Samsung OnePlus Redmi Lava smartphone best deals on Amazon GIF early deals
ಭಾರತದಲ್ಲಿ ರೆಡ್ಮಿ ಸ್ಮಾರ್ಟ್ಫೋನ್ ಬ್ರಾಂಡ್ ಇಂದು ತನ್ನ ಲೇಟೆಸ್ಟ್ Redmi 15 ಸ್ಮಾರ್ಟ್ ಫೋನ್ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ಫೋನ್ ಹೊಸ ಮತ್ತು ಇಂಟ್ರೆಸ್ಟಿಂಗ್ ಫೀಚರ್ಗಳೊಂದಿಗೆ ಪ್ಯಾಕ್ ಆಗಿದೆ. ಇದರ ವಿಶೇಷತೆಗಳನ್ನು ನೋಡುವುದಾದರೆ ಸ್ಮಾರ್ಟ್ ಫೋನ್ 7000mAh ಬ್ಯಾಟರಿ, Snapdragon ಚಿಪ್ ಮತ್ತು 50MP ಡ್ಯುಯಲ್ ಕ್ಯಾಮೆರಾದೊಂದಿಗೆ ಬರುತ್ತದೆ. ಅಲ್ಲದೆ ಈ Redmi 15 ಸ್ಮಾರ್ಟ್ ಫೋನ್ ಆರಂಭಿಕ 6GB ಮಾದರಿ ಕೇವಲ 14,999 ರೂಗಳಿಗೆ ಬಿಡುಗಡೆಯಾಗಿದೆ. ನೀವು ಈ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಮೊದಲು ಇದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪರಿಶೀಲಿಸಿ ನಂತರ ಖರೀದಿಯನ್ನು ನಿರ್ಧರಿಸಬಹುದು.
ಭಾರತದಲ್ಲಿ ಬಿಡುಗಡೆಯಾದ ಈ ಹೊಸ ಸ್ಮಾರ್ಟ್ಫೋನ್ ಖರೀದಿಸಲು ಸುಮಾರು 15,000 ರೂಗಳನ್ನು ನೀಡುವುದು ಎಷ್ಟು ಉತ್ತಮ ಎನ್ನುವ ಪ್ರಶ್ನೆ ನಿಮಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಈ ಸ್ಮಾರ್ಟ್ಫೋನ್ ಬರೋಬ್ಬರಿ 6.9 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದ್ದು ಗರಿಷ್ಠ 1080 ಪಿಕ್ಸೆಲ್ ರೆಸಲ್ಯೂಷನ್ ಸಪೋರ್ಟ್ ಮಾಡುತ್ತದೆ.
ನೀವು ಹೆಚ್ಚು ಸಿನಿಮಾ ನೋಡೋದು, ಸೋಶಿಯಲ್ ಮೀಡಿಯಾ ವಿಡಿಯೋಗಳನ್ನು ಹೆಚ್ಚಾಗಿ ವೀಕ್ಷಿಸೋದು ಮತ್ತು ಹೆಚ್ಚಿನ ಫೋಟೋಗಳನ್ನು ಕ್ಲಿಕ್ ಮಾಡುವವರಾಗಿದ್ದರೆ ಇದನ್ನು ಪರಿಗಣಿಸಬಹುದು. ಯಾಕೆಂದರೆ ಇದರಲ್ಲಿನ 7000 mAh ಬ್ಯಾಟರಿ ಪೂರ್ತಿ ದಿನ ಕಳೆಯಲು ಸಹಕರಿಸುತ್ತದೆ. ಈ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಹತ್ತಾರು ಆಯ್ಕೆಗಳಿವೆ ಆದರೆ ಇಷ್ಟು ದೊಡ್ಡ ಡಿಸ್ಪ್ಲೇ ಮತ್ತು ಬ್ಯಾಟರಿಯ ಸಂರಚನೆಯಲ್ಲಿ ಬೇರೊದಿಲ್ಲ ಅನ್ನೋದು ಮಾತ್ರ ಸತ್ಯ.
Also Read: ಭಾರತೀಯರಿಗೆ ChatGPT Go ಪರಿಚಯಿಸಿದ OpenAI: ಪ್ರಯೋಜನಗಳೇನು? ಬೆಲೆ ಎಷ್ಟು? ಮತ್ತು ಪಡೆಯೋದು ಹೇಗೆ?
ಭಾರತದಲ್ಲಿ ಇಂದು ಬಿಡುಗಡೆಯಾದ ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹14,499 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹15,999 ರೂಗಳಿಗೆ ಮತ್ತು ಕೊನೆಯದಾಗಿ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹16,999 ರೂಗಳಿಗೆ ಬಿಡುಗಡೆಗೊಳಿಸಲಾಗಿದೆ.
ಆದರೆ ಸೈಟ್ ಕೇವಲ ಎರಡು ಮಾದರಿಗಳನ್ನು ಮಾತ್ರ ಮಪಟ್ಟಿ ಮಾಡಿದೆ. ಸ್ಮಾರ್ಟ್ಫೋನ್ ಇದೆ ತಿಂಗಳು 28ನೇ ಆಗಸ್ಟ್ 2025 ರಂದು ಮಧ್ಯಾಹ್ನ 12 ಗಂಟೆಗೆ ಮಾಡ್ ಅಲ ಮಾರಾಟ mi.com, AMazon Special Xiaomi Retail ಮೂಲಕ ಲಭ್ಯವಾಗಲಿದೆ. ಸ್ಮಾರ್ಟ್ಫೋನ್ Midnight Black, Frosted White ಮತ್ತು Sandy Purple ಬಣ್ಣಗಳಲ್ಲಿ ಖರೀದಿಸಬಹುದು.
Redmi 15 ಸ್ಮಾರ್ಟ್ಫೋನ್ 6.9 ಇಂಚಿನ FHD+ (2340×1080 ಪಿಕ್ಸೆಲ್‌ಗಳು) ಡಿಸ್ಪ್ಲೇ ಪೂರ್ತಿ 144Hz ರಿಫ್ರೆಶ್ ರೇಟ್ ಹೊಂದಿದೆ. ಸ್ಮಾರ್ಟ್ ಫೋನ್ ಕ್ಯಾಮೆರಾದಲ್ಲಿ 50MP ಪ್ರೈಮರಿ ಸೆನ್ಸರ್ ಹೊಂದಿದ್ದು AI ಬೆಂಬಲಿತ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 8MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
Redmi 15 ಫೋನ್ Snapdragon 6s Gen 3 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port, eSIM Support, AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ.
ಕೊನೆಯದಾಗಿಸ್ಮಾರ್ಟ್ಫೋನ್ 7000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಕಂಪನಿ ಇದರಲ್ಲಿ 2 ವರ್ಷದ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ನೀಡುವುದಾಗಿ ಭರವಸೆ ನೀಡಿದೆ. ಫೋನ್ IP64 ರೇಟಿಂಗ್ ಜೊತೆಗೆ ಬರುತ್ತದೆ.