Samsung Galaxy F56 5G launched in India
ಭಾರತದಲ್ಲಿ ಸ್ಯಾಮ್‌ಸಂಗ್ ಸದ್ದಿಲ್ಲದೇ ತನ್ನ ಲೇಟೆಸ್ಟ್ Samsung Galaxy F56 5G ಸ್ಮಾರ್ಟ್ಫೋನ್ ಅನ್ನು ಬಿಡುಗಡೆಯಾಗಿದೆ. ಹೊಸ ಈ Samsung Galaxy F ಸರಣಿಯ ಸ್ಮಾರ್ಟ್‌ಫೋನ್ ಸ್ಲಿಮ್ ಬಿಲ್ಡ್ ಹೊಂದಿದ್ದು ಇದರಲ್ಲಿ 8GB RAM ಜೊತೆಗೆ Exynos 1480 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ ನಿಮಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಅನ್ನು ಹೊಂದಿರುವ ಟ್ರಿಪಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಈ ಹೊಸ Samsung Galaxy F56 5G ಸ್ಮಾರ್ಟ್ಫೋನ್ 6 ವರ್ಷಗಳ ಆಂಡ್ರಾಯ್ಡ್ ಅಪ್‌ಗ್ರೇಡ್‌ಗಳನ್ನು ಭರವಸೆ ನೀಡುತ್ತಿದೆ. ಹ್ಯಾಂಡ್‌ಸೆಟ್ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
ಹೊಸ Samsung Galaxy F56 5G ಸ್ಮಾರ್ಟ್ ಫೋನ್ ಸದ್ದಿಲ್ಲದೇ ಬಿಡುಗಡೆಯಾಗಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಕಂಪನಿ 25,999 ರೂಗಳಿಗೆ ಪರಿಚಯಿಸಿದರೆ ಇದರ 8GB RAM ಮತ್ತು 256GB ಸ್ಟೋರೇಜ್ ಮಾದರಿಯನ್ನು 28,999 ರೂಗಳಿಗೆ ನಿಗದಿಪಡಿಸಿದೆ. Samsung Galaxy F56 5G ಸ್ಮಾರ್ಟ್ ಫೋನ್ ಪರಿಚಯಾತ್ಮಕ ಬೆಲೆ ಟ್ಯಾಗ್‌ಗಳಾಡಿಯಲ್ಲಿ ಭಾರಿ ಬ್ಯಾಂಕ್ ಆಧಾರಿತ ರಿಯಾಯಿತಿಯೊಂದಿಗೆ ಸುಮಾರು 2,000 ರೂಗಳ ಡಿಸ್ಕೌಂಟ್ ನೀಡುತ್ತಿದೆ.
ಈ ಸ್ಮಾರ್ಟ್ಫೋನ್ ಅನ್ನು ನೀವು ಹಸಿರು ಮತ್ತು ನೇರಳೆ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ಈ ಸ್ಯಾಮ್‌ಸಂಗ್ ಸ್ಮಾರ್ಟ್ಫೋನ್ ಫೋನ್ 6.7 ಇಂಚಿನ ಪೂರ್ಣ HD+ ಸೂಪರ್ AMOLED+ ಡಿಸ್ಪ್ಲೇಯನ್ನು 1,200 ನಿಟ್‌ಗಳ ಹೈ ಬ್ರೈಟ್‌ನೆಸ್ ಮೋಡ್ (HBM) ಮತ್ತು 120Hz ರಿಫ್ರೆಶ್ ದರದೊಂದಿಗೆ ಡಿಸ್ಪ್ಲೇ ವಿಷನ್ ಬೂಸ್ಟರ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಹ್ಯಾಂಡ್‌ಸೆಟ್ ಮುಂಭಾಗ ಮತ್ತು ಹಿಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್ ಲೇಪನವನ್ನು ಹೊಂದಿದೆ.
ಇದನ್ನೂ ಓದಿ: Sale Ends Today: ಅಮೆಜಾನ್ ಕೊನೆ ದಿನದ ಮಾರಾಟದಲ್ಲಿ 15,000 ರೂಗಳೊಳಗೆ ಬಾಚಿಕೊಳ್ಳಿ ಈ ಲೇಟೆಸ್ಟ್ 5G ಸ್ಮಾರ್ಟ್ಫೋನ್ಗಳು!
ಇದು Exynos 1480 ಪ್ರೊಸೆಸರ್ ಜೊತೆಗೆ 8GB LPDDR5X RAM ಮತ್ತು 256GB ವರೆಗೆ ಸ್ಟೋರೇಜ್ ಆಂಡ್ರಾಯ್ಡ್ 15 ಆಧಾರಿತ ಒನ್ UI 7 ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 6 ವರ್ಷದವರವೆಗೆ ಆಂಡ್ರಾಯ್ಡ್ ಅಪ್‌ಗ್ರೇಡ್ ಮತ್ತು ಭದ್ರತಾ ಅಪ್ಡೇಟ್ ದೃಢಪಡಿಸಲಾಗಿದೆ.
Samsung Galaxy F56 5G ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ ಮುಖ್ಯ ಸಂವೇದಕದಿಂದ ನಡೆಸಲ್ಪಡುವ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ ಮತ್ತು OIS ಗೆ ಬೆಂಬಲವನ್ನು ಹೊಂದಿದೆ. ಮುಂಭಾಗದಲ್ಲಿ ಇದು 12MP ಮೆಗಾಪಿಕ್ಸೆಲ್ HDR ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾ ಸೆಟಪ್ ಆಬ್ಜೆಕ್ಟ್ ಎರೇಸರ್ ಮತ್ತು ಎಡಿಟ್ ಸಲಹೆಗಳಂತಹ ಬಹು AI ಇಮೇಜಿಂಗ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಸ್ಮಾರ್ಟ್ಫೋನ್ 45W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ.