Samsung Galaxy F55 5G price drop - Kannada News
Samsung Galaxy F55 5G Price Drop: ಸ್ಯಾಮ್‌ಸಂಗ್ ಭಾರತದಲ್ಲಿ ಜನರು ಹೆಚ್ಚು ಭರವಸೆ ಇಡುವ ಅತ್ಯುತ್ತಮ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಸ್ಯಾಮ್‌ಸಂಗ್ ಈಗ ತನ್ನ ಲೇಟೆಸ್ಟ್ Samsung Galaxy F55 5G ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಕಡಿಮೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಲೇಟೆಸ್ಟ್ ಫೀಚರ್‌ಗಳನ್ನು ಹೊಂದಿದ್ದು ಬ್ಯಾಂಕ್ ಆಫರ್ ಜೊತೆಗೆ ಸ್ಮಾರ್ಟ್ಫೋನ್ MRP ಬೆಲೆಗೆ ಅನುಗುಣವಾಗಿ ಭಾರಿ ಬೆಲೆ ಕಡಿತಗೊಳಿಸಿದೆ.
ಪ್ರಸ್ತುತ Samsung Galaxy F55 5G ಸ್ಮಾರ್ಟ್‌ಫೋನ್‌ನ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಮಾದರಿಯನ್ನು 16,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಇದರ ಮೇಲೆ ಅಮೆಜಾನ್ ಬ್ಯಾಂಕ್ ಆಫರ್ ಅಡಿಯಲ್ಲಿ 2000 ರೂಗಳ ಹೆಚ್ಚುವರಿಯ ಡಿಸ್ಕೌಂಟ್ ಸಹ ಲಿಮಿಟೆಡ್ ಸಮಯಕ್ಕೆ ನೀಡುತ್ತಿದೆ.
ಇದನ್ನೂ ಓದಿ: Cyber Fraud: ಸೈಬರ್ ವಂಚಕರಿಗೆ ತಲೆನೋವು ತಂದ ಈ ಪವರ್ಫುಲ್ ಟೂಲ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಯಾಮ್‌ಸಂಗ್ ತನ್ನ ಇತ್ತೀಚಿನ Samsung Galaxy F55 5G ಸ್ಮಾರ್ಟ್‌ಫೋನ್‌ನ ಬೆಲೆಯನ್ನು ಭಾರತದಲ್ಲಿ ಗಮನಾರ್ಹವಾಗಿ ಕಡಿಮೆ ಮಾಡಿದೆ. ಪ್ರಸ್ತುತ ಅಮೆಜಾನ್ ಮೂಲಕ Samsung Galaxy F55 5G ಸ್ಮಾರ್ಟ್ಫೋನ್ ಮೇಲೆ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಫೋನ್‌ನ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ ₹16,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ ಆಫರ್‌ಗಳ ಬಗ್ಗೆ ಮಾತನಾಡುವುದಾದರೆ ಪ್ರಸ್ತುತ 12,000 ರೂಗಳ ರಿಯಾಯಿತಿಯೊಂದಿಗೆ ಖರೀದಿಸಲು ಪಟ್ಟಿ ಮಾಡಲಾಗಿದೆ.
ಅದರೊಂದಿಗೆ ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಈ ಫೋನ್ ಮೇಲೆ 2000 ರೂಗಳ ರಿಯಾಯಿತಿ ಕೊಡುಗೆ ಲಭ್ಯವಿದೆ. ಹೆಚ್ಚಿನ ಕೊಡುಗೆಗಳು ಮತ್ತು ಮಾಹಿತಿಗಾಗಿ ಅಮೆಜಾನ್ ಭೇಟಿ ನೀಡಬಹುದಾಗಿದ್ದು ಕೊಡುಗೆಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 16,100 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಈ Samsung Galaxy F55 5G ಫೋನ್ 6.7 ಇಂಚಿನ ಪೂರ್ಣ HD+ ಡಿಸ್ಪ್ಲೇಯನ್ನು ಹೊಂದಿದ್ದು 120Hz ರಿಫ್ರೆಶ್ ದರವನ್ನು ಹೊಂದಿದೆ. ವೇಗ ಮತ್ತು ಬಹುಕಾರ್ಯಕಕ್ಕಾಗಿ ಈ ಫೋನ್ ಸ್ನಾಪ್‌ಡ್ರಾಗನ್ ಜೆನ್ 1 ಪ್ರೊಸೆಸರ್ ಅನ್ನು ಹೊಂದಿದೆ. ಅಲ್ಲದೆ ಈ ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: ಮುಂಬರಲಿರುವ Infinix GT 30 Pro 5G ಫೋನ್‌ನ ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ
Samsung Galaxy F55 5G ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಸೆಟಪ್ 50MP ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಅದರೊಂದಿಗೆ ಈ ಸೆಟಪ್ 8MP ಸೆಕೆಂಡರಿ ಮತ್ತು 2MP ಮೂರನೇ ಕ್ಯಾಮೆರಾವನ್ನು ಒಳಗೊಂಡಿದೆ. ಆಕರ್ಷಕ ಸೆಲ್ಫಿಗಳು ಮತ್ತು ವೀಡಿಯೊ ಕರೆಗಾಗಿ 50MP ಮುಂಭಾಗದ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಬ್ಯಾಟರಿಯ ಬಗ್ಗೆ ಹೇಳುವುದಾದರೆ ಈ ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು ಇದು 45W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.