ರೆಡ್‌ ಕಲರ್‌ನಲ್ಲಿ ಎಂಟ್ರಿ ಕೊಡಲಿದೆ ಹೊಸ Redmi Note 15 SE 5G ಫೋನ್‌! ಲಾಂಚ್‌ ಡೇಟ್‌ ನೋಡಿ

HIGHLIGHTS

ಏಪ್ರಿಲ್‌ 2 ರಂದು ರೆಡ್ಮಿ ನೋಟ್‌ 15 SE 5G ಭಾರತದಲ್ಲಿ ಲಾಂಚ್

ರೆಡ್ಮಿ ನೋಟ್‌ 15 SE 5G ಫೋನ್ ರೆಡ್‌ ಕಲರ್‌ ಆಯ್ಕೆ ಪಡೆದಿರಲಿದೆ

ಮುಂಬರುವ ಈ ಮೊಬೈಲ್‌ ಕುರಿತು ಫ್ಲಿಪ್‌ಕಾರ್ಟ್‌ನಲ್ಲಿ ಮೈಕ್ರೋಸೈಟ್ ತೆರೆಯಲಾಗಿದೆ

ರೆಡ್‌ ಕಲರ್‌ನಲ್ಲಿ ಎಂಟ್ರಿ ಕೊಡಲಿದೆ ಹೊಸ Redmi Note 15 SE 5G ಫೋನ್‌! ಲಾಂಚ್‌ ಡೇಟ್‌ ನೋಡಿ

ರೆಡ್ಮಿ ಕಂಪನಿಯು ಈ ವರ್ಷದ ಆರಂಭದಲ್ಲಿ Redmi Note 15 5G ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಕಂಪನಿಯು ಇದೇ ಏಪ್ರಿಲ್ ಮೊದಲ ವಾರದಲ್ಲಿ ಭಾರತದಲ್ಲಿ ಹೊಸದಾಗಿ Redmi Note 15 SE 5G ಹೆಸರಿನ ಸ್ಪೆಷಲ್‌ ಎಡಿಷನ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಮೊಬೈಲ್‌ ಲಾಂಚ್‌ ಕುರಿತಾಗಿ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಮೀಸಲಾದ ಮೈಕ್ರೋಸೈಟ್ ಅನ್ನು ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಮಾಡಲಾಗಿದೆ. ಇನ್ನು ಮುಂಬರುವ ಈ ಫೋನ್‌ ಹಿಂಭಾಗದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದುವ ನಿರೀಕ್ಷೆಯಿದೆ. ಅಲ್ಲದೇ ವಿಶೇಷ ರೆಡ್‌ ಕಲರ್‌ ಆಯ್ಕೆಯೊಂದಿಗೆ ಗ್ರ್ಯಾಂಡ್‌ ಎಂಟ್ರಿ ಕೊಡುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಹಾಗಾದರೆ ರೆಡ್ಮಿ ನೋಟ್‌ 15 SE 5G ಮೊಬೈಲ್‌ನ ಲಾಂಚ್‌ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಕಡಿಮೆ ಬೆಲೆಯ POCO C85 5G ಮೊಬೈಲ್‌ ಈಗ ಇನ್ನಷ್ಟು ಅಗ್ಗದ ದರದಲ್ಲಿ ಲಭ್ಯ! ಈ ಆಫರ್‌ ನೋಡಿ

Redmi Note 15 SE 5G ಮೊಬೈಲ್‌ ಬಿಡುಗಡೆಯ ಮಾಹಿತಿ

ರೆಡ್ಮಿ ಸಂಸ್ಥೆಯ ಮುಂಬರುವ ನೂತನ ರೆಡ್ಮಿ ನೋಟ್‌ 15 SE 5G ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಕುತೂಹಲ ಹೆಚ್ಚಿಸಿದೆ. ಅಂದಹಾಗೆ ಈ ಮೊಬೈಲ್‌ ಇದೇ ಏಪ್ರಿಲ್‌ 2 ರಂದು ಮಧ್ಯಾಹ್ನ 12 ಗಂಟೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗುವುದು ಪಕ್ಕಾ ಆಗಿದೆ. ಬಿಡುಗಡೆ ಬಳಿಕ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಈ ಫೋನ್‌ ಖರೀದಿಗೆ ಲಭ್ಯವಿರುತ್ತದೆ. ಅಂದಹಾಗೆ ಈ ಫೋನ್‌ ರೆಡ್‌ ಕಲರ್‌ ಆಯ್ಕೆಯೊಂದಿಗೆ ಲಗ್ಗೆ ಇಡಲಿದೆ ಜೊತೆಗೆ ಫ್ರೇಮ್‌ ಗೋಲ್ಡ್‌ ಬಣ್ಣಗಳಲ್ಲಿ ಇರುವ ಸಾಧ್ಯತೆಗಳು ಇವೆ. ಇನ್ನು ಈ ಮೊಬೈಲ್‌ ಬೆಲೆ ಭಾರತದಲ್ಲಿ ಬಜೆಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

Redmi Note 15 SE

ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ ರೆಡ್ಮಿ ನೋಟ್ 15 5G ಫೋನ್‌ 6.77 ಇಂಚಿನ ಕರ್ವ್ಡ AMOLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 120Hz ರಿಫ್ರೆಶ್‌ ರೇಟ್‌ ಹೊಂದಿದ್ದು ಜೊತೆಗೆ ಇದು 3200 nits ಬ್ರೈಟ್ನೆಸ್‌ ಸಪೋರ್ಟ್‌ ಸಹ ಹೊಂದಿದೆ. ಇನ್ನು ಈ ಮೊಬೈಲ್‌ ಸ್ನಾಪ್‌ಡ್ರಾಗನ್ 6 Gen 3 ಚಿಪ್‌ಸೆಟ್‌ ಪ್ರೊಸೆಸರ್‌ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ.

ಅಲ್ಲದೇ ರೆಡ್ಮಿ ನೋಟ್ 15 5G ಮೊಬೈಲ್‌ ಹಿಂಭಾಗದಲ್ಲಿ 108MP OIS ಮಾಸ್ಟರ್‌ಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದ್ದು, ಹೈ ರೆಸಲ್ಯೂಶನ್ ಫೋಟೋಗಳನ್ನು ಶೂಟ್ ಮಾಡುತ್ತದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಮೊಬೈಲ್‌ 20MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್‌ 5G ಸಪೋರ್ಟ್, IR ರಿಮೋಟ್ ಕಂಟ್ರೋಲ್ ಮತ್ತು Google Gemini ಮತ್ತು Circle to Search ನಂತಹ AI ಫೀಚರ್ಸ್‌ಗಳನ್ನು ಸಹ ಪಡೆದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo