ರೆಡ್ಮಿ ಮೊಬೈಲ್ ಕಂಪನಿಯು ಹೊಸದಾಗಿ Redmi Note 17 5G ಮೊಬೈಲ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ರೆಡ್ಮಿ ಸಂಸ್ಥೆಯ ನೂತನ ರೆಡ್ಮಿ ನೋಟ್ 17 ಮೊಬೈಲ್ ಅನ್ನು ಅದೇ ಆಗಷ್ಟ್ 6 ರಂದು ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಈ ಮೊಬೈಲ್ ಲಾಂಚ್ ಕುರಿತಾಗಿ ಈಗಾಗಲೇ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಹಾಗೆಯೇ ರೆಡ್ಮಿ ನೋಟ್ 17 ಮೊಬೈಲ್ 8,000mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿರುವ ನಿರೀಕ್ಷೆಗಳಿವೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 4 Gen 4 SoC ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ಸಾಧ್ಯತೆಗಳು ಇವೆ. ಟೆಕ್ಸ್ಚರ್ಡ್ ಪ್ಯಾನೆಲ್ ಅನ್ನು ಒಳಗೊಂಡಂತೆ ಕಾಣುವ ಈ ಫೋನ್ ಲೈಟ್ ಬ್ಲೂ ಹಾಗೂ ಪರ್ಪಲ್ ಕಲರ್ ಆಯ್ಕೆಯಲ್ಲಿ ಬರುವ ನಿರೀಕ್ಷೆಗಳು ಇವೆ. ಹಾಗಾದರೇ ರೆಡ್ಮಿ ನೋಟ್ 17 ಮೊಬೈಲ್‌ನ ಇತರೆ ನಿರೀಕ್ಷಿತ ಲಾಂಚ್ ಹಾಗೂ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.
Also Read : 6,000mAh ಬ್ಯಾಟರಿ ಇರುವ Lava Bold N2 ಮೊಬೈಲ್ ಈಗ ಸಸ್ತಾ ಬೆಲೆಯಲ್ಲಿ ಲಭ್ಯ!
ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಡಲಿರುವ ರೆಡ್ಮಿ ನೋಟ್ 17 ಸ್ಮಾರ್ಟ್‌ಫೋನ್‌ನ ನಿರೀಕ್ಷಿತ ಫೀಚರ್ಸ್ ಗ್ರಾಹಕರ ಕುತೂಹಲ ಹೆಚ್ಚಿಸಿವೆ. ಈ ಫೋನ್ ಇದೇ ಆಗಷ್ಟ್ 6 ರಂದು ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಈ ಮೊಬೈಲ್ ಲಾಂಚ್ ಕುರಿತಾಗಿ ಈಗಾಗಲೇ ಅಮೆಜಾನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಲೈವ್ ಮಾಡಲಾಗಿದೆ. ಇನ್ನು ಈ ಫೋನ್ ಲೈಟ್ ಬ್ಲೂ ಹಾಗೂ ಪರ್ಪಲ್ ಕಲರ್ ಆಯ್ಕೆಯಲ್ಲಿ ಲಭ್ಯವಾಗಬಹುದು ಎನ್ನಲಾಗಿದೆ. ಇನ್ನು ಈ ಫೋನ್ 30,000 ರೂ.ಗಳ ಆಸುಪಾಸಿನ ಬೆಲೆ ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.
ಮುಂಬರುವ ಹೊಸ ರೆಡ್ಮಿ ನೋಟ್ 17 ಮೊಬೈಲ್ ಟ್ರೂ ಕಲರ್ ಅನ್ನು ಒಳಗೊಂಡಿರುವ AMOLED ಪ್ಯಾನಲ್ ಹೊಂದಿರಲಿದೆ. ಹಾಗೆಯೇ ಈ ಫೋನ್ 7 ಇಂಚಿನ ಡಿಸ್‌ಪ್ಲೇ ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದ್ದು, ಇದರ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಹೊಂದಿರಲಿದೆ ಎಂದು ಹೇಳಲಾಗಿದೆ. ಈ ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 4 Gen 4 SoC ಚಿಪ್‌ಸೆಟ್ ಪ್ರೊಸೆಸರ್ ಪವರ್ ಇರಬಹುದು. ಇದಕ್ಕೆ ಪೂರಕವಾಗಿ 8GB RAM ಆಯ್ಕೆಯ ವೇರಿಯಂಟ್ ಇರುವ ಸಾಧ್ಯತೆ ಇದೆ.
ಹಾಗೆಯೇ ರೆಡ್ಮಿ ನೋಟ್ 17 ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿರುವ ನಿರೀಕ್ಷೆಗಳು ಇವೆ. ಇನ್ನು ಇದರ ಬ್ಯಾಟರಿ ವಿಭಾಗವೂ ಈ ಫೋನ್‌ನ ಪ್ರಮುಖ ಆಕರ್ಷಣೆಯಾಗಿದ್ದು, 8,000mAh ಸಾಮರ್ಥ್ಯದ ಬೃಹತ್ ಬ್ಯಾಟರಿ ನೀಡಲಾಗಬಹುದು ಎಂಬ ಮಾಹಿತಿ ಹೊರಬಿದ್ದಿದೆ. ಈ ಬ್ಯಾಟರಿ ದೀರ್ಘಕಾಲದ ಬಳಕೆಯನ್ನು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದೆ.