Realme Narzo 100 Lite 5G ಮೊಬೈಲ್ ಬೆಲೆಯಲ್ಲಿ ಆಕರ್ಷಕ ಇಳಿಕೆ! 7,000mAh ಬ್ಯಾಟರಿ ಹೈಲೈಟ್
ಅಮೆಜಾನ್‌ನಲ್ಲಿ ರಿಯಲ್‌ಮಿ ನಾರ್ಜೋ 100 ಲೈಟ್ ಫೋನಿಗೆ ಬಿಗ್ ಆಫರ್
ರಿಯಲ್‌ಮಿ ಸಂಸ್ಥೆಯ ಈ ಸ್ಮಾರ್ಟ್‌ಫೋನ್ 7,000mAh ಬ್ಯಾಟರಿ ಪಡೆದುಕೊಂಡಿದೆ
ರಿಯಲ್‌ಮಿಯ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಹೊಂದಿದೆ
ಅಮೆಜಾನ್ ತಾಣವು ಆಯೋಜಿಸಿರುವ Amazon Great Freedom Sale 2026 ಮಾರಾಟದಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ರಿಯಾಯಿತಿ ಪಡೆದಿವೆ. ಅವುಗಳ ಪೈಕಿ ಅಗ್ಗದ ರೇಂಜ್‌ನ Realme Narzo 100 Lite 5G ಮೊಬೈಲ್ ಸಹ ಸಖತ್ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿದೆ. ಇದಷ್ಟೇ ಅಲ್ಲದೆ ಕೆಲವು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಇನ್‌ಸ್ಟಂಟ್ ರಿಯಾಯಿತಿ, ಎಕ್ಸ್‌ಚೇಂಜ್ ಕೊಡುಗೆ, ನೋ-ಕಾಸ್ಟ್ EMI ಹಾಗೂ ಕ್ಯಾಶ್‌ಬ್ಯಾಕ್ ಸೌಲಭ್ಯಗಳನ್ನೂ ಗ್ರಾಹಕರು ಪಡೆಯಬಹುದು. ಅಂದಹಾಗೆ ಈ ಮೊಬೈಲ್ ಟ್ರಿಪಲ್ ಕ್ಯಾಮೆರಾ ರಚನೆ ಪಡೆದುಕೊಂಡಿರುವ ಜೊತೆಗೆ 7,000mAh ಬ್ಯಾಟರಿ ಸೌಲಭ್ಯ ಹೊಂದಿದೆ. ಹಾಗಾದರೆ ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್‌ನಲ್ಲಿ ರಿಯಲ್‌ಮಿ ನಾರ್ಜೋ 100 ಲೈಟ್ 5G ಫೋನಿಗೆ ಲಭ್ಯ ಇರುವ ಆಫರ್ ಹಾಗೂ ಫೋನಿನ ಫೀಚರ್ಸ್ ಮುಂದೆ ತಿಳಿಯೋಣ.
SurveyAlso Read : Huawei ಕಂಪನಿಯ ಈ ಹೊಸ ಟ್ಯಾಬ್ಲೆಟ್‌ಗಳು ಈಗ Flipkart ನಲ್ಲಿ ಖರೀದಿಗೆ ಲಭ್ಯ!
Realme Narzo 100 Lite 5G ಬೆಲೆಯಲ್ಲಿ ಇಳಿಕೆ
ಆಕರ್ಷಕ ಫೀಚರ್ಸ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿರುವ ಸ್ಯಾಮ್‌ಸಂಗ್ ಮೊಬೈಲ್ ಕಂಪನಿಯ ರಿಯಲ್‌ಮಿ ನಾರ್ಜೋ 100 ಲೈಟ್ 5G ಮೊಬೈಲ್ ಅಮೆಜಾನ್ ಇ ಕಾಮರ್ಸ್ ಆಯೋಜಿಸಿರುವ ಸೇಲ್‌ನಲ್ಲಿ ಗಮನಾರ್ಹ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ 4GB + 64GB ಸ್ಟೋರೇಜ್ ವೇರಿಯಂಟ್ ಬೆಲೆ 24,999 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 15,499 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಅಂದಹಾಗೆ ಈ ಮೊಬೈಲ್ ಫ್ರಾಸ್ಟ್ ಸಿಲ್ವರ್ ಮತ್ತು ಥಂಡರ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಈ ಫೋನ್ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

ರಿಯಲ್‌ಮಿ ನಾರ್ಜೋ 100 ಲೈಟ್ 5G ಫೋನಿನ ಫೀಚರ್ಸ್
ರಿಯಲ್‌ಮಿ ನಾರ್ಜೋ 100 ಲೈಟ್ 5G ಫೋನ್ 6.8 ಇಂಚಿನ LCD ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ ಇದರ ಸ್ಕ್ರೀನ್ 144Hz ವರೆಗೆ ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಇದರ ಡಿಸ್‌ಪ್ಲೇಯು 900 nits ಪೀಕ್ ಬ್ರೈಟ್ನೆಸ್ ಬೆಂಬಲ ಹೊಂದಿದೆ. ಇದರೊಂದಿಗೆ ಈ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಲ್ಲದೇ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಒಳಗೊಂಡಿದೆ.
ಹಾಗೆಯೇ ರಿಯಲ್‌ಮಿ ನಾರ್ಜೋ 100 ಲೈಟ್ 5G ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದುಕೊಂಡಿವೆ. ಇದರ ಪ್ರಾಥಮಿಕ ಕ್ಯಾಮೆರಾವು 13 ಮೆಗಾಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದಲ್ಲಿ ಇದೆ ಹಾಗೆಯೇ ಸೆಕೆಂಡರಿ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ರಚನೆ ಹೊಂದಿದೆ. ಇನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ ಈ ಮೊಬೈಲ್ 5 ಮೆಗಾಪಿಕ್ಸೆಲ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ 7,000mAh ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 15W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಪಡೆದುಕೊಂಡಿದೆ.
Disclosure: This Article Contains Affiliate Links
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
