ಶೀಘ್ರದಲ್ಲೇ ಲಾಂಚ್ ಆಗಲಿದೆ ಹೊಸ Redmi Note 17 ಮೊಬೈಲ್ ಸರಣಿ! ನಿರೀಕ್ಷಿತ ಫೀಚರ್ಸ್ ಹೀಗಿವೆ
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ ರೆಡ್ಮಿ ನೋಟ್ 17 ಮೊಬೈಲ್ ಸರಣಿ
ರೆಡ್ಮಿ ನೋಟ್ 17 ಪ್ರೊ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿರಲಿದೆ
ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ ಫೋನ್ 10,100mAh ಬ್ಯಾಟರಿ ಬ್ಯಾಕ್‌ಅಪ್‌ನಲ್ಲಿ ಬರಲಿದೆ
ರೆಡ್ಮಿ ಮೊಬೈಲ್ ಕಂಪನಿಯು ಇದೀಗ ನೂತನವಾಗಿ Redmi Note 17 series ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಮುಂಬರುವ ಈ ಸ್ಮಾರ್ಟ್‌ಫೋನ್ ಸರಣಿಯು ಈ ಹಿಂದಿನ ರೆಡ್ಮಿ ನೋಟ್ 16 ಸರಣಿಯ ಉತ್ತರಾಧಿಕಾರಿ ಎನ್ನಲಾಗಿದೆ. ಈ ಫೋನ್ ಸರಣಿಯು ರೆಡ್ಮಿ ನೋಟ್ 17, ರೆಡ್ಮಿ ನೋಟ್ 17 ಪ್ರೊ ಹಾಗೂ ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ ಮಾಡೆಲ್‌ಗಳನ್ನು ಒಳಗೊಂಡಿರುವ ನಿರೀಕ್ಷೆಗಳು ಇವೆ. ಅಂದಹಾಗೆ ಈ ಸರಣಿಯ ಸ್ಟ್ಯಾಂಡರ್ಡ್ ವೇರಿಯಂಟ್ ಮೊಬೈಲ್ ಕ್ವಾಲ್ಕಾಮ್ ನ ಸ್ನಾಪ್ಡ್ರಾಗನ್ 4 ಜೆನ್ 5 ಚಿಪ್ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಇನ್ನು ಈ ಫೋನ್ 9,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಬಹುದು ಎನ್ನಲಾಗಿದೆ. ಹಾಗಾದರೆ ರೆಡ್ಮಿ ನೋಟ್ 17 ಮೊಬೈಲ್ ಸರಣಿಯ ಲಾಂಚ್ ಮಾಹಿತಿ, ನಿರೀಕ್ಷಿತ ಬೆಲೆ, ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಫೋಟೋ ಎಡಿಟಿಂಗ್‌ಗೆ ಹೆಚ್ಚಿನ ಸಮಯ ಬೇಕಿಲ್ಲ! AI ಸಾಮಾನ್ಯ ಫೋಟೋವನ್ನು ಅದ್ಭುತವಾಗಿಸುತ್ತದೆ
ಶೀಘ್ರದಲ್ಲೇ Redmi Note 17 series ಬಿಡುಗಡೆ
ರೆಡ್ಮಿ ಮೊಬೈಲ್ ಕಂಪನಿಯ ಹೊಸ ರೆಡ್ಮಿ ನೋಟ್ 17 ಸರಣಿಯಲ್ಲಿನ ಸ್ಟ್ಯಾಂಡರ್ಡ್ ವೇರಿಯಂಟ್ ಮೊಬೈಲ್ ಇದೇ ಜುಲೈ 19 ರಂದು ಭಾರತೀಯ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳು ಇವೆ. ರೆಡ್ಮಿ ಇನ್ನೂ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಅದಾಗ್ಯೂ, ಈ ಫೋನ್ 8GB + 128GB ವೇರಿಯಂಟ್ ಸುಮಾರು 34,990 ರೂ.ಗಳ ಪ್ರೈಸ್‌ಟ್ಯಾಗ್‌ನೊಂದಿಗೆ ಎಂಟ್ರಿ ಕೊಡುವ ನಿರೀಕ್ಷೆಗಳು ಇವೆ. ರೆಡ್ಮಿ ನೋಟ್ 17 ಪ್ರೊ ಫೋನಿನ ಬೆಲೆ 39,999 ರೂ.ಗಳ ಆಸುಪಾಸಿನಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ ದರವು .47,999 ರೂ.ಗಳು ಆಗಿರಬಹುದು ಎನ್ನಲಾಗಿದೆ.

ರೆಡ್ಮಿ ನೋಟ್ 17 ಸರಣಿ ನಿರೀಕ್ಷಿತ ಫೀಚರ್ಸ್ ಮಾಹಿತಿ
ಈ ಸರಣಿಯ ರೆಡ್ಮಿ ನೋಟ್ 17 ಫೋನ್ 6.83 ಇಂಚಿನ ಫ್ಲಾಟ್ 1.5K OLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಈ ಫೋನ್ 67W ವೈರ್ಡ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 9,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿರಬಹುದು ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 16 ಆಧಾರಿತ ಹೈಪರ್ಓಎಸ್ 3.1 ಅನ್ನು ರನ್ ಮಾಡುತ್ತದೆ ಎಂದು ಲೀಕ್ ಮಾಹಿತಿಗಳು ಸೂಚಿಸುತ್ತಿವೆ. ಇನ್ನು ರೆಡ್ಮಿ ನೋಟ್ 17 ಪ್ರೊ ಫೋನ್ ಡಿಸ್‌ಪ್ಲೇಯು 3,500 nits ಬ್ರೈಟ್ನೆಸ್ ಸಪೋರ್ಟ್ ಹೊಂದಿರಬಹುದು.
ರೆಡ್ಮಿ ನೋಟ್ 17 ಮೊಬೈಲ್ 50MP ಪ್ರಾಥಮಿಕ ಸೆನ್ಸಾರ್ ಒಳಗೊಂಡಿರುವ ಸೂಚನೆಗಳು ಇವೆ. ರೆಡ್ಮಿ ನೋಟ್ 17 ಪ್ರೊ ಮೊಬೈಲ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿರಲಿದೆ. ಹಾಗೆಯೇ ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ 200MP ಪ್ರಾಥಮಿಕ ಕ್ಯಾಮೆರಾ ಒಳಗೊಂಡಿರಲಿದೆ ಎನ್ನಲಾಗಿದೆ. ಇದರೊಂದಿಗೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7500 ಚಿಪ್‌ಸೆಟ್ ಪ್ರೊಸೆಸರ್ ಹಾಗೂ 10,100mAh ಬ್ಯಾಟರಿ ಬ್ಯಾಕ್‌ಅಪ್ ಪವರ್ ಅನ್ನು ಒಳಗೊಂಡಿರಬಹುದು ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
