12GB RAM ಮತ್ತು 6000mAh ಬ್ಯಾಟರಿವುಳ್ಳ Realme P3 Ultra 5G ಬಿಡುಗಡೆಗೆ ಡೇಟ್ ಫಿಕ್ಸ್ ಆಗೋಯ್ತು!

Updated on 11-Mar-2025
HIGHLIGHTS

ಮುಂಬರಲಿರುವ ಹೊಸ Realme P3 Ultra 5G ಅನ್ನು ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

Realme P3 Ultra 5G ಇದೆ 19ನೇ ಮಾರ್ಚ್ 2025 ರಂದು ಅನಾವರಣಗೊಳ್ಳಲು ಡೇಟ್ ಕಂಫಾರ್ಮ್ ಆಗಿದೆ.

Realme P3 Ultra 5G ಸ್ಮಾರ್ಟ್ಫೋನ್ 6000mAh ಬ್ಯಾಟರಿ ಮತ್ತು 12GB RAM ಮತ್ತು ಅನೇಕ ಹೊಸ ಫೀಚರ್ ಹೊಂದಿದೆ.

Realme P3 Ultra 5G India Launch: ಚೀನಾದ ಸ್ಮಾರ್ಟ್ಫೋನ್ ಬ್ರಾಂಡ್ ರಿಯಲ್‌ಮಿ (Realme) ತನ್ನ ಮುಂಬರಲಿರುವ ಹೊಚ್ಚ ಹೊಸ Realme P3 Ultra 5G ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಬಗ್ಗೆ ಸ್ವತಃ ಕಂಪನಿ ಟ್ವಿಟ್ಟರ್ ಮೂಲಕ ಪೋಸ್ಟ್ ಮಾಡಿದ್ದೂ ಇದೆ 19ನೇ ಮಾರ್ಚ್ 2025 ರಂದು ಮಧ್ಯಾಹ್ನ 12:00PM ಗಂಟೆಗೆ ಬಿಡುಗಡೆಗೊಳಿಸಲು ಡೇಟ್ ಮತ್ತು ಟೈಮ್ ಕಂಫಾರ್ಮ್ ಮಾಡಿದೆ. ಫೋನ್ ವಿಶೇಷವಾಗಿ Realme P3 Ultra 5G ಸ್ಮಾರ್ಟ್ಫೋನ್ 6000mAh ಬ್ಯಾಟರಿ ಮತ್ತು 12GB RAM ಮತ್ತು ಅನೇಕ ಹೊಸ ಫೀಚರ್ ಹೊಂದಿದೆ.

Realme P3 Ultra 5G India Launch:

ಕಂಪನಿ ಫ್ಲಿಪ್‌ಕಾರ್ಟ್‌ನಲ್ಲಿ ಇದಕ್ಕಾಗಿ ಪ್ರತ್ಯೇಕ ಮೈಕ್ರೋಸೈಟ್ ಪೇಜ್ ಸಹ ಲೈವ್ ಮಾಡಿದ್ದು Realme P3 Ultra 5G ಸ್ಮಾರ್ಟ್ಫೋನ್ ಬಿಡುಗಡೆಗೂ ಮುನ್ನವೇ ಅನೇಕ ಫೀಚರ್ಗಳನ್ನು ಬಹಿರಂಗಗೊಳಿಸಿದೆ. ಅಷ್ಟೇಯಲ್ಲದೆ ಈ ಈವೆಂಟ್​ನಲ್ಲಿ ಕಂಪನಿ ಹೊಸ Realme Buds T200 Lite ಹೊಸ ಇಯರ್‌ಬಡ್ಸ್ ಅನ್ನು ಸಹ ಬಿಡುಗಡೆಗೊಳಿಸುವುದಾಗಿ ತಮ್ಮ ರಿಯಲ್‌ಮಿ (Realme) ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಹಾಗಾದ್ರೆ ಈ ಮುಂಬರಲಿರುವ Realme P3 Ultra 5G ಸ್ಮಾರ್ಟ್ಫೋನ್ ಫೀಚರ್ಗಳೇನು ಮತ್ತು ಇದರ ನಿರೀಕ್ಷಿತ ಆಫರ್ ಬೆಲೆ ಮತ್ತು ಲಭ್ಯತೆಯ ಮಾಹಿತಿಯನ್ನು ತಿಳಿಯಿರಿ.

Realme P3 Ultra 5G india launch Date confirmed

Realme P3 Ultra 5G ನಿರೀಕ್ಷಿತ ಆಫರ್ ಬೆಲೆ ಮತ್ತು ಲಭ್ಯತೆ!

ಈ ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತನಾಡುವುದಾದರೆ ಕಂಪನಿ 12GB RAM ಮತ್ತು 256GB ಸ್ಟೋರೇಜ್ ಅನ್ನು ಇದರ ಫೀಚರ್ಗಳ ಆಧಾರದ ಮೇರೆಗೆ ಆರಂಭಿಕ ಸುಮಾರು ₹20,000 ರೂಗಳಿಂದ ಶುರುವಾಗುವುದಾಗಿ ನಿರೀಕ್ಷಿಸಲಾಗಿದೆ. ಏಕೆಂದರೆ ಈ ಸ್ಮಾರ್ಟ್ಫೋನ್ ಹೊಂದಿರುವ ಫೀಚರ್ ಸರಿ ಸುಮಾರು ಈಗಷ್ಟೇ ಬಿಡುಗಡೆಯಾಗಿ ಅದ್ದೂರಿಯಾಗಿ ಮಾರಾಟವಾಗುತ್ತಿರುವ Nothing Phone (3a) Series ವಿರುದ್ಧವಾಗಿ ಸ್ಪರ್ಧಿಸುವ ನಿರೀಕ್ಷೆಗಳಿವೆ. ಅಲ್ಲದೆ Realme P3 Ultra 5G ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಮಾರಾಟಕ್ಕೆ ಲಭ್ಯವಾಗಲಿದೆ.

Also Read: BSNL ಗ್ರಾಹಕರು ತಿಂಗಳಿಗೆ ಕೇವಲ 125 ರೂಗಳನ್ನು ಖರ್ಚು ಮಾಡಿ ವರ್ಷಪೂರ್ತಿ Unlimited Calls ಮತ್ತು Data ಆನಂದಿಸಿ!

Realme P3 Ultra 5G ನಿರೀಕ್ಷಿತ ಫೀಚರ್ಗಳೇನು?

Realme P3 Ultra 5G ಸ್ಮಾರ್ಟ್ಫೋನ್ MediaTek Dimensity 8350 Ultra ಚಿಪ್‌ಸೆಟ್‌ನೊಂದಿಗೆ ವಿಶ್ವದ ಮೊದಲ ಹ್ಯಾಂಡ್‌ಸೆಟ್ ಆಗಿದೆ. ಇದು 1.45 ಮಿಲಿಯನ್‌ಗಿಂತಲೂ ಹೆಚ್ಚಿನ ಆನ್‌ಟುಟು ಸ್ಕೋರ್ ಅನ್ನು ಸಾಧಿಸಿದೆ. ಸ್ಮಾರ್ಟ್ಫೋನ್ GT Boost ತಂತ್ರಜ್ಞಾನವನ್ನು ಬೆಂಬಲಿಸಲಿದ್ದು ಇದು ಬಳಕೆದಾರರ ಗೇಮಿಂಗ್ ಅನುಭವವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

Realme P3 Ultra 5G

ಸ್ಮಾರ್ಟ್ಫೋನ್ 6050 ವಿಸಿ ಕೂಲಿಂಗ್ ಸಿಸ್ಟಮ್‌ನೊಂದಿಗೆ ಸಜ್ಜುಗೊಂಡಿದೆ ಎಂದು ಕಂಪನಿ ತಿಳಿಸಿದೆ. Realme P3 Ultra 5G ಸ್ಮಾರ್ಟ್ಫೋನ್ ಡಿಸ್‌ಪ್ಲೇ 2,500Hz ವರೆಗಿನ ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ ಬರುತ್ತದೆ. ಈ ಫೋನ್ 6000mAh ಬ್ಯಾಟರಿಯನ್ನು ಹೊಂದಿದ್ದು 80W AI ಬೈಪಾಸ್ ಚಾರ್ಜಿಂಗ್ ತಂತ್ರಜ್ಞಾನದ ಬೆಂಬಲವನ್ನು ಹೊಂದಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :