ಶೀಘ್ರದಲ್ಲೇ 10,000mAh ಬ್ಯಾಟರಿಯೊಂದಿಗೆ ಭಾರತಕ್ಕೆ ಲಗ್ಗೆ ಇಡಲಿದೆ OPPO F35 Pro ಸ್ಮಾರ್ಟ್‌ಫೋನ್‌!

ಶೀಘ್ರದಲ್ಲೇ 10,000mAh ಬ್ಯಾಟರಿಯೊಂದಿಗೆ ಭಾರತಕ್ಕೆ ಲಗ್ಗೆ ಇಡಲಿದೆ OPPO F35 Pro ಸ್ಮಾರ್ಟ್‌ಫೋನ್‌!

ಒಪ್ಪೋ ಕಂಪನಿಯು ಒಪ್ಪೋ F33 ಸರಣಿಯ ಯಶಸ್ಸಿನ ಬೆನ್ನಲ್ಲೇ ಇದೀಗ ಮತ್ತೆ ಹೊಸದಾಗಿ OPPO F35 Pro ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ಒಪ್ಪೋ ಸಂಸ್ಥೆಯು ತನ್ನ ನೂತನ ಮೊಬೈಲ್‌ ಅನ್ನು ಆಗಷ್ಟ್‌ ತಿಂಗಳ ಅಂತ್ಯದೊಳಗೆ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಮುಂಬರುವ ಹೊಸ ಒಪ್ಪೋ F35 ಪ್ರೊ ಮೊಬೈಲ್‌ 10,000mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿರುವುದು ಬಹುತೇಕ ಪಕ್ಕಾ ಆಗಿದೆ. ಹಾಗೆಯೇ ಈ ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್‌ 5 ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ಸಾಧ್ಯತೆಗಳು ಇವೆ. ಇದು ಆಕರ್ಷಕ ಕಲರ್‌ ಆಯ್ಕೆ ಪಡೆದಿರಲಿರುವ ಜೊತೆಗೆ OLED ಡಿಸ್‌ಪ್ಲೇ ಪಡೆದಿರುವ ನಿರೀಕ್ಷೆಗಳು ಇವೆ. ಹಾಗಾದರೇ ಒಪ್ಪೋ F35 ಪ್ರೊ ಮೊಬೈಲ್‌ನ ಇತರೆ ನಿರೀಕ್ಷಿತ ಲಾಂಚ್‌ ಹಾಗೂ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.

Digit.in Survey
✅ Thank you for completing the survey!

Also Read : Samsung Galaxy F70 Pro vs OnePlus N6: ಈ ಎರಡು ಫೋನ್‌ಗಳಲ್ಲಿ ಖರೀದಿಗೆ ಯಾವುದು ಬೆಸ್ಟ್‌

ಶೀಘ್ರದಲ್ಲೇ ಬರಲಿದೆ OPPO F35 Pro

ದೇಶೀಯ ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಡಲಿರುವ ಒಪ್ಪೋ F35 ಪ್ರೊ ಮೊಬೈಲ್‌ನ ನಿರೀಕ್ಷಿತ ಫೀಚರ್ಸ್‌ ಗ್ರಾಹಕರ ಕುತೂಹಲ ಹೆಚ್ಚಿಸಿವೆ. ಈ ಸ್ಮಾರ್ಟ್‌ಫೋನ್‌ ಇದೇ ಆಗಷ್ಟ್‌ ತಿಂಗಳ ಅಂತ್ಯದೊಳಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ ಮೊಬೈಲ್‌ ಮೀಡ್‌ರೇಂಜ್‌ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಇಡುವ ನಿರೀಕ್ಷೆಗಳು. ಈ ಮೊಬೈಲ್‌ ಆಕರ್ಷಕ ಕಲರ್‌ ಆಯ್ಕೆಯಲ್ಲಿ ಬರಲಿದೆ.

OPPO F35 pro Could Debut in India by August-End Here s What to Expect

ಒಪ್ಪೋ F35 ಪ್ರೊ ಮೊಬೈಲ್‌ ಫೀಚರ್ಸ್‌

ಮುಂಬರುವ ಹೊಸ ಒಪ್ಪೋ F35 ಪ್ರೊ ಮೊಬೈಲ್ 6.78 ಇಂಚಿನ 1.5K LTPS OLED ಫ್ಲಾಟ್ ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಹಾಗೆಯೇ ಇದರ ಡಿಸ್‌ಪ್ಲೇಯು 120Hz ರಿಫ್ರೆಶ್‌ ರೇಟ್‌ ಹೊಂದಿರಲಿದೆ ಎಂದು ಹೇಳಲಾಗಿದೆ. ಈ ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜೆನ್‌ 5 ಚಿಪ್‌ಸೆಟ್ ಪ್ರೊಸೆಸರ್ ಪವರ್‌ ಇರಬಹುದು. ಇದಕ್ಕೆ ಪೂರಕವಾಗಿ 128GB ಬೇಸ್ ಸ್ಟೋರೇಜ್ ಆಯ್ಕೆಯ ವೇರಿಯಂಟ್‌ ಇರುವ ಸಾಧ್ಯತೆ ಇದೆ.

ಹಾಗೆಯೇ ಒಪ್ಪೋ F35 ಪ್ರೊ ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಪಡೆದಿರುವ ನಿರೀಕ್ಷೆಗಳು ಇವೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಇನ್ನು ಇದರ ಬ್ಯಾಟರಿ ವಿಭಾಗವೂ ಈ ಫೋನ್‌ನ ಪ್ರಮುಖ ಆಕರ್ಷಣೆಯಾಗಿದ್ದು, 10,000mAh ಸಾಮರ್ಥ್ಯದ ಬೃಹತ್ ಬ್ಯಾಟರಿ ನೀಡಲಾಗಬಹುದು ಎಂಬ ಮಾಹಿತಿ ಹೊರಬಿದ್ದಿದೆ. ಈ ಬ್ಯಾಟರಿ ದೀರ್ಘಕಾಲದ ಬಳಕೆಯನ್ನು ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile