿಂಬದಿಯಲ್ಲಿ 50MP + 2MP ಕ್ಯಾಮೆರಾ ಸೆನ್ಸಾರ್‌ ಸೆಟ್‌ಅಪ್‌ ಒಳಗೊಂಡಿದೆ. ಹಾಗೆಯೇ ಮುಂಭಾಗದಲ್ಲಿ 8MP ಸೆನ್ಸಾರ್‌ ಕ್ಯಾಮೆರಾ ಹೊಂದಿದೆ. ಟ್ರಿಪಲ್ ಕ್ಯಾಮೆರಾ ಬೇಕು ಎನ್ನುವವರಿಗೆ ಸ್ಯಾಮ್‌ಸಂಗ್ ಆಕರ್ಷಕ ಎನಿಸುತ್ತದೆ. ಇನ್ನು ಡ್ಯುಯಲ್‌ ಕ್ಯಾಮೆರಾ ಎಂದಾದಾರೆ ಒನ್‌ಪ್ಲಸ್‌ ಗಮನ ಸೆಳೆಯುತ್ತದೆ.

ಬ್ಯಾಟರಿ ಬ್ಯಾಕ್‌ಅಪ್‌ ಮಾಹಿತಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ ಫೋನ್‌ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಇದರೊಂದಿಗೆ 45W ವೈರ್ಡ್ ಚಾರ್ಜಿಂಗ್ ಸಪೋರ್ಟ್‌ ಪಡೆದುಕೊಂಡಿದೆ. ಇನ್ನು ಒನ್‌ಪ್ಲಸ್‌ N6 ಮೊಬೈಲ್‌ 8,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಇದರೊಂದಿಗೆ 45W ವೈರ್ಡ್ ಚಾರ್ಜಿಂಗ್ ಜೊತೆಗೆ ರಿವರ್ಸ್‌ ಚಾರ್ಜಿಂಗ್ ಸಪೋರ್ಟ್‌ ಸಹ ಒಳಗೊಂಡಿದೆ. ಇನ್ನು ಬ್ಯಾಟರಿ ವಿಭಾಗದಲ್ಲಿ ಒನ್‌ಪ್ಲಸ್‌ ಜಬರ್ದಸ್ತ್‌ ಹಿಡಿತ ಸಾಧಿಸಿದೆ.

ಕೊನೆಯ ಮಾತು

ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ ಹಾಗೂ ಮೊಟೊರೊಲಾ ಎಡ್ಜ್ 70 ಪ್ರೊ 5G ಈ ಎರಡು ಮೊಬೈಲ್‌ಗಳು ಆಕರ್ಷಕ ಫೀಚರ್ಸ್‌ ಮೂಲಕ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿವೆ. ಅದಾಗ್ಯೂ, ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ ಫೋನ್‌ ಬ್ಯಾಕ್‌ಅಪ್‌, ಅತ್ಯುತ್ತಮ ಪ್ರೊಸೆಸರ್‌ ಕಾರ್ಯವೈಖರಿ ಹಾಗೂ ಉತ್ತಮ ಕ್ಯಾಮೆರಾ ಸೆಟ್‌ಅಪ್‌ ಮೂಲಕ ಹೆಚ್ಚಿನ ಆಕರ್ಷಣೆ ಮಾಡುತ್ತದೆ. ಹಾಗೆಯೇ ಒನ್‌ಪ್ಲಸ್‌ N6 ಫೋನ್‌ ಸಹ ಆಕರ್ಷಕ ಡಿಸೈನ್‌, ಬಿಗ್‌ ಬ್ಯಾಟರಿ ಪವರ್‌, ಅತ್ಯುತ್ತಮ ಡಿಸ್‌ಪ್ಲೇ ಹಾಗೂ ಉತ್ತಮ ಕಾರ್ಯವೈಖರಿಯ ಫೀಚರ್ಸ್‌ ಪಡೆದಿದೆ. ಒಟ್ಟಾರೇ ಸ್ಯಾಮ್‌ಸಂಗ್‌ ಉತ್ತಮ ಆಯ್ಕೆ ಎನಿಸಿದರೂ, ಬ್ಯಾಟರಿಯಿಂದ ಒನ್‌ಪ್ಲಸ್‌ ಹೆಚ್ಚಿನ ಗಮನ ಸೆಳೆಯುತ್ತದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :