Redmi A7 Pro 5G ದರದಲ್ಲಿ ಬೊಂಬಾಟ್‌ ಇಳಿಕೆ! ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯ

HIGHLIGHTS

ರೆಡ್ಮಿ A7 ಪ್ರೊ 5G ಸ್ಮಾರ್ಟ್‌ಫೋನ್‌ ಸಖತ್ ರಿಯಾಯಿತಿಯಲ್ಲಿ ಲಭ್ಯ

ರೆಡ್ಮಿಯ ಈ ಫೋನ್‌ 6,300mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಅನ್ನು ಪಡೆದಿದೆ

ರೆಡ್ಮಿ ಕಂಪನಿಯ ಈ ಫೋನ್‌ ಆಕ್ಟಾ ಕೋರ್ Unisoc T8300 ಪ್ರೊಸೆಸರ್‌ ಹೊಂದಿದೆ

Redmi A7 Pro 5G ದರದಲ್ಲಿ ಬೊಂಬಾಟ್‌ ಇಳಿಕೆ! ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯ

ಪ್ರಮುಖ ರೆಡ್ಮಿ ಕಂಪನಿಯ Redmi A7 Pro 5G ಸ್ಮಾರ್ಟ್‌ಫೋನ್‌ ಅಗ್ಗದ ದರದ ಮೂಲಕ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಪ್ರಸ್ತುತ ಈ ಫೋನ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಭಾರೀ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್‌ ಮೂಲಕ ಈ ಮೊಬೈಲ್‌ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ. ಸಂಸ್ಥೆಯ ಈ ಮೊಬೈಲ್‌ ಆಕ್ಟಾ-ಕೋರ್ Unisoc T8300 ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಫೋನ್‌ 6,300mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಫೋನ್‌ ಬ್ಲ್ಯಾಕ್‌, ಮಿಸ್ಟ್ ಬ್ಲೂ ಮತ್ತು ಸನ್‌ಸೆಟ್ ಆರೆಂಜ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ರೆಡ್ಮಿ A7 ಪ್ರೊ 5G ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಶೀಘ್ರದಲ್ಲೇ 10,000mAh ಬ್ಯಾಟರಿಯೊಂದಿಗೆ ಭಾರತಕ್ಕೆ ಲಗ್ಗೆ ಇಡಲಿದೆ OPPO F35 Pro ಸ್ಮಾರ್ಟ್‌ಫೋನ್‌!

Redmi A7 Pro 5G ದರದಲ್ಲಿ ಭರ್ಜರಿ ಇಳಿಕೆ

ಆಕರ್ಷಕ ಪ್ರೈಸ್‌ಟ್ಯಾಗ್‌ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ರೆಡ್ಮಿ A7 ಪ್ರೊ 5G ಮೊಬೈಲ್‌ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಸಖತ್ ರಿಯಾಯಿತಿ ಪಡೆದುಕೊಂಡಿದೆ. ಈ ಮೊಬೈಲ್‌ 4GB RAM + 64GB ಸ್ಟೋರೇಜ್ ವೇರಿಯಂಟ್‌ ಬೆಲೆ 26,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್‌ 13,499 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್‌ ಬ್ಲ್ಯಾಕ್‌, ಮಿಸ್ಟ್ ಬ್ಲೂ ಮತ್ತು ಸನ್‌ಸೆಟ್ ಆರೆಂಜ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ.

Redmi A7 Pro 5G

ರೆಡ್ಮಿ A7 ಪ್ರೊ 5G ಫೋನಿನ ಫೀಚರ್ಸ್‌

ರೆಡ್ಮಿ A7 ಪ್ರೊ 5G ಸ್ಮಾರ್ಟ್‌ಫೋನ್‌ 6.9 ಇಂಚಿನ HD+ LCD ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ ಇದರ ಸ್ಕ್ರೀನ್‌ 120Hz ವರೆಗೆ ರಿಫ್ರೆಶ್ ರೇಟ್‌ ಅನ್ನು ಪಡೆದಿದೆ. ಇದರ ಡಿಸ್‌ಪ್ಲೇಯು 800 nits ಪೀಕ್‌ ಬ್ರೈಟ್ನೆಸ್‌ ಬೆಂಬಲ ಹೊಂದಿದೆ. ಇದರೊಂದಿಗೆ ಈ ಫೋನ್‌ ಆಕ್ಟಾ-ಕೋರ್ Unisoc T8300 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಒಳಗೊಂಡಿದೆ.

ಹಾಗೆಯೇ ರೆಡ್ಮಿ A7 ಪ್ರೊ 5G ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರ ಮೊದಲ ಕ್ಯಾಮೆರಾವು 32 ಮೆಗಾಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದಲ್ಲಿ ಇದೆ ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ರಚನೆ ಹೊಂದಿದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಮೊಬೈಲ್‌ 8 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್‌ 6,300mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 15W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಅನ್ನು ಪಡೆದುಕೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile